ಜಾತಿ ವಿವಾದದ ಪ್ರಕರಣ: ಸಮೀರ್ ವಾಂಖೆಡೆಗೆ ಕ್ಲೀನ್ ಚಿಟ್

ಮುಂಬೈ: ಸರ್ಕಾರಿ ನೌಕರಿ ಪಡೆಯಲು ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಸಿದ ಆರೋಪ ಎದುರಿಸುತ್ತಿರುವ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (ಎನ್‌ಸಿಬಿ)ಯ ಮುಂಬೈ ವಲಯದ ಮಾಜಿ ನಿರ್ದೇಶಕ ಸಮೀರ್ ವಾಂಖೆಡೆ ಅವರಿಗೆ ಜಾತಿ ಪರಿಶೀಲನಾ ಸಮಿತಿ ಕ್ಲೀನ್ ಚಿಟ್ ನೀಡಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಮಹಾರಾಷ್ಟ್ರ ಸರ್ಕಾರದ ಸಾಮಾಜಿಕ ನ್ಯಾಯ ಇಲಾಖೆ ಶುಕ್ರವಾರ ಈ ಆದೇಶ ಹೊರಡಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಾರತೀಯ ಕಂದಾಯ ಸೇವೆ (ಐಆರ್‌ಎಸ್) ಅಧಿಕಾರಿಯಾಗಿರುವ ವಾಂಖೆಡೆ ಅವರು ಮುಸ್ಲಿಮರಲ್ಲ ಮತ್ತು ಅವರು ಪರಿಶಿಷ್ಟ ಜಾತಿ (ಎಸ್‌ಸಿ) ಆಗಿರುವ ಮಹಾರ್ ಜಾತಿಗೆ ಸೇರಿದವರು ಎಂದು ಸಾಬೀತಾಗಿದೆ ಎಂದು ಆದೇಶವು ಹೇಳಿದೆ.
ವಾಂಖೆಡೆಯ ಜಾತಿಯ ವಿಷಯದ ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ಎನ್‌ಸಿಪಿ ನಾಯಕ ನವಾಬ್ ಮಲಿಕ್ ಅವರು ಸಮೀರ್‌ ವಿರುದ್ಧ ಆರೋಪ ಮಾಡಿದ್ದರು. ಅಲ್ಲದೆ, ರಾಜಕೀಯ ಮುಖಂಡರಾದ ಮನೋಜ್ ಸಂಸಾರೆ, ಅಶೋಕ್ ಕಾಂಬ್ಳೆ ಮತ್ತು ಸಂಜಯ್ ಕಾಂಬ್ಳೆ ಸೇರಿದಂತೆ ಹಲವರು ದೂರು ಸಲ್ಲಿಸಿದ್ದರು.

ಮುಂಬೈ ಜಿಲ್ಲಾ ಜಾತಿ ಪ್ರಮಾಣ ಪತ್ರ ಪರಿಶೀಲನಾ ಸಮಿತಿಯು ಈ ದೂರುಗಳನ್ನು ಪರಿಶೀಲಿಸಿ ಶುಕ್ರವಾರ ಆದೇಶ ಹೊರಡಿಸಿದೆ ಹಾಗೂ ಸಮೀರ್‌ ವಾಂಖೆಡೆ ಅವರಿಗೆ ಕ್ಲೀನ್‌ ಚಿಟ್‌ ನೀಡಿದೆ.
ಆರೋಪಿಸಿದಂತೆ ವಾಂಖೆಡೆ ಮತ್ತು ಅವರ ತಂದೆ ಜ್ಞಾನದೇವ್ ವಾಂಖೆಡೆ ಹಿಂದೂ ಧರ್ಮ ತ್ಯಜಿಸಿ ಇಸ್ಲಾಂಗೆ ಮತಾಂತರಗೊಂಡಿದ್ದಾರೆ ಎಂಬುದಕ್ಕೆ ಸಾಕ್ಷ್ಯವಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ. ವಾಂಖೆಡೆ ಮತ್ತು ಅವರ ಮಾವ ಮಹಾರ್-37 ಪರಿಶಿಷ್ಟ ಜಾತಿಗೆ ಸೇರಿದವರು ಎಂಬುದು ಸಾಬೀತಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಮುಖ ಸುದ್ದಿ :-   ಸುಪ್ರೀಂ ಕೋರ್ಟ್ ತರಾಟೆ ನಂತರ ದೊಡ್ಡದಾಗಿ ಕ್ಷಮೆಯಾಚನೆ ಪ್ರಕಟಿಸಿದ ಪತಂಜಲಿ ಸಂಸ್ಥೆ

ವಾಂಖೆಡೆಯ ಜಾತಿ ಹಕ್ಕು ಮತ್ತು ಜಾತಿ ಪ್ರಮಾಣಪತ್ರದ ಧರ್ಮದ ಬಗ್ಗೆ ನವಾಬ್ ಮಲಿಕ್ ಮತ್ತು ಇತರರು ಸಲ್ಲಿಸಿದ ದೂರುಗಳಲ್ಲಿ ಯಾವುದೇ ಪುರಾವೆಯಿಲ್ಲ, ನಂತರ ದೂರಿನಲ್ಲಿ ವಾಸ್ತವಾಂಶದ ಕೊರತೆಯಿಂದ ದೂರುಗಳನ್ನು ತಿರಸ್ಕರಿಸಲಾಗುತ್ತಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮುಂಬೈ ಕ್ರೂಸ್‌ನಲ್ಲಿ 2021 ರ ಅಕ್ಟೋಬರ್‌ನಲ್ಲಿ ಎನ್‌ಸಿಬಿ ನಡೆಸಿದ ಹೈ-ಪ್ರೊಫೈಲ್ ದಾಳಿಯ ನೇತೃತ್ವ ವಹಿಸಿದ್ದ ವಾಂಖೆಡೆ ಸುದ್ದಿಯಲ್ಲಿದ್ದರು. ನಂತರ ಏಜೆನ್ಸಿಯು ನಟ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಮತ್ತು 19 ಇತರರನ್ನು ಬಂಧಿಸಿತು ಮತ್ತು ಕೆಲವು ಮಾದಕವಸ್ತುಗಳನ್ನು ವಶಪಡಿಸಿಕೊಂಡಿದೆ ಎಂದು ಹೇಳಿಕೊಂಡಿದೆ. ನಂತರ ಎನ್‌ಸಿಬಿ ಆರ್ಯನ್ ಖಾನ್‌ಗೆ ಕ್ಲೀನ್ ಚಿಟ್ ನೀಡಿತ್ತು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement