ವಿದೇಶ ಪ್ರಯಾಣದ ಇತಿಹಾಸವಿಲ್ಲದ ವ್ಯಕ್ತಿಗೆ ದೆಹಲಿಯಲ್ಲಿ ಮಂಕಿಪಾಕ್ಸ್ ವೈರಸ್‌ ಸೋಂಕು ದೃಢ

ನವದೆಹಲಿ: ದೆಹಲಿಯಲ್ಲಿ ಮೊದಲ ಮಂಕಿಪಾಕ್ಸ್ ವೈರಸ್ ಪ್ರಕರಣ ಪತ್ತೆಯಾಗಿದೆ. ನಗರದ ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿಗೆ ದಾಖಲಾಗಿರುವ ರೋಗಿಗೆ ವಿದೇಶ ಪ್ರವಾಸದ ಮಾಡಿದ ಯಾವುದೇ ಇತಿಹಾಸವಿಲ್ಲ.
ಇದು ಭಾರತದಲ್ಲಿ ವರದಿಯಾಗುತ್ತಿರುವ ಮಂಕಿಪಾಕ್ಸ್ ವೈರಸ್‌ನ ನಾಲ್ಕನೇ ದೃಢಪಡಿಸಿದ ಪ್ರಕರಣವಾಗಿದೆ. 31 ವರ್ಷದ ವ್ಯಕ್ತಿ ಇತ್ತೀಚೆಗೆ ಹಿಮಾಚಲ ಪ್ರದೇಶದ ಮನಾಲಿಯಲ್ಲಿ ನಡೆದ ಸ್ಟಾಗ್ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಜ್ವರ ಮತ್ತು ಚರ್ಮದ ಗಾಯಗಳಿಂದ ಬಳಲುತ್ತಿದ್ದ ಅವರನ್ನು ಮೂರು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಮಾದರಿಗಳನ್ನು ಶನಿವಾರ ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ (ಎನ್‌ಐವಿ) ಕಳುಹಿಸಲಾಗಿದ್ದು, ಅದು ಧನಾತ್ಮಕವಾಗಿದೆ ಎಂದು ವರದಿ ತಿಳಿಸಿದೆ.

ಈ ಹಿಂದೆ ಕೇರಳದಲ್ಲಿ ಮೂರು ಮಂಕಿಪಾಕ್ಸ್‌ ಪ್ರಕರಣಗಳು ವರದಿಯಾಗಿದ್ದವು. ಶನಿವಾರ, ವಿಶ್ವ ಆರೋಗ್ಯ ಸಂಸ್ಥೆ (WHO) ಮಂಕಿಪಾಕ್ಸ್ ಅನ್ನು ಅಂತರರಾಷ್ಟ್ರೀಯ ಕಾಳಜಿಯ ಜಾಗತಿಕ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದೆ. ಆರೋಗ್ಯ ಸಚಿವಾಲಯದ ಮೂಲಗಳ ಪ್ರಕಾರ, ಮಂಕಿಪಾಕ್ಸ್ ಹರಡಿರುವ ದೇಶಗಳಿಂದ ಬರುವ ಜನರ ಮೇಲೆ ಕಣ್ಗಾವಲು ಹೆಚ್ಚಿಸಲಾಗುತ್ತಿದೆ. ಹಾಗೂ ಮಂಕಿಪಾಕ್ಸ್ ವೈರಸ್‌ನ ಮಾದರಿಗಳನ್ನು ಪರೀಕ್ಷಿಸಲು ಭಾರತದಲ್ಲಿ ಇದುವರೆಗೆ 16 ಲ್ಯಾಬ್‌ಗಳನ್ನು ಸ್ಥಾಪಿಸಲಾಗಿದೆ.

ಪ್ರಮುಖ ಸುದ್ದಿ :-   ನಮ್ಮ ಗಾಯದ ಮೇಲೆ ಉಪ್ಪು ಸವರಬೇಡಿ, ಕಸಬ್ ಹೊಗಳುವುದಿದ್ದರೆ ಪಾಕಿಸ್ತಾನಕ್ಕೆ ಹೋಗಿ": 26/11 ದಾಳಿ ಬಗ್ಗೆ ಕಾಂಗ್ರೆಸ್‌ ನಾಯಕನ ಹೇಳಿಕೆಗೆ ಕಸಬ್ ವಿಚಾರಣೆ ಸಾಕ್ಷಿಯ ಆಕ್ಷೇಪ

ಮಂಕಿಪಾಕ್ಸ್ ಹೇಗೆ ಹರಡುತ್ತದೆ?
ಮಂಕಿಪಾಕ್ಸ್ ವೈರಸ್ ಸೋಂಕಿತ ಪ್ರಾಣಿಗಳಿಂದ ಮನುಷ್ಯರಿಗೆ ಪರೋಕ್ಷ ಅಥವಾ ನೇರ ಸಂಪರ್ಕದ ಮೂಲಕ ಹರಡುತ್ತದೆ. ಮುಖಾಮುಖಿ, ಸ್ಪರ್ಷದಿಂದ ಮತ್ತು ಉಸಿರಾಟದ ಹನಿಗಳು ಸೇರಿದಂತೆ ಚರ್ಮ ಅಥವಾ ಗಾಯಗಳೊಂದಿಗೆ ನೇರ ಸಂಪರ್ಕದ ಮೂಲಕ ಮಾನವನಿಂದ ಮಾನವನಿಗೆ ಹರಡುವಿಕೆ ಸಂಭವಿಸಬಹುದು.
ಜಾಗತಿಕವಾಗಿ 75 ದೇಶಗಳಿಂದ 16,000 ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ ಮತ್ತು ಇದುವರೆಗೆ ಐದು ಸಾವುಗಳು ಸಂಭವಿಸಿದ ವರದಿಯಾಗಿವೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement