ನಿರ್ಬಂಧ ಉಲ್ಲಂಘನೆ: ಪ್ರಮೋದ್ ಮುತಾಲಿಕ್ ಪೊಲೀಸ್ ವಶಕ್ಕೆ

ಮಂಗಳೂರು: ಪ್ರವೀಣ ಹತ್ಯೆ ಪ್ರಕರಣದ ನಂತರ ಮುಂಜಾಗ್ರತಾ ಕ್ರಮವಾಗಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಗೆ ದಕ್ಷಿಣಕನ್ನಡ ಪ್ರವೇಶಕ್ಕೆ ಜಿಲ್ಲಾಡಳಿತ ನಿಷೇಧ ಹೇರಿದ್ದರೂ ಇಂದು, ಶುಕ್ರವಾರ ದಕ್ಷಿಣಕನ್ನಡ ಜಿಲ್ಲೆಗೆ ಆಗಮಿಸಿದ ಅವರನ್ನು ಹೆಜಮಾಡಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಿಜೆಪಿ ಯುವ ಮುಖಂಡ ಪ್ರವೀಣ್ ಹತ್ಯೆ ಬೆನ್ನಲ್ಲೇ ಪ್ರಮೋದ್ ಮುತಾಲಿಕ್ ಪ್ರವೀಣ್ ಅವರ ಮನೆಗೆ ಭೇಟಿ ನೀಡುವ ಸಾಧ್ಯತೆ ಇದೆ ಎಂಬ ಮಾಹಿತಿ ಹಿನ್ನಲೆ ಪೊಲೀಸ್ ಇಲಾಖೆ ಮನವಿ ಮೇರೆಗೆ ಪ್ರಮೋದ್ ಮುತಾಲಿಕ್‌ಗೆ ದಕ್ಷಿಣಕನ್ನಡ ಪ್ರವೇಶಕ್ಕೆ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಸೂಕ್ಷ್ಮ ಪ್ರದೇಶವಾಗಿರುವ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ನಿರ್ಬಂಧ ಹೇರಲಾಗಿತ್ತು.
ಅದಾಗ್ಯೂ ಜಿಲ್ಲೆಗೆ ಬಂದ ಪ್ರಮೋದ್ ಮುತಾಲಿಕ್ ಅವರನ್ನು ಗಡಿ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ವಶಕ್ಕೆ ಪಡೆದು ಕ್ರಮ ಕೈಗೊಂಡಿದ್ದಾರೆ.

ಪ್ರವೀಣ್ ಹತ್ಯೆಗೆ ಸಂಬಂಧಿಸಿ ಮಾತನಾಡಿದ ಮುತಾಲಿಕ್‌, ಬಿಜೆಪಿಯವರು ಕಾರ್ಯಕರ್ತರ ಕಷ್ಟ- ಸುಖಕ್ಕೆ ಸ್ಪಂದಿಸಿದ್ದರೆ ಪ್ರವೀಣ ಹತ್ಯೆ ಆಗುತ್ತಿರಲಿಲ್ಲ. ಸುಳ್ಯದಲ್ಲಿ ನಡೆದ ಪ್ರವೀಣ್ ಹತ್ಯೆ ಅತ್ಯಂತ ದುರದೃಷ್ಟಕರ ಎಂದು ಹೇಳಿದ ಅವರು ಇಂತಹ ಘಟನೆಗಳು ಮರುಕಳಿಸಬಾರದು ಎಂದು ಆಗ್ರಹಿಸಿದರು.
ಬಿಜೆಪಿಯ ನಾಯಕರುಗಳು ತಮ್ಮ 3-4 ಪೀಳಿಗೆ ಉಣ್ಣುವಷ್ಟು ಮಾಡಿಟ್ಟಿದ್ದಾರೆ. ಇದಕ್ಕೆ ನಾನು ಬಿಜೆಪಿಗೆ ಧಿಕ್ಕಾರ ಹೇಳುತ್ತೇನೆ. ಸಾರ್ವಜನಿಕರು ಪ್ರವೀಣ್ ಹತ್ಯೆಯಿಂದ ಆಕ್ರೋಶಗೊಂಡಿದ್ದಾರೆ. ಇದು ಪ್ರವೀಣ ಶವ ಮೆರವಣಿಗೆ ಸಂದರ್ಭದಲ್ಲಿ ಸ್ಫೋಟವಾಗಿದೆ. ಹತ್ಯೆ ಖಂಡಿಸಿ ಬಿಜೆಪಿಗೆ ರಾಜೀನಾಮೆ ಕೊಟ್ಟವರು ನಿಜವಾದ ಹಿಂದೂ ವಾದಿಗಳು ಎಂದು ಹೇಳಿದರು.
ಸುರತ್ಕಲ್ ಕೊಲೆ ಬಗ್ಗೆ ನನಗೆ ಗೊತ್ತಿಲ್ಲ. ಆದರೂ ಕ್ರಿಯೆಗೆ ಪ್ರತಿಕ್ರಿಯೆಯಾಗಬಾರದು. ಇದನ್ನು ಹಿಂದು ಮತ್ತು ಮುಸ್ಲಿಂ ಧಾರ್ಮಿಕ ಮುಖಂಡರು ಒಟ್ಟಿಗೆ ಕುಳಿತು ಬಗೆಹರಿಸಬೇಕು ಎಂದರು.

ಪ್ರಮುಖ ಸುದ್ದಿ :-   ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳ ಮಾರಾಮಾರಿ : ಚಾಕು ಇರಿತ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement