ನೋಯ್ಡಾದಲ್ಲಿ ಮಹಿಳೆ ಹಲ್ಲೆ ಪ್ರಕರಣ: ಪರಾರಿಯಾಗಿದ್ದ ಶ್ರೀಕಾಂತ್ ತ್ಯಾಗಿ, ಮೂವರು ಸಹಚರ ಬಂಧನ

ನವದೆಹಲಿ: ಮಹಿಳೆ ಮೇಲೆ ಹಲ್ಲೆ ಮಾಡಿ ತಲೆಮರೆಸಿಕೊಂಡಿದ್ದ ಶ್ರೀಕಾಂತ್ ತ್ಯಾಗಿಯನ್ನು ಬಂಧಿಸಲಾಗಿದೆ ಎಂದು ನೋಯ್ಡಾ ಪೊಲೀಸರು ಖಚಿತಪಡಿಸಿದ್ದಾರೆ. ಮಹಿಳೆಯೊಬ್ಬರನ್ನು ನಿಂದಿಸಿದ ಮತ್ತು ಹಲ್ಲೆ ಮಾಡಿದ ವಿಡಿಯೋ ವೈರಲ್ ಆದ ನಂತರ ಪರಾರಿಯಾಗಿದ್ದ ಆತನನ್ನು ಮೀರತ್‌ನಲ್ಲಿ ಬಂಧಿಸಿ ಪೊಲೀಸರು ಮಂಗಳವಾರ ಕರೆದೊಯ್ದಿದ್ದಾರೆ. ಅಲ್ಲದೆ, ಶ್ರೀಕಾಂತ್ ತ್ಯಾಗಿಯ ಮೂವರು ಸಹಚರರನ್ನು ಬಂಧಿಸಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ಖಚಿತಪಡಿಸಿದ್ದಾರೆ.
ಮಹಿಳೆಯೊಂದಿಗೆ ತೀವ್ರ ವಾಗ್ವಾದಕ್ಕಿಳಿದ ನಂತರ ಅವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಶ್ರೀಕಾಂತ್ ತ್ಯಾಗಿ ವಿರುದ್ಧ ನೋಯ್ಡಾ ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿದ್ದರು. ಇಡೀ ದೃಶ್ಯದ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಪ್ರಮುಖ ಆರೋಪಿ ತ್ಯಾಗಿ ತಾನು ಬಿಜೆಪಿಯ ಕಿಸಾನ್ ಮೋರ್ಚಾದ ಸದಸ್ಯ ಎಂದು ಪದೇ ಪದೇ ಹೇಳುವುದನ್ನು ಅದರಲ್ಲಿ ನೋಡಬಹುದಾಗಿದೆ, ಆದರೆ ಬಿಜೆಪಿ ಇದನ್ನು ನಿರಾಕರಿಸಿದೆ.

ನಿಯಮಗಳ ಉಲ್ಲಂಘನೆಯನ್ನು ಉಲ್ಲೇಖಿಸಿ ತ್ಯಾಗಿ ನೆರೆಹೊರೆಯಲ್ಲಿ ಕೆಲವು ಮರಗಳನ್ನು ನೆಡಲು ಮುಂದಾಗಿದ್ದನ್ನು ಮಹಿಳೆ ವಿರೋಧಿಸಿದ ನಂತರ ತ್ಯಾಗಿ ಮಹಿಳೆಯನ್ನು ನಿಂದಿಸಿದ ನಂತರ ಹಲ್ಲೆ ನಡೆಸಿದ್ದಾನೆ, ಅಲ್ಲದೆ ಆಕೆಯ ಪತಿಗೆ ನಿಂದನೀಯ ಪದಗಳನ್ನು ಬಳಸಿದ್ದು, ಆಕೆಯ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ್ದಾನೆ.
ವೀಡಿಯೊ ಬೆಳಕಿಗೆ ಬರುತ್ತಿದ್ದಂತೆ, ತ್ಯಾಗಿ ವಿರುದ್ಧ ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 419, 420, ಮತ್ತು 482 354 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸೆಕ್ಟರ್ 93B ನಲ್ಲಿ ಹೌಸಿಂಗ್ ಸೊಸೈಟಿಯ ಸಹ-ನಿವಾಸಿಗಳೊಂದಿಗೆ ಜಗಳವಾಡಿದ್ದಾನೆ. ಆತನ ವಿರುದ್ಧ ದರೋಡೆಕೋರರ ಕಾಯ್ದೆಯನ್ನೂ ಹಾಕಲಾಗಿದೆ.
ಇದಾದ ನಂತರ, ಶ್ರೀಕಾಂತ್ ತ್ಯಾಗಿಯನ್ನು ಬಂಧಿಸಲು ಉತ್ತರ ಪ್ರದೇಶ ಪೊಲೀಸರು 40 ಕ್ಕೂ ಹೆಚ್ಚು ಪೊಲೀಸರೊಂದಿಗೆ 12 ತಂಡಗಳನ್ನು ರಚಿಸಿದರು. ನಂತರ ಆರೋಪಿಯನ್ನು ಉತ್ತರಾಖಂಡಕ್ಕೆ ಪತ್ತೆಹಚ್ಚಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೇ ಗೃಹ ಇಲಾಖೆಯಿಂದ ವರದಿ ಕೇಳಿದ್ದಾರೆ.
ಏತನ್ಮಧ್ಯೆ, ನೋಯ್ಡಾದ ಸೆಕ್ಟರ್ 93 ರಲ್ಲಿ ಗ್ರ್ಯಾಂಡ್ ಒಮ್ಯಾಕ್ಸ್‌ನಲ್ಲಿ ಆತನ ನಿವಾಸದಲ್ಲಿ ಅಕ್ರಮ ನಿರ್ಮಾಣವನ್ನು ಆಡಳಿತವು ನೆಲಸಮಗೊಳಿಸಿತು.

ಪ್ರಮುಖ ಸುದ್ದಿ :-   ಕುಖ್ಯಾತ ಗ್ಯಾಂಗ್‌ಸ್ಟರ್‌-ರಾಜಕಾರಣಿ ಮುಖ್ತಾರ್ ಅನ್ಸಾರಿ ಹೃದಯಾಘಾತದಿಂದ ಸಾವು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement