ಭಯೋತ್ಪಾದಕರ ಜೊತೆ ಸಂಪರ್ಕ: ಕಾಶ್ಮೀರಿ ಪಂಡಿತರ ಹತ್ಯೆ ಆರೋಪಿ ಬಿಟ್ಟಾ ಕರಾಟೆ ಪತ್ನಿ ಸೇರಿ ನಾಲ್ವರು ಸರ್ಕಾರಿ ಅಧಿಕಾರಿಗಳ ವಜಾ

ಜಮ್ಮು: 1990ರ ದಶಕದಲ್ಲಿ ಕಾಶ್ಮೀರಿ ಪಂಡಿತರ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಭಯೋತ್ಪಾದಕ-ನಿಧಿ ಆರೋಪ ಎದುರಿಸುತ್ತಿರುವ ಭಯೋತ್ಪಾದಕ ಬಿಟ್ಟಾ ಕರಾಟೆಯ ಪತ್ನಿ ಸೇರಿದಂತೆ ತನ್ನ ನಾಲ್ವರು ಸರ್ಕಾರಿ ಉದ್ಯೋಗಿಗಳನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರ ವಜಾಗೊಳಿಸಿದೆ.
ಭಯೋತ್ಪಾದಕ ಸಂಪರ್ಕಕ್ಕಾಗಿ ನಾಲ್ವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಭಯೋತ್ಪಾದಕ ಫಾರೂಕ್ ಅಹ್ಮದ್ ದಾರ್ ಅಲಿಯಾಸ್ ಬಿಟ್ಟಾ ಕರಾಟೆ ಆಘಾತಕಾರಿ ವೀಡಿಯೊ ತಪ್ಪೊಪ್ಪಿಗೆಯಲ್ಲಿ ತಾನು ಹತ್ಯೆ ಮಾಡಿದ ಮೊದಲ ಕಾಶ್ಮೀರಿ ಪಂಡಿತ ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನೆಯ ಮೊದಲ ಬಲಿಪಶುಗಳಲ್ಲಿ ಒಬ್ಬರಾದ ಸತೀಶ ಟಿಕೂ ಎಂದು ಒಪ್ಪಿಕೊಂಡಿದ್ದಾನೆ.
ಈ ವರ್ಷದ ಮೇ ತಿಂಗಳಲ್ಲಿ, ಸತೀಶ ಟಿಕೂ ಅವರ ಕುಟುಂಬವು ಬಿಟ್ಟಾ ಕರಾಟೆ ಅವರ ವೀಡಿಯೊ ತಪ್ಪೊಪ್ಪಿಗೆಯನ್ನು ದಾಖಲೆಯಲ್ಲಿ ಇರಿಸಲು ಅರ್ಜಿ ಸಲ್ಲಿಸಿತು. ಈ ಅರ್ಜಿಯನ್ನು ವಕೀಲ ಉತ್ಸವ್ ಬೈನ್ಸ್ ಮೂಲಕ ಸಲ್ಲಿಸಲಾಯಿತು ಮತ್ತು ಸಾಮಾಜಿಕ ಕಾರ್ಯಕರ್ತ ವಿಕಾಸ ರೈನಾ ಬೆಂಬಲಿಸಿದರು.

ಬಿಟ್ಟಾ ಕರಾಟೆ 1990 ರ ದಶಕದಲ್ಲಿ ಅನೇಕ ಇತರ ಕಾಶ್ಮೀರಿ ಪಂಡಿತರನ್ನು ಕೊಂದ ಆರೋಪ ಹೊತ್ತಿದ್ದಾರೆ. ಕಾಶ್ಮೀರ ವಿಶ್ವವಿದ್ಯಾನಿಲಯದ ಕಂಪ್ಯೂಟರ್ ಸೈನ್ಸ್‌ನ ಸ್ನಾತಕೋತ್ತರ ವಿಭಾಗದ ಡಾ. ಮುಹೀತ್ ಅಹ್ಮದ್ ಭಟ್, ಕಾಶ್ಮೀರ ವಿಶ್ವವಿದ್ಯಾಲಯದ ಮ್ಯಾನೇಜ್‌ಮೆಂಟ್ ಸ್ಟಡೀಸ್ ವಿಭಾಗ ಹಿರಿಯ ಸಹಾಯಕ ಪ್ರಾಧ್ಯಾಪಕ ಮಜೀದ್ ಹುಸೇನ್ ಖಾದ್ರಿ, IT, JKEDI ವ್ಯವಸ್ಥಾಪಕ ಸೈಯದ್ ಅಬ್ದುಲ್ ಮುಯೀದ್ ಅಸ್ಸಾಬಾ-ಉಲ್-ಅರ್ಜಮಂಡ್ ಖಾನ್, ಫಾರೂಕ್ ಅಹ್ಮದ್ ದಾರ್ (ಅಲಿಯಾಸ್ ಬಿಟ್ಟಾ ಕರಾಟೆ) ಪತ್ನಿ ಹಾಗೂ ಕಾಶ್ಮೀರದ ಗ್ರಾಮೀಣಾಭಿವೃದ್ಧಿ ನಿರ್ದೇಶನಾಲಯದ JKAS, DPO ಅಸ್ಸಾಬಾ-ಉಲ್-ಅರ್ಜಮಂಡ್ ಖಾನ್ ಅವರನ್ನು ವಜಾಗೊಳಿಸಲಾಗಿದೆ ಎಂದು ಹೇಳಲಾಗಿದೆ.

ಪ್ರಮುಖ ಸುದ್ದಿ :-   ಸ್ವಾತಿ ಮಲಿವಾಲ್ ಹಲ್ಲೆ ಪ್ರಕರಣ : ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಆಪ್ತ ಸಹಾಯಕನ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement