ಕೇರಳದ ಮಲಪ್ಪುರಂನಲ್ಲಿ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಯಲ್ಲಿ ಒಟ್ಟಿಗೆ ತೇರ್ಗಡೆಯಾದ ತಾಯಿ-ಮಗ…!

ಮಲಪ್ಪುರಂ: ತಾಯಿ ಹಾಗೂ ಮಗ ಒಟ್ಟಿಗೇ ಕೋಚಿಂಗ್ ಹೋಗಿ, ಪಬ್ಲಿಕ್ ಸರ್ವಿಸ್ ಕಮಿಷನರ್(ಪಿಎಸ್‌ಸಿ) ಪರೀಕ್ಷೆ ಬರೆದು ಪಾಸಾಗಿರುವ ಘಟನೆ ಕೇರಳದಲ್ಲಿ ವರದಿಯಾಗಿದೆ. ತಾಯಿ ಮಗನ ಸಾಧನೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಲಪ್ಪುರಂ ಮೂಲದ 42 ವರ್ಷದ ಬಿಂದು ಹಾಗೂ ಅವರ ಮಗ 24 ವರ್ಷದ ವಿವೇಕ್ ಒಟ್ಟಿಗೇ ಪಿಎಸ್‌ಸಿ ಪರೀಕ್ಷೆ ಬರೆದು ತೇರ್ಗಡೆಯಾಗಿದ್ದಾರೆ. ಬಿಂದು ಲೋವರ್ ಡಿವಿಜನ್ ಕ್ಲರ್ಕ್(ಎಲ್‌ಡಿಸಿ) ಪರೀಕ್ಷೆಯಲ್ಲಿ 38 ನೇ ರ‍್ಯಾಂಕ್‌ನೊಂದಿಗೆ ಉತ್ತೀರ್ಣರಾಗಿದ್ದು, ಅವರ ಪುತ್ರ ವಿವೇಕ್ ಲಾಸ್ಟ್ ಗ್ರೇಡ್ ಸರ್ವೆಂಟ್(ಎಲ್‌ಜಿಎಸ್) ಪರೀಕ್ಷೆಯಲ್ಲಿ 92 ನೇ ರ‍್ಯಾಂಕ್‌ನೊಂದಿಗೆ ಪಾಸಾಗಿದ್ದಾರೆ.
ಬಿಂದುವಿನ ಮೊದಲ ಮೂರು ಪ್ರಯತ್ನಗಳು – LGS ಪರೀಕ್ಷೆಗೆ ಎರಡು ಮತ್ತು LDC ಗಾಗಿ ಒಂದು – ವಿಫಲವಾದವು. ಅವರು ಅಂತಿಮವಾಗಿ ತನ್ನ ನಾಲ್ಕನೇ ಪ್ರಯತ್ನದಲ್ಲಿ ಪರೀಕ್ಷೆ ಪಾಸ್‌ ಆಗಿದ್ದಾರೆ.

ಒಂದು ದಶಕದಿಂದ ಅಂಗನವಾಡಿ ಕೇಂದ್ರದಲ್ಲಿ ಬೋಧನೆ ಮಾಡುತ್ತಿರುವ ಬಿಂದು, ತನ್ನ ಕುಟುಂಬ ಮತ್ತು ಕೋಚಿಂಗ್ ಸೆಂಟರ್‌ನಲ್ಲಿನ ಬೋಧಕರು ನಿರಂತರ ಸ್ಫೂರ್ತಿ ಮತ್ತು ಬೆಂಬಲದ ಮೂಲವಾಗಿದೆ ಎಂದು ಹೇಳಿದರು.
ಬಿಂದು ತನ್ನ ಮಗ 10 ನೇ ತರಗತಿಯಲ್ಲಿದ್ದಾಗ ಪ್ರೋತ್ಸಾಹ ನೀಡಲು ತಾವು ಕೂಡಾ ಪುಸ್ತಕಗಳನ್ನು ಓದಲು ಪ್ರಾರಂಭಿಸಿದ್ದರು. ಇದು ಅಂತಿಮವಾಗಿ ಕೇರಳ ಪಿಎಸ್‌ಸಿ ಪರೀಕ್ಷೆಗೆ ತಯಾರಾಗಲು ಅವರನ್ನು ಪ್ರೇರೇಪಿಸಿತು. ಇದೀಗ 9 ವರ್ಷಗಳ ಬಳಿಕ ಬಿಂದು ಅವರು ತಮ್ಮ ಮಗನೊಂದಿಗೆ ಸರ್ಕಾರಿ ಕೆಲಸಕ್ಕೆ ಸೇರಲು ಮುಂದಾಗಿದ್ದಾರೆ.
ತಾಯಿಯೊಂದಿಗೆ ಪರೀಕ್ಷೆಯಲ್ಲಿ ತೇರ್ಗಡೆಯಾದ ಬಗ್ಗೆ ಸಂತಸ ವ್ಯಕ್ತಪಡಿಸಿದ ವಿವೇಕ್, ನಾವು ಒಟ್ಟಿಗೆ ಕೋಚಿಂಗ್ ಕ್ಲಾಸ್‌ಗೆ ಹೋಗಿದ್ದೆವು. ನನ್ನ ತಂದೆ ಇದಕ್ಕಾಗಿ ನಮಗಿಬ್ಬರಿಗೂ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿದ್ದರು. ನಮ್ಮ ಶಿಕ್ಷಕರಿಂದಲೂ ನಮಗೆ ಸಾಕಷ್ಟು ಪ್ರೇರಣೆ ಸಿಕ್ಕಿತು. ನಾವಿಬ್ಬರೂ ಒಟ್ಟಿಗೆ ಓದಿದ್ದೇವೆ ನಿಜ, ಆದರೆ ನಾವು ಒಟ್ಟಿಗೆ ತೇರ್ಗಡೆ ಹೊಂದುತ್ತೇವೆ ಎಂದು ಯಾವತ್ತೂ ಯೋಚಿಸಿರಲಿಲ್ಲ ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಜೆಡಿಯು ಯುವ ಮುಖಂಡನ ಗುಂಡಿಕ್ಕಿ ಹತ್ಯೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement