ರಾಜ್ಯದಲ್ಲಿ ಭಾನುವಾರ 1,837 ಮಂದಿಗೆ ಕೊರೊನಾ ಸೋಂಕು, 4 ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು, ಭಾನುವಾರ ಹೊಸದಾಗಿ 1,837 ಕೊರೊನಾ ಸೋಂಕು ವರದಿಯಾಗಿದ್ದು, ಸೋಂಕಿಗೆ 4 ಮಂದಿ ಸಾವಿಗೀಡಾಗಿದ್ದಾರೆ.
ನಿನ್ನೆ, ಶನಿವಾರ 1,694 ಪ್ರಕರಣಗಳಿಗೆ ಹೋಲಿಸಿದರೆ ಇಂದು, ಭಾನುವಾರ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದೆ. ಇದೇವೇಳೆ ಇಂದು ರಾಜ್ಯದಲ್ಲಿ 1,290 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದ ಪಾಸಿಟಿವಿಟಿ ರೇಟ್ ಶೇ. 6.24ಕ್ಕೆ ತಲುಪಿದೆ.
ರಾಜ್ಯದಲ್ಲಿ ಒಟ್ಟು 11,898 ಸಕ್ರಿಯ ಪ್ರಕರಣಗಳಿವೆ. ಬೆಂಗಳೂರು ನಗರದಲ್ಲಿ ಇಂದು ಕೂಡ ಕೊರೊನಾ ಪ್ರಕರಣಗಳು ಸಂಖ್ಯೆ ಸಾವಿರ ಗಡಿದಾಟಿದೆ. ಇಂದು, ಒಟ್ಟು 1,137 ಪ್ರಕರಣ ಪತ್ತೆಯಾಗಿದೆ. ನಗರದ ಸಕ್ರಿಯ ಪ್ರಕರಣಗಳ ಸಂಖ್ಯೆ 8,283ಕ್ಕೆ ತಲುಪಿದೆ.

ರಾಜ್ಯದಲ್ಲಿ ಇಂದು ಒಟ್ಟು 4,956 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 29,425 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬೆಂಗಳೂರು ನಗರ 1,137, ಬಾಗಲಕೋಟೆ 28, ಬಳ್ಳಾರಿ 55, ಬೆಳಗಾವಿ 57, ಬೆಂಗಳೂರು ಗ್ರಾಮಾಂತರ 36, ಬೀದರ್ 5, ಚಾಮರಾಜನಗರ 19, ಚಿಕ್ಕಬಳ್ಳಾಪುರ 7, ಚಿಕ್ಕಮಗಳೂರು 15, ಚಿತ್ರದುರ್ಗ 4, ದಕ್ಷಿಣ ಕನ್ನಡ 15, ದಾವಣಗೆರೆ 25, ಧಾರವಾಡ 113, ಗದಗ 1, ಹಾಸನ 15, ಹಾವೇರಿ 17, ಕಲಬುರಗಿ 26, ಕೊಡಗು 32, ಕೋಲಾರ 26, ಕೊಪ್ಪಳ 24, ಮಂಡ್ಯ 4, ಮೈಸೂರು 83, ರಾಯಚೂರು 18, ರಾಮನಗರ 2, ಶಿವಮೊಗ್ಗ 20, ತುಮಕೂರು 26, ಉಡುಪಿ 5, ಉತ್ತರ ಕನ್ನಡ 16, ವಿಜಯಪುರ 6 ಮತ್ತು ಯಾದಗಿರಿ-ಶೂನ್ಯ ಪ್ರಕರಣ ದಾಖಲಾಗಿದೆ.

ಪ್ರಮುಖ ಸುದ್ದಿ :-   ಹತ್ಯೆಗೀಡಾದ ನೇಹಾ ಹಿರೇಮಠ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ; ಕುಟುಂಬಸ್ಥರಿಗೆ ಸಾಂತ್ವನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement