ಯಾರದ್ದು ನಿಜವಾದ ಶಿವಸೇನೆ ಹೋರಾಟದಲ್ಲಿ ಉದ್ಧವ್‌ ಠಾಕ್ರೆ ಬಣಕ್ಕೆ ಸುಪ್ರೀಂ ಕೋರ್ಟ್ ರಿಲೀಫ್‌

ನವದೆಹಲಿ: ನಿಜವಾದ ಶಿವಸೇನೆ ಹೋರಾಟದಲ್ಲಿ ಉದ್ಧವ್ ಠಾಕ್ರೆ ಅವರಿಗೆ ರಿಲೀಫ್ ಸಿಕ್ಕಿದೆ. ತಮ್ಮ ಗುಂಪನ್ನು ನಿಜವಾದ ಶಿವಸೇನೆ ಗುಂಪು ಎಂದು ಗುರುತಿಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮಾಡಿರುವ ಮನವಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಸುಪ್ರೀಂ ಕೋರ್ಟ್ ಇಂದು, ಗುರುವಾರ ಚುನಾವಣಾ ಆಯೋಗಕ್ಕೆ ಹೇಳಿದೆ.
ಈ ವಿಷಯವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸುವ ಅಗತ್ಯವಿದೆಯೇ ಎಂಬ ಬಗ್ಗೆ ಸುಪ್ರೀಂ ಕೋರ್ಟ್ ಸೋಮವಾರ ವಿಚಾರ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ. ಕಳೆದ ತಿಂಗಳು ರಾಜಕೀಯ ಕಾರ್ಯಾಚರಣೆಯಲ್ಲಿ ಗುಜರಾತ್‌ನಿಂದ ಅಸ್ಸಾಂಗೆ, ಅಲ್ಲಿಂದ ಗೋವಾಕ್ಕೆ ಬಂದ ಬಂಡಾಯ ಸೇನಾ ಶಾಸಕರ ಅನರ್ಹತೆಯ ಬಗ್ಗೆ ಸ್ಪಷ್ಟತೆ ಬರುವವರೆಗೆ ಶಿವಸೇನೆಯನ್ನು ಯಾವ ಗುಂಪು ಪ್ರತಿನಿಧಿಸುತ್ತದೆ ಎಂಬುದನ್ನು ಚುನಾವಣಾ ಸಮಿತಿಯು ನಿರ್ಧರಿಸಲು ಸಾಧ್ಯವಿಲ್ಲ ಎಂದು ಠಾಕ್ರೆ ಬಣ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದರು. ಏಕನಾಥ ಶಿಂಧೆ ಬಣ ಉದ್ಧವ್‌ ಠಾಕ್ರೆಯನ್ನು ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಗೊಳಿಸಿದರು.
ತಮ್ಮ ಅರ್ಜಿಯಲ್ಲಿ ಹೇಳಿದ ಉದ್ಧವ್‌ ಠಾಕ್ರೆ ಬಣ, ಏಕನಾಥ ಶಿಂಧೆ ಬಣವು “ಅಕ್ರಮವಾಗಿ ಕೃತಕ ಬಹುಮತ ಸ್ಥಾಪಿಸಲು” ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಮಹದೇವ ಬೆಟ್ಟಿಂಗ್ ಅಪ್ಲಿಕೇಶನ್ ಪ್ರಕರಣದಲ್ಲಿ ನಟ ಸಾಹಿಲ್ ಖಾನ್ ಬಂಧನ

ಚುನಾವಣಾ ಆಯೋಗವು ಆಗಸ್ಟ್ 8ರೊಳಗೆ ಎರಡೂ ಕಡೆಯಿಂದ ಸಾಕ್ಷ್ಯವನ್ನು ಕೇಳಿತ್ತು, ನಂತರ ವಿಷಯದ ವಿಚಾರಣೆ ನಡೆಸಬೇಕಿತ್ತು.
ತಮ್ಮ ಬಣವೇ ನಿಜವಾದ ಶಿವಸೇನೆ ಎಂದು ವಾದಿಸಿರುವ ಏಕನಾಥ್ ಶಿಂಧೆ, “15 ಶಾಸಕರ ಗುಂಪು 39 ಮಂದಿಯ ಗುಂಪನ್ನು ಬಂಡಾಯ ಎಂದು ಕರೆಯಲು ಸಾಧ್ಯವಿಲ್ಲ. ಇದು ವಾಸ್ತವವಾಗಿ ಉಲ್ಟಾ ಆಗಿದೆ” ಎಂದು ನ್ಯಾಯಾಲಯಕ್ಕೆ ನೀಡಿದ ಪ್ರತಿಕ್ರಿಯೆಯಲ್ಲಿ ಹೇಳಿದ್ದಾರೆ.
ಇಲ್ಲಿಯವರೆಗೆ, ಶಿಂಧೆ ಅವರು ಮೂರನೇ ಎರಡರಷ್ಟು ಶಿವಸೇನೆ ಶಾಸಕರೊಂದಿಗೆ ವಿಧಾನಸಭೆಯಲ್ಲಿ ಪಕ್ಷದ ಬಲವನ್ನು ಹೊಂದಿದ್ದಾರೆ. ಆದರೆ ಪಕ್ಷದ ಮೇಲೆ ಒಟ್ಟಾರೆಯಾಗಿ ಹಕ್ಕು ಸಾಧಿಸಲು ಇತರ ಕಾನೂನು ಅವಶ್ಯಕತೆಗಳ ಹೊರತಾಗಿ ತಳಮಟ್ಟದ ಘಟಕಗಳಲ್ಲಿ ಬಹುಮತದ ಪುರಾವೆ ಅಗತ್ಯವಿದೆ.
ಉದ್ಧವ್ ಠಾಕ್ರೆ ನೇತೃತ್ವದ ಬಣವು ಶಿಂಧೆ ಬಣದ ಹಲವಾರು ನಿರ್ಧಾರಗಳನ್ನು ಕಾನೂನುಬದ್ಧವಾಗಿ ಪ್ರಶ್ನಿಸಿದ್ದಾರೆ. ಈ ಪ್ರಕರಣವು ಮೂಲತಃ ವಿಶ್ವಾಸ ಮತಕ್ಕಾಗಿ ರಾಜ್ಯಪಾಲರ ಆದೇಶದ ವಿರುದ್ಧ ಟೀಮ್ ಠಾಕ್ರೆಯ ಸವಾಲಿನಿಂದ ಉದ್ಭವಿಸಿದೆ. ವಿಧಾನಸಭೆಯ ಏಕೈಕ ದೊಡ್ಡ ಪಕ್ಷವಾದ ಬಿಜೆಪಿ ಬೆಂಬಲಿಸಿದ್ದರಿಂದ ಶಿಂಧೆ ಬಣ ವಿಶ್ವಾಸ ಮತ ಗೆದ್ದು ಏಕನಾಥ ಶಿಂಧೆ ಅವರು ವಿಶ್ವಾಸಮತವನ್ನು ಗೆದ್ದರು.

ಪ್ರಮುಖ ಸುದ್ದಿ :-   'ತಾರಕ್ ಮೆಹ್ತಾ' ನಟ ಗುರುಚರಣ್ ಸಿಂಗ್ ಐದು ದಿನಗಳಿಂದ ನಾಪತ್ತೆ ; ಸಿಸಿಟಿವಿಯಲ್ಲಿ ರಸ್ತೆ ದಾಟುತ್ತಿರುವುದು ಸೆರೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement