ಸದನದೊಳಗೆ ಭಿತ್ತಿಪತ್ರ ಪ್ರದರ್ಶನ : ನಾಲ್ವರು ಕಾಂಗ್ರೆಸ್ ಸಂಸದರು ಲೋಕಸಭೆಯ ಸಂಪೂರ್ಣ ಅಧಿವೇಶನಕ್ಕೆ ಅಮಾನತು

ನವದೆಹಲಿ: ಬೆಲೆ ಏರಿಕೆ ಖಂಡಿಸಿ ಸದನದೊಳಗೆ ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸಿದ ನಾಲ್ವರು ಕಾಂಗ್ರೆಸ್ ಸಂಸದರನ್ನು ಲೋಕಸಭೆಯಿಂದ ಇಡೀ ಅಧಿವೇಶನಕ್ಕೆ ಅಮಾನತು ಮಾಡಲಾಗಿದೆ.
ಸ್ಪೀಕರ್ ಓಂ ಬಿರ್ಲಾ ಅವರು ಪ್ರತಿಭಟನೆ ನಡೆಸಲು ಬಯಸಿದರೆ ಸದನದ ಹೊರಗೆ ಭಿತ್ತಿಪತ್ರ ಹಿಡಿದು ವರ್ತಿಸುವಂತೆ ಎಚ್ಚರಿಕೆ ನೀಡಿದ್ದರು.
ಆದರೂ ಸದನದ ಒಳಗೆ ಭಿತ್ತಿ ಪತ್ರ ಹಿಡಿದಿದ್ದರಿಂದ ಕಾಂಗ್ರೆಸ್ ಸಂಸದರಾದ ಮಾಣಿಕಂ ಟ್ಯಾಗೋರ್, ಜೋತಿಮಣಿ, ರಮ್ಯಾ ಹರಿದಾಸ್ ಮತ್ತು ಟಿಎನ್ ಪ್ರತಾಪನ್ ಸಂಪೂರ್ಣ ಅಧಿವೇಶನಕ್ಕೆ ಅಮಾನತು ಮಾಡಿದ್ದಾರೆ.

 

ಅಸಮಾಧಾನಗೊಂಡ ಲೋಕಸಭಾ ಸ್ಪೀಕರ್ ಅವರು ಮಧ್ಯಾಹ್ನ 3 ಗಂಟೆಯ ನಂತರ ಚರ್ಚೆಗೆ ಸಿದ್ಧರಿದ್ದಾರೆ, ಆದರೆ ಸದನದೊಳಗೆ ಯಾವುದೇ ಭಿತ್ತಿ ಹಿಡಿದು ಪತ್ರ ಪ್ರತಿಭಟನೆಯನ್ನು ಸಹಿಸುವುದಿಲ್ಲ ಎಂದು ವಿರೋಧ ಪಕ್ಷದ ಸಂಸದರಿಗೆ ಎಚ್ಚರಿಕೆ ನೀಡಿದ್ದರು.
“ನೀವು ಫಲಕಗಳನ್ನು ತೋರಿಸಲು ಬಯಸಿದರೆ, ಅದನ್ನು ಸದನದ ಹೊರಗೆ ಮಾಡಿ. ನಾನು ಸದನದ ಚರ್ಚೆಗೆ ಸಿದ್ಧನಿದ್ದೇನೆ, ಆದರೆ ನನ್ನ ಹೃದಯವಂತಿಕೆಯನ್ನು ದೌರ್ಬಲ್ಯ ಎಂದು ಭಾವಿಸಬೇಡಿ” ಎಂದು ಸ್ಪೀಕರ್ ಹೇಳಿದರು. ಬಳಿಕ ಕಲಾಪವನ್ನು ನಾಳೆಗೆ ಮುಂದೂಡಿದರು.
ಮಧ್ಯಾಹ್ನ 3 ಗಂಟೆಯ ನಂತರ ಅಧಿವೇಶನ ಪುನರಾರಂಭವಾದಾಗ – ಅದನ್ನು ಶೂನ್ಯ ವೇಳೆಗೆ 20 ನಿಮಿಷಗಳ ಮೊದಲು ಮುಂದೂಡಲಾಯಿತು – ಆದರೆ ವಿರೋಧ ಪಕ್ಷದ ಸಂಸದರು ಭಿತ್ತಿಪತ್ರಗಳೊಂದಿಗೆ ಮರಳಿದರು.

ಪ್ರಮುಖ ಸುದ್ದಿ :-   ಕಾರು ಅಡ್ಡ ಹಾಕಿ ನಟಿ ಹರ್ಷಿಕಾ ಪೂಣಚ್ಚ ದಂಪತಿಗೆ ಕಿರುಕುಳ : "ನಾವು ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದಲ್ಲಿದ್ದೇವೆಯೇ ಎಂದು ನಟಿ ಪ್ರಶ್ನೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement