ಧಾರವಾಡ : 2021ನೇ ಸಾಲಿನ ರಾಷ್ಟ್ರೀಯ ಯುವ ಐಕಾನ್ ಪ್ರಶಸ್ತಿಗೆ ಕರ್ನಾಟಕ ವಿವಿಯ ಸಂಜಯಕುಮಾರ ಬಿರಾದಾರ ಆಯ್ಕೆ

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಸಾರ್ವಜನಿಕ ಆಡಳಿತ ವಿಭಾಗದ ವಿದ್ಯಾರ್ಥಿ ಹಾಗೂ ಎನ್.ಎಸ್.ಎಸ್ ಸ್ವಯಂ ಸೇವಕ ಸಂಜಯಕುಮಾರ ಯಂಕನಗೌಡ ಬಿರಾದಾರ ಅವರನ್ನು “2021ನೇ ಸಾಲಿನ ರಾಷ್ಟ್ರೀಯ ಯುವ ಐಕಾನ್ ಪ್ರಶಸ್ತಿಗೆ” ಆಯ್ಕೆ ಮಾಡಲಾಗಿದೆ.
ಅಂತಾರಾಷ್ಟ್ರೀಯ ಯುವ ದಿನಾಚರಣೆಯ ಅಂಗವಾಗಿ ನ್ಯಾಷನಲ್ ಯೂತ್ ಅವಾರ್ಡಿಸ್ ಆಫ್ ಫೆಡರೇಶನ್ ಹಾಗೂ ನ್ಯಾಷನಲ್ ಯೂತ್ ಫೋರಂ ಆಫ್ ಇಂಡಿಯಾ” ಸಹಯೋಗದಲ್ಲಿ ಪ್ರತಿವರ್ಷ ಯುವ ಸಮಾಜ ಸೇವಕರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಯುವ ಸಮಾಜ ಸೇವೆ ಹಾಗೂ ಎನ್.ಎಸ್.ಎಸ್ ಕಾರ್ಯವೈಖರಿ ಗುರುತಿಸಿ “2021_ನೇ ಸಾಲಿನ ರಾಷ್ಟ್ರೀಯ ಯುವ ಐಕಾನ್ ಪ್ರಶಸ್ತಿಗೆ ಕರ್ನಾಟಕದಿಂದ ಸಂಜಯಕುಮಾರ ಯಂಕನಗೌಡ ಬಿರಾದಾರ ಅವರನ್ನು ಆಯ್ಕೆ ಮಾಡಲಾಗಿದೆ.

ಆಗಸ್ಟ್ 12 ರಂದು ದೆಹಲಿಯ ಮಹಾರಾಷ್ಟ್ರ ಸದನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕೇಂದ್ರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವರಾದ ಅನುರಾಗ ಠಾಕೂರ್, ಇನ್ನಿತರ ಗಣ್ಯರು ಸೇರಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ರಾಷ್ಟ್ರೀಯ ಯೂತ್ ಫೋರಂನ ಅಧ್ಯಕ್ಷ ಪುನೀತ್ ಪ್ರಧಾನ ತಿಳಿಸಿದ್ದಾರೆ. ರಾಷ್ಟ್ರೀಯ ಯುವ ಐಕಾನ್ ಪ್ರಶಸ್ತಿಗೆ ಭಾಜನರಾದ ಸಂಜಯಕುಮಾರ ಬಿರಾದಾರ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಕೆ. ಬಿ. ಗುಡಸಿ, ವಿಭಾಗದ ಮುಖ್ಯಸ್ಥರಾದ ಡಾ. ಬಿ.ಎಂ.ರತ್ನಾಕರ ಮತ್ತು ಶಿಕ್ಷಕ ಸಿಬ್ಬಂದಿ ಅಭಿನಂದಿಸಿದ್ದಾರೆ.

ಪ್ರಮುಖ ಸುದ್ದಿ :-   ರಾಜ್ಯದ ಹಲವೆಡೆ ಮಳೆ : ವಿಜಯಪುರದಲ್ಲಿ ಐತಿಹಾಸಿಕ ಸ್ಮಾರಕ ಮೆಹತರ್ ಮಹಲಿನ ಮೀನಾರ್ ಮೇಲ್ತುದಿಗೆ ಹಾನಿ, ಕುಷ್ಟಗಿಯಲ್ಲಿ ಸಿಡಿಲಿಗೆ ರೈತ ಸಾವು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement