ಜಪಾನ್‌ನಲ್ಲಿರುವ ನೇತಾಜಿ ಅಸ್ಥಿ ಸ್ವತಂತ್ರ ಭಾರತಕ್ಕೆ ಬರುವಂತಾಗಬೇಕು: ಸರ್ಕಾರಕ್ಕೆ ಮಗಳು ಅನಿತಾ ಬೋಸ್ ಮನವಿ

ನವದೆಹಲಿ: ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ದೇಹದ ಅವಶೇಷಗಳನ್ನು ಭಾರತಕ್ಕೆ ತರಬೇಕು ಎಂದು ಅವರ ಮಗಳು ಅನಿತಾ ಬೋಸ್ ಪಾಫ್ ಒತ್ತಾಯಿಸಿದ್ದಾರೆ.
1945ರ ಆಗಸ್ಟ್ 18ರಂದು ಅವರು ಮೃತಪಟ್ಟಿದ್ದರು ಎನ್ನಲಾದ ವರದಿಗಳ ಬಗ್ಗೆ ಈಗಲೂ ಅನುಮಾನ ಇರುವ ಕಾರಣ ಡಿಎನ್‌ಎ ಪರೀಕ್ಷೆಯಿಂದ ಇದಕ್ಕೆ ಉತ್ತರ ಸಿಗಬಹುದು ಎಂದು ಹೇಳಿದ್ದಾರೆ.
ಹಾಲಿ ಜರ್ಮನಿಯಲ್ಲಿ ನೆಲೆಸಿರುವ ಅರ್ಥಶಾಸ್ತ್ರಜ್ಞೆ ಅನಿತಾ ಬೋಸ್, ಟೋಕಿಯಾದ ರೆಂಕೋಜಿ ದೇಗುಲದಲ್ಲಿ ಇರಿಸಿರುವ ಅಸ್ಥಿ ನೇತಾಜಿ ಅವರದ್ದೇ ಎನ್ನುವುದಕ್ಕೆ ವೈಜ್ಞಾನಿಕ ಪುರಾವೆ ಪಡೆದುಕೊಳ್ಳಲು ಡಿಎನ್‌ಎ ಪರೀಕ್ಷೆಯಿಂದ ಸಾಧ್ಯವಾಗಬಹುದು. ಇದಕ್ಕೆ ಜಪಾನ್ ಸರ್ಕಾರ ಸಹ ಒಪ್ಪಿದೆ ಎಂದು ಹೇಳಿದ್ದಾರೆ.

ನನ್ನ ತಂದೆ ದೇಶದ ಸ್ವಾತಂತ್ರ್ಯದ ಆನಂದವನ್ನು ಅನುಭವಿಸಲು ಬದುಕಿರಲಿಲ್ಲ. ನೇತಾಜಿ ಅವರಿಗೆ ತಮ್ಮ ದೇಶದ ಸ್ವಾತಂತ್ರ್ಯದ ಹೊರತಾಗಿ ಬೇರಾವುದೂ ಮುಖ್ಯವಾಗಿರಲಿಲ್ಲ”ಹೀಗಾಗಿ ಕಡೇಪಕ್ಷ ಅವರ ಅಸ್ಥಿಯಾದರೂ ಭಾರತದ ಮಣ್ಣಿಗೆ ಮರಳಿದರೆ ಸಮಾಧಾನ ಎಂದು ನೇತಾಜಿ ಮಗಳು ತಿಳಿಸಿದ್ದಾರೆ.
ರೆಂಕೋಜಿ ದೇವಾಲಯ ಮತ್ತು ಜಪಾನ್ ಸರ್ಕಾರ ಇಂತಹ ಪರೀಕ್ಷೆಗೆ ಒಪ್ಪಿಕೊಂಡಿದೆ. ನೇತಾಜಿ ಸಾವಿನ ಬಗ್ಗೆ ಕಳೆದ ಭಾರತ ಸರ್ಕಾರದ ತನಿಖೆಯ (ನ್ಯಾ. ಮುಖರ್ಜಿ ಆಯೋಗದ ತನಿಖೆ) ದಾಖಲೆಗಳಲ್ಲಿ ಇದನ್ನು ತಿಳಿಸಲಾಗಿದೆ. ಹೀಗಾಗಿ ಕೊನೆಗೂ ಅವರನ್ನು ಅವರ ದೇಶಕ್ಕೆ ಅವಕಾಶ ನೀಡಿ ಎಂದು ನೇತಾಜಿ ಮಗಳು ಕೋರಿದ್ದಾರೆ.
, ತಮ್ಮ ಸ್ವತಂತ್ರ ದೇಶಕ್ಕೆ ಮರಳುವ ನೇತಾಜಿ ಅವರ ಮಹದಾಸೆಯನ್ನು ಈ ರೀತಿಯಾದರೂ ಈಡೇರಿಸುವ ಮೂಲಕ ಅವರಿಗೆ ಗೌರವ ಸಲ್ಲಿಸುವ ಸೂಕ್ತ ಸಮಾರಂಭಗಳನ್ನು ಆಯೋಜಿಸುವಂತೆ ಮಾಡುವುದು ನನ್ನ ಬಯಕೆ ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   'ಐಸ್‌ಕ್ರೀಂ ಮ್ಯಾನ್‌' ಖ್ಯಾತಿಯ ನ್ಯಾಚುರಲ್ಸ್ ಐಸ್ ಕ್ರೀಂ ಸಂಸ್ಥಾಪಕ ರಘುನಂದನ ಕಾಮತ್ ನಿಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement