28,732 ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಖರೀದಿ ಪ್ರಸ್ತಾವನೆಗಳಿಗೆ ರಕ್ಷಣಾ ಸಚಿವಾಲಯ ಅನುಮೋದನೆ

ನವದೆಹಲಿ: ಡ್ರೋನ್‌ಗಳು, ಬುಲೆಟ್ ಪ್ರೂಫ್ ಜಾಕೆಟ್‌ಗಳು ಸೇರಿದಂತೆ ಸಶಸ್ತ್ರ ಪಡೆಗಳಿಗೆ 28,732 ಕೋಟಿ ರೂ.ಗಳ ಶಸ್ತ್ರಾಸ್ತ್ರ ಖರೀದಿಖರೀದಿ ಪ್ರಸ್ತಾವನೆಗಳಿಗೆ ರಕ್ಷಣಾ ಸಚಿವಾಲಯ ಮಂಗಳವಾರ ಅನುಮೋದನೆ ನೀಡಿದೆ.
ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ನಿಯೋಜಿಸಲಾದ ಭಾರತೀಯ ಪಡೆಗಳಿಗೆ ಶತ್ರು ಸ್ನೈಪರ್‌ಗಳ ಬೆದರಿಕೆಯ ವಿರುದ್ಧ ರಕ್ಷಣೆ ಪಡೆಯಲು ಮತ್ತು ಭಯೋತ್ಪಾದನಾ ನಿಗ್ರಹ ಸನ್ನಿವೇಶಗಳಲ್ಲಿ ನಿಕಟ ಯುದ್ಧ ಕಾರ್ಯಾಚರಣೆಗಳಲ್ಲಿ ಭಾಗಿಯಾಗಲು ಭಾರತೀಯ ಗುಣಮಟ್ಟದ BIS VI ಮಟ್ಟದ ಬುಲೆಟ್ ಪ್ರೂಫ್ ಜಾಕೆಟ್‌ಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಎಲ್​ಎಸಿ ಮತ್ತು ಪೂರ್ವ ಗಡಿಗಳಲ್ಲಿ ಸಾಂಪ್ರದಾಯಿಕ ಮತ್ತು ಹೈಬ್ರಿಡ್ ಯುದ್ಧ ಹಾಗೂ ಭಯೋತ್ಪಾದನೆ ನಿಗ್ರಹದ ಸಂಕೀರ್ಣ ಸ್ಥಿತಿಯನ್ನು ಎದುರಿಸಲು ಸುಮಾರು 4 ಲಕ್ಷ ಕ್ಲೋಸ್ ಕ್ವಾರ್ಟರ್ ಬ್ಯಾಟಲ್ ಕಾರ್ಬೈನ್‌ಗಳ ಇಂಡಕ್ಷನ್​ಗಳಿಗೂ ಸಹ ಅನುಮೋದನೆ ದೊರೆತಿದೆ. ಇದು ಭಾರತದಲ್ಲಿನ ಸಣ್ಣ ಶಸ್ತ್ರಾಸ್ತ್ರ ಉತ್ಪಾದನಾ ಉದ್ಯಮಕ್ಕೆ ಪ್ರಮುಖ ಪ್ರಚೋದನೆ ಒದಗಿಸಲು ಮತ್ತು ಆತ್ಮನಿರ್ಭರ ಭಾರತ ಪ್ರೋತ್ಸಾಹಿಸಲು ಯೋಜಿಸಲಾಗಿದೆ ಎಂದು ಮಾಹಿತಿ ನೀಡಿದೆ.
ಆಧುನಿಕ ಯುದ್ಧದಲ್ಲಿ ಭಾರತೀಯ ಸೇನೆಯ ಸಾಮರ್ಥ್ಯ ಹೆಚ್ಚಿಸಲು, ಸ್ವಾಯತ್ತ ಕಣ್ಗಾವಲು ಮತ್ತು ಸಶಸ್ತ್ರ ಡ್ರೋನ್ ಸಮೂಹಗಳ ಸಂಗ್ರಹಣೆಗಾಗಿಯೂ ಅನುಮೋದನೆ ದೊರೆತಿದೆ. ಭಾರತೀಯ ಉದ್ಯಮದ ಮೂಲಕ ಕೋಲ್ಕತ್ತಾ ಭಾಗದ ಹಡಗುಗಳಲ್ಲಿ ವಿದ್ಯುತ್ ಉತ್ಪಾದನೆ ಅನ್ವಯಕ್ಕಾಗಿ ನವೀಕರಿಸಿದ 1250KW ಸಾಮರ್ಥ್ಯದ ಸಾಗರ ಅನಿಲ ಟರ್ಬೈನ್ ಜನರೇಟರ್ ಅನ್ನು ಸಂಗ್ರಹಿಸುವ ನೌಕಾಪಡೆಯ ಪ್ರಸ್ತಾವನೆಯನ್ನೂ ಸಹ ಈ ವೇಳೆ ರಕ್ಷಣಾ ಸ್ವಾಧೀನ ಮಂಡಳಿ ಅನುಮೋದಿಸಿದೆ. ಇದು ಗ್ಯಾಸ್ ಟರ್ಬೈನ್ ಜನರೇಟರ್‌ಗಳ ಸ್ಥಳೀಯ ಉತ್ಪಾದನೆಗೆ ಪ್ರಮುಖ ಉತ್ತೇಜನ ನೀಡಲಿದೆ ಎಂದು ಹೇಳಲಾಗಿದೆ.

ಪ್ರಮುಖ ಸುದ್ದಿ :-   'ಇದು ಸಾಮಾನ್ಯ ಚುನಾವಣೆಯಲ್ಲ' : ಲೋಕಸಭೆ ಚುನಾವಣೆ ಮೊದಲ ಹಂತದ ಮತದಾನಕ್ಕೂ ಮುನ್ನ ಬಿಜೆಪಿ-ಎನ್‌ಡಿಎ ಅಭ್ಯರ್ಥಿಗಳಿಗೆ ಪತ್ರ ಬರೆದ ಪ್ರಧಾನಿ ಮೋದಿ

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement