ಉತ್ತರ ಕನ್ನಡದಲ್ಲಿ ಶಂಕಿತ ಮಂಕಿ ಪಾಕ್ಸ್ ಪ್ರಕರಣ ಪತ್ತೆ…?

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಟಿಬೆಟ್‌ ಕ್ಯಾಂಪ್‌ನಲ್ಲಿ ಶಂಕಿತ ಮಂಕಿ ಪಾಕ್ಸ್ ಪ್ರಕರಣ ಪತ್ತೆಯಾಗಿದೆ ಎಂದು ಹೇಳಲಾಗಿದೆ. ಬೆಲ್ಜಿಯಂನಿಂದ ವಾಪಸಾಗಿದ್ದ 9 ವರ್ಷದ ಬಾಲಕನಿಗೆ ಸೋಂಕಿನ ಲಕ್ಷಣಗಳು ಕಂಡು ಬಂದಿವೆ.
ಜುಲೈ 1ರಂದು ಬಾಲಕ ತಮ್ಮ ಪೋಷಕರೊಂದಿಗೆ ಬೆಲ್ಜಿಯಂನಿಂದ ದೆಹಲಿ, ಹಿಮಾಲಯ ಪ್ರದೇಶ ಹಾಗೂ ಮಹಾರಾಷ್ಟ್ರ ಮೂಲಕ ಭಾರತಕ್ಕೆ ವಾಪಸಾಗಿದ್ದ ಬಾಲಕ ಜು.27ರಂದು ಟಿಬೆಟ್‌ ಕ್ಯಾಂಪ್‌ ತಲುಪಿದ್ದ ಎಂದು ಹೇಳಲಾಗಿದೆ.

ಸದ್ಯ ಬಾಲಕನಲ್ಲಿ ಮಂಕಿ ಪಾಕ್ಸ್ ಸೋಂಕಿನ ತರಹದ ಲಕ್ಷಣಗಳು ಕಂಡು ಬಂದಿವೆ. ಹೀಗಾಗಿ ಬಾಲಕನ ರಕ್ತದ ಮಾದರಿಯನ್ನು ಲ್ಯಾಬ್‌ಗೆ ರವಾನಿಸಲಾಗಿದೆ. ಬಾಲಕನ ರಕ್ತದ ಮಾದರಿ ಬಿಎಂಸಿಆರ್‌ಐ ಮತ್ತು ವಿಆರ್‌ಡಿಎಲ್ ಗೆ ಕಳಿಸಿಕೊಡಲಾಗಿದ್ದು ರಕ್ತದ ವರದಿ ಬಂದ ಬಳಿಕ ಸೋಂಕಿನ ಬಗ್ಗೆ ದೃಢಪಡಲಿದೆ. ಶಂಕಿತ ಮಂಕಿ ಪಾಕ್ಸ್ ಪ್ರಕರಣದ ಬಗ್ಗೆ ಡಿಹೆಚ್‌ಓ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಆತ ವಿದೇಶದಿಂದ ಬಂದು 21 ದಿನಗಳು ಕಳೆದು ಹೋಗಿದೆ. ಅಂದರೆ ಒಂದು ತಿಂಗಳ ಮೇಲಾಗಿದೆ. ಆದರೂ ಮುಂಜಾಗ್ರತಾ ಕ್ರಮವಾಗು ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ ಎನ್ನಲಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ರಸ್ತೆ ಬೇಕಂದ್ರೆ ಗ್ಯಾರಂಟಿ ಯೋಜನೆಗಳು ಬಂದ್ ಆಗ್ತವೆ : ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಹೇಳಿಕೆ ಚರ್ಚೆಗೆ ಗ್ರಾಸ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement