ಗ್ರಾಮಗಳ ವಿದ್ಯುತ್ ಸಂಪರ್ಕಗಳ ವಿಚಾರ : ಸತ್ಯ ಮರೆಮಾಚಿದ ಕೇಂದ್ರ ಸಚಿವರು -ವಸಂತ ಲದವಾ

ಹುಬ್ಬಳ್ಳಿ: ಹಿಂದಿನ ಈಗ ಕಾಂಗ್ರೆಸ ಸರ್ಕಾರದ ಸಾಧನೆಗಳನ್ನು ಮರೆಮಾಚಿ ಎಲ್ಲವನ್ನೂ ತಾವೇ ಮಾಡಿದಂತೆ ತೋರಿಸುವ ಕೇಂದ್ರ ಸಚಿವರ ಹೇಳಿಕೆಗೆ ಕಾಂಗ್ರೆಸ ವಕ್ತಾರ ವಸಂತ ಲದವಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾಂಗ್ರೆಸ್‌ ಸರ್ಕಾರ ಕೇವಲ ೨೦೦೬-೦೭ರಲ್ಲಿ ದೇಶದ ೨೮,೭೦೬ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಅಮೋಘ ಸಾಧನೆಯನ್ನು ಯಾವುದೇ ಪ್ರಚಾರವಿಲ್ಲದೆ ಮಾಡಿತ್ತು ಎಂದು ಅವರು ಪ್ರಹ್ಲಾದ ಜೋಶಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸ್ವಾತಂತ್ರ್ಯಾ ನಂತರ ೧೯೫೦ರ ದಶಕದಲ್ಲಿ ದೇಶದ ಒಟ್ಟು ಸುಮಾರು ೫,೬೦,೦೦೦ ಗ್ರಾಮಗಳ ಪೈಕಿ ಕೇವಲ ೩೦೬೧ ಗ್ರಾಮಗಳಿಗೆ ಮಾತ್ರ ವಿದ್ಯುತ್ ಸಂಪರ್ಕವಿತ್ತು. ಕಾಂಗ್ರೆಸ್ ಸರ್ಕಾರ ಹಲವಾರು ಅಡ್ಡಿಗಳ ಮಧ್ಯೆಯೂ ೧೯೭೦ರ ದಶಕದಲ್ಲಿ ದೇಶದ ಒಂದು ಲಕ್ಷಕ್ಕೂ ಮೀರಿ ಅಂದರೆ ಸುಮಾರು ೧೮% ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಒದಗಿಸಿತ್ತು. ೧೯೮೦ರ ದಶಕದಲ್ಲಿ ಒಟ್ಟು ೩,೭೫,೦೦೦ಕ್ಕೂ ಹೆಚ್ಚು ಗ್ರಾಮಗಳಿಗೆ ವಿದ್ಯುತ್ ಪೂರೈಸಲಾಗಿತ್ತು. ಕಾಂಗ್ರೆಸ್ ಸರಕಾರಾವಧಿಯ ಒಂದು ಹಂತದಲ್ಲಿ ಸರಾಸರಿ ಪ್ರತಿ ವರ್ಷ ಸುಮಾರು ಇಪ್ಪತ್ತು ಸಾವಿರ ಗ್ರಾಮಗಳಿಗೆ ವಿದ್ಯುತ್ ಪೂರೈಸಲಾಗಿತ್ತು. ೨೦೦೬-೦೭ರ ಒಂದೇ ಒಂದು ವರ್ಷದಲ್ಲಿ ೨೮,೭೦೬ ಗ್ರಾಮಗಳಿಗೆ ವಿದ್ಯುತ್ ಪೂರೈಸಲಾಗಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.

ಪ್ರಮುಖ ಸುದ್ದಿ :-   ಏಪ್ರಿಲ್‌ 18, 19ರಂದು ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ

ಕೇಂದ್ರೀಯ ವಿದ್ಯುತ್ ವರದಿಯ ಪ್ರಕಾರ ೨೦೦೭ ರಿಂದ ೨೦೧೨ರ ೧೧ನೇ ಪಂಚವಾರ್ಷಿಕ ಯೋಜನೆಯ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದೇಶದ ೫,೯೩,೭೦೩೨ ಗ್ರಾಮಗಳ ಪೈಕಿ ೫,೫೬,೬೩೩ ಗ್ರಾಮಗಳಿಗೆ ಯೋಜನಾ ಅವಧಿಗಿಂತ ಮುಂಚೆಯೇ ವಿದ್ಯುತ್ ಸಂಪರ್ಕ ಕಲ್ಪಿಸಿ ದೇಶದಲ್ಲಿ ಕೇವಲ ೩೭,೦೦೦ ಗ್ರಾಮಗಳ ವಿದ್ಯುತ್ ಪೂರೈಕೆ ಮಾತ್ರ ಬಾಕಿ ಉಳಿದಿತ್ತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವಾಗ ಕೇವಲ ೧೮,೪೫೨ ಗ್ರಾಮಗಳ ವಿದ್ಯುತ್ ಪೂರೈಕೆ ಮಾತ್ರ ಬಾಕಿ ಉಳಿದಿತ್ತು. ಇದನ್ನೇ ಬಿಜೆಪಿ ಸರ್ಕಾರ ರಾಜೀವಗಾಂಧಿ ಗ್ರಾಮ ವಿದ್ಯುತೀಕರಣ ಯೋಜನೆಯ ಹೆಸರು ಬದಲಿಸಿ ಸಾವಿರ ದಿನಗಳಲ್ಲಿ ೧೮,೩೭೪ ಗ್ರಾಮಗಳ ವಿದ್ಯುತ್ ಪೂರೈಕೆ (ಸರಾಸರಿ ವರ್ಷಕ್ಕೆ ಕೇವಲ ೬,೭೦೦ ಗ್ರಾಮಗಳಿಗೆ ಮಾತ್ರ) ಮಾಡಲಾಗುವುದೆಂದು ಅಬ್ಬರದ ಪ್ರಚಾರ ಗಿಟ್ಟಿಸಿಕೊಂಡಿತ್ತು. ಕಾಂಗ್ರೆಸ್‌ ಸರ್ಕಾರ ಕೇವಲ ೨೦೦೬-೦೭ರಲ್ಲಿ ೨೮,೭೦೬ ಗ್ರಾಮಗಳೀಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಯಾವುದೇ ಪ್ರಚಾರವಿಲ್ಲದೆ ಅಮೋಘ ಸಾಧನೆ ಮಾಡಿತ್ತು. ಈಗ ಕಾಂಗ್ರೆಸ್‌ ಸರ್ಕಾರದ ಸಾಧನೆಗಳನ್ನು ಮರೆಮಾಚಿ ಎಲ್ಲವನ್ನೂ ತಮ್ಮ ಸರ್ಕಾರ ಮಾತ್ರ ಮಾಡಿದ ರೀತಿಯಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿಯವರು ಹೇಳಿಕೊಳ್ಳುತ್ತಿರುವುದಕ್ಕೆ ಕಾಂಗ್ರೆಸ್‌ ವಕ್ತಾರ ವಸಂತ ಲದವಾ ಟೀಕಿಸಿದ್ದಾರೆ.

ಪ್ರಮುಖ ಸುದ್ದಿ :-   ಕನ್ನಡ ಚಿತ್ರರಂಗದ ಹಿರಿಯ ನಟ ದ್ವಾರಕೀಶ ಇನ್ನಿಲ್ಲ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement