ಚಿಕ್ಕಮಗಳೂರು: ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ 14 ದಿನಗಳ ನಂತರ ಪ್ರತ್ಯಕ್ಷ !

ಚಿಕ್ಕಮಗಳೂರು:  ಭಾರೀ ಮಳೆಯಿಂದಾಗಿ ಜುಲೈ 12 ರಂದು ಚಿಕ್ಕಮಗಳೂರಿನ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿಯೊಬ್ಬರು 14 ದಿನಗಳ ಬಳಿಕ ಪ್ರತ್ಯಕ್ಷವಾಗಿದ್ದಾರೆ ಎಂದು ವರದಿಯಾಗಿದೆ.
ಜುಲೈ 12 ರಂದು ಚಿಕ್ಕಮಗಳೂರಿನ ಉಂಡೇ ದಾಸರಹಳ್ಳಿ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಸುರೇಶ ಎಂಬವರು ಈಗ ಪ್ರತ್ಯಕ್ಷವಾಗಿದ್ದಾರೆ. ಚಿಂದಿ ಆಯುತ್ತಿದ್ದ ಸುರೇಶ ಅವರು ರಾಜಕಾಲುವೆಯಲ್ಲಿದ್ದ ಪ್ಲಾಸ್ಟಿಕ್‌ಗಳನ್ನು ಆಯಲು ಹೋದಾಗ ಕೊಚ್ಚಿ ಹೋಗಿದ್ದರು ಎಂದು ಹೇಳಲಾಗಿತ್ತು.

ಸುರೇಶ ಅವರ ಪತ್ನಿ ತನ್ನ ಗಂಡನನ್ನು ಹುಡುಕಿಕೊಡುವಂತೆ ಗೋಳಿಟ್ಟಿದ್ದರು.  ಅಗ್ನಿಶಾಮಕ ದಳದ ಸಿಬ್ಬಂದಿ ಸತತ 7 ದಿನಗಳ ಕಾಲ ಶೋಧ ಕಾರ್ಯಾಚರಣೆ ನಡೆಸಿ ಪತ್ತೆ ಹಚ್ಚಲಾಗೆ ಕೈಚೆಲ್ಲಿದ್ದರು. ಆದರೆ ಈಗ ಘಟನೆ ನಡೆದು 14 ದಿನಗಳ ಬಳಿಕ ಸುರೇಶ್ ಪ್ರತ್ಯಕ್ಷವಾಗಿದ್ದಾರೆ.ಕೊಚ್ಚಿ ಹೋಗಿದ್ದ ವ್ಯಕ್ತಿಯ ಓಡಾಟ ಕಂಡು ಅಧಿಕಾರಿಗಳು ದಂಗಾಗಿದ್ದಾರೆ. ಸುರೇಶ್ ಅವರನ್ನು ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ ಅವರು ಮಾಹಿತಿ ನೀಡಿದೇ ಇದ್ದುದಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

 

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement