ಪರೀಕ್ಷೆಯಲ್ಲಿ ಅಕ್ರಮ ಹಾವಳಿ ತಡೆಗೆ ಪರೀಕ್ಷಾರ್ಥಿಗಳ ಶರ್ಟಿನ ಉದ್ದ ತೋಳಿಗೆ ಬಿತ್ತು ಕತ್ತರಿ…!

ಕೊಪ್ಪಳ: ರಾಜ್ಯಾದ್ಯಂತ ಇಂದು, ಭಾನುವಾರ ನಡೆದ ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆ ನಡೆಯುತ್ತಿದ್ದು, ಉದ್ದ ತೋಳಿನ ಅಂಗಿ ಹಾಕಿಕೊಂಡು ಬಂದಿದ್ದ ಅಭ್ಯರ್ಥಿಗಳಿಗೆ ಪರೀಕ್ಷಾ ಸಿಬ್ಬಂದಿ ತೋಳು ಕತ್ತರಿಸುವ ಮೂಲಕ ಶಾಕ್ ನೀಡಿದ್ದಾರೆ. .
ಪಿಎಸ್‌ಐ ನೇಮಕಾತಿಯಲ್ಲಿನ ಅಕ್ರಮದಿಂದಾಗಿ ಇತರ ನೇಮಕಾತಿ ಪರೀಕ್ಷೆಗಳಿಗೆ ಕಟ್ಟುನಿಟ್ಟಿನ ನಿಯಮ ವಿಧಿಸಲಾಗಿದೆ. ಇಂದು, ಭಾನುವಾರ ನಡೆಯುತ್ತಿರುವ ಪರೀಕ್ಷೆಗೆ ಉದ್ದ ತೋಳಿನ ಅಂಗಿ ಹಾಕಿಕೊಂಡು ಬಂದವರಿಗೆ ಪರೀಕ್ಷಾ ಕೇಂದ್ರದ ಒಳಗೆ ಬಿಟ್ಟಿಲ್ಲ.

ಈ ಘಟನೆ ಕೊಪ್ಪಳ ತಾಲೂಕಿನ ಭಾಗ್ಯನಗರದ ನವಚೇತನ ಪಬ್ಲಿಕ್ ಶಾಲೆ ಕೇಂದ್ರದಲ್ಲಿ ನಡೆದಿದೆ. ಈ ವೇಳೆ ಪರೀಕ್ಷೆಗೆ ಉದ್ದನೆಯ ತೋಳಿನ ಅಂಗಿ ಹಾಕಿ ಬಂದವರನ್ನು ಪರೀಕ್ಷಾ ಕೇಂದ್ರದ ಒಳಗೆ ಬಿಟ್ಟಿಲ್ಲ. ಬೇರೆ ಶರ್ಟ್ ಧರಿಸಿ ಬರುವಂತೆ ಸೂಚಿಸಲಾಗಿದೆ.ಅವರಿಗೆ ಬೇರೆ ಶರ್ಟ್ ಧರಿಸಿ ಬರುವಂತೆ ಸೂಚಿಸಲಾಗಿದೆ ಅಥವಾ ತೋಳನ್ನು ಕತ್ತರಿಸಿಕೊಂಡು ಬಂದು ಪರೀಕ್ಷೆ ಬರೆಯುವಂತೆ ಸೂಚಿಸಲಾಗಿದೆ. ಇಲ್ಲದಿದ್ದರೆ ಒಳ ಬಿಡುವುದಿಲ್ಲವೆಂದು ಹೇಳಿದ್ದಾರೆ. ಹೀಗಾಗಿ ಪರೀಕ್ಷಾರ್ಥಿಗಳು ಅನಿವಾರ್ಯವಾಗಿ ತೋಳು ಕತ್ತರಿಸಿಕೊಂಡು ಪರೀಕ್ಷೆ ಕೇಂದ್ರದೊಳಗೆ ಹೋಗಿದ್ದಾರೆ.. ಕೆಲವರು ಬೇರೆ ಅಂಗ ಧರಿಸಿ ಪರೀಕ್ಷೆಗೆ ಹಾಜರಾಗಿದ್ದಾರೆ. ಜಿಲ್ಲಾದ್ಯಂತ 22 ಕೇಂದ್ರಗಳಲ್ಲಿ ಇಂದು ಪರೀಕ್ಷೆ ನಡೆಯುತ್ತಿವೆ.

ಪ್ರಮುಖ ಸುದ್ದಿ :-   ಮಹಿಳೆ ಅಪಹರಣ ಪ್ರಕರಣ ; ಎಚ್‌.ಡಿ. ರೇವಣ್ಣ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿ ವಜಾ : ಬಂಧನದ ಭೀತಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement