ಬೆಳಗಾವಿ : ಸೆರೆಯಾಗದ ಚಿರತೆ, ನಾಳೆಯೂ 21 ಶಾಲೆಗಳಿಗೆ ರಜೆ

ಬೆಳಗಾವಿ: ಬೆಳಗಾವಿಯ ಗಾಲ್ಫ್ ಮೈದಾನ ಪ್ರದೇಶದಲ್ಲಿ ಅವಿತುಕೊಂಡಿರುವ ಚಿರತೆಯ ಶೋಧ ಹಾಗೂ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಯುತ್ತಿದ್ದರೂ ಸೆರೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಬೆಳಗಾವಿಯ ಕೆಲ ಶಾಲೆಗಳಿಗೆ ಬುಧವಾರ  ರಜೆ ಘೋಷಣೆ ಮಾಡಲಾಗಿದೆ.
ನಗರ ಶಿಕ್ಷಣ ವಲಯದ 12 ಹಾಗೂ ಗ್ರಾಮೀಣ ಶಿಕ್ಷಣ ವಲಯದ‌ 9 ಶಾಲೆಗಳಿಗೆ ಬುಧವಾರ(ಆಗಸ್ಟ್‌ 10) ರಜೆಯನ್ನು ಘೋಷಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೆಶಕ ಬಸವರಾಜ ನಾಲತವಾಡ ತಿಳಿಸಿದ್ದಾರೆ.
ಇಲ್ಲಿನ ಗಾಲ್ಫ್ ಮೈದಾನದ ಮರಗಳ ಪೊದರಿನಲ್ಲಿ ಕಳೆದ ಐದು ದಿನಗಳಿಂದ ಅವಿತುಕೊಂಡ ಚಿರತೆಯ ಚಿತ್ರ ಸೋಮವಾರ ರಾತ್ರಿ ಟ್ರ್ಯಾಪ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಚಿರತೆ ಇನ್ನೂ ನಗರದೊಳಗೇ ಓಡಾಡುತ್ತಿದೆ ಎಂದು ವಲಯ ಅರಣ್ಯ ಇಲಾಖೆ ಸಿಬ್ಬಂದಿ ಹೇಳಿದ್ದು, ಬೆಳಗಾವಿಯ ಗಾಲ್ಫ್ ಮೈದಾನದ ಸುತ್ತಮುತ್ತ 16 ಟ್ರ್ಯಾಕ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಹಲವು ಕಡೆ ಬೋನುಗಳನ್ನೂ ಇಡಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement