ಪೆನ್ಸಿಲ್, ಮ್ಯಾಗಿ ಬೆಲೆ ಹೆಚ್ಚಾಗಿದೆ, ಹೊಸ ಪೆನ್ಸಿಲ್‌ ಕೇಳಿದ್ರೆ ಅಮ್ಮ ಹೊಡೆಯುತ್ತಾಳೆ : ಪ್ರಧಾನಿ ಮೋದಿಗೆ ಪತ್ರ ಬರೆದ 1ನೇ ತರಗತಿ ಬಾಲಕಿ..!

ನವದೆಹಲಿ: 1ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯೊಬ್ಬಳು ಪೆನ್ಸಿಲ್ ಮತ್ತು ಮ್ಯಾಗಿ ದುಬಾರಿಯಾಗಿದ್ದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೃದಯಸ್ಪರ್ಶಿ ಪತ್ರ ಬರೆದಿದ್ದಾಳೆ.
ಉತ್ತರ ಪ್ರದೇಶದ ಕನೌಜ್‌ನ ಛಿಬ್ರಮೌವ್‌ನ ಆರು ವರ್ಷದ ಕೃತಿ ದುಬೆ ಎಂಬ ಬಾಲಕಿ ಹಿಂದಿಯಲ್ಲಿ ಬರೆದಿರುವ ಈ ಪತ್ರದಲ್ಲಿ ತನ್ನ ಕಷ್ಟದ ಬಗ್ಗೆ ಮಾತನಾಡಿದ್ದಾಳೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಪತ್ರದಲ್ಲಿ, “ನನ್ನ ಹೆಸರು ಕೃತಿ ದುಬೆ. ನಾನು 1ನೇ ತರಗತಿಯಲ್ಲಿ ಓದುತ್ತಿದ್ದೇನೆ. ಮೋದಿಜಿ, ನೀವು ಅಪಾರ ಬೆಲೆ ಏರಿಕೆಗೆ ಕಾರಣವಾಗಿದ್ದೀರಿ. ನನ್ನ ಪೆನ್ಸಿಲ್ ಮತ್ತು ರಬ್ಬರ್ [ಎರೇಸರ್] ಕೂಡ ದುಬಾರಿಯಾಗಿದೆ ಮತ್ತು ನನ್ನ ಇಷ್ಟದ ತಿಂಡಿ ಮ್ಯಾಗಿ ಬೆಲೆಯನ್ನು ಸಹ ಹೆಚ್ಚಿಸಲಾಗಿದೆ. ನಾನು ಪೆನ್ಸಿಲ್ ಬೇಕು ಎಂದು ಹೇಳಿದರೆ ನನ್ನ ಅಮ್ಮ ನನಗೆ ಹೊಡೆಯುತ್ತಾಳೆ. ನಾನು ಏನು ಮಾಡಬೇಕು? ಶಾಲೆಯಲ್ಲಿ ನನ್ನ ಜೊತೆ ಕೂರುವವರು ನನ್ನ ಪೆನ್ಸಿಲ್ ಕದ್ದು ನನಗೆ ಅಮ್ಮನಿಂದ ಹೊಡೆಸುತ್ತಿದ್ದಾರೆ ಎಂದು ಆಕೆ ಪತ್ರ ಬರೆದಿದ್ದಾಳೆ.

ಪುಟ್ಟ ಬಾಲಕಿಯ ತಂದೆ ಮತ್ತು ವಕೀಲರಾದ ವಿಶಾಲ್ ದುಬೆ ಸಾಮಾಜಿಕ ಮಾಧ್ಯಮದಲ್ಲಿನ ಈ ಪತ್ರ ತಮ್ಮ ಮಗಳದ್ದೆಂದು ಖಚಿತಪಡಿಸಿದ್ದಾರೆ. ಮಾಧ್ಯಮಗಳಿಗೆ ಮಾತನಾಡಿದ ಅವರು, ಇದು ನನ್ನ ಮಗಳ ಮನ್ ಕಿ ಬಾತ್. ಅವಳು ಶಾಲೆಯಲ್ಲಿ ಪೆನ್ಸಿಲ್ ಕಳೆದುಕೊಂಡಾಗ ಅವಳ ತಾಯಿ ಗದರಿಸಿದ್ದಳು. ಇದರಿಂದ ಅವಳು ಸಿಟ್ಟಾಗಿದ್ದಾಳೆ ಎಂದು ಹೇಳಿದ್ದಾರೆ.
ಮಕ್ಕಳು ಪ್ರಧಾನಿ ನರೇಂದ್ರ ಮೋದಿಯವರಿಗೆ ದೂರು ನೀಡುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ, ಜಮ್ಮು ಮತ್ತು ಕಾಶ್ಮೀರದ 6 ವರ್ಷದ ಬಾಲಕಿ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ನಡೆಯುತ್ತಿರುವ ಆನ್‌ಲೈನ್ ತರಗತಿಗಳ ಬಗ್ಗೆ ತನ್ನ ಅಸಮಾಧಾನದ ಬಗ್ಗೆ ವೀಡಿಯೊವನ್ನು ಹಂಚಿಕೊಂಡಿದ್ದಳು. ಹಾಗೂ ಹೋಮ್‌ವರ್ಕ್‌ ಬಗ್ಗೆ ಹೇಳಿದ್ದಳು.
ಈ ವಿಡಿಯೋ ವೈರಲ್ ಆದ ಕೂಡಲೇ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು 48 ಗಂಟೆಗಳ ಒಳಗೆ ಈ ಬಗ್ಗೆ ನೀತಿ ಜಾರಿ ಮಾಡುವಂತೆ ಶಾಲಾ ಶಿಕ್ಷಣ ಇಲಾಖೆಗೆ ಸೂಚಿಸಿದ್ದಾರೆ. ತುಂಬಾ ವಾಸ್ತವದ ದೂರು. ಶಾಲಾ ಮಕ್ಕಳ ಮೇಲಿನ ಹೋಂ ವರ್ಕ್‌ ಹೊರೆ ತಗ್ಗಿಸಲು 48 ಗಂಟೆಗಳೊಳಗೆ ನೀತಿ ಹೊರತರುವಂತೆ ಶಾಲಾ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಲಾಗಿದೆ. ಬಾಲ್ಯದ ಮುಗ್ಧತೆ ದೇವರ ಕೊಡುಗೆಯಾಗಿದೆ ಮತ್ತು ಅವರ ದಿನಗಳು ಉತ್ಸಾಹಭರಿತ, ಸಂತೋಷ ಮತ್ತು ಆನಂದದಿಂದ ತುಂಬಿರಬೇಕು ಎಂದು ಅವರು ಆದೇಶಿಸಿದ್ದರು.

ಪ್ರಮುಖ ಸುದ್ದಿ :-   ಸಚಿವ ದಿನೇಶ ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನ' ಹೇಳಿಕೆ : ಬಿಜೆಪಿ ಶಾಸಕ ಯತ್ನಾಳ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement