ಮೇ ತಿಂಗಳಲ್ಲಿ ನಡೆದಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ಫಲಿತಾಂಶ ಪ್ರಕಟ

ಬೆಂಗಳೂರು: ಮೇ ತಿಂಗಳಲ್ಲಿ ನಡೆದಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ (ಪದವೀಧರ) ನೇಮಕಾತಿ ಫಲಿತಾಂಶವನ್ನು ಇಂದು ಪ್ರಕಟಿಸಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ ತಿಳಿಸಿದ್ದಾರೆ.
2022ರ ಮೇ ತಿಂಗಳಲ್ಲಿ ನಡೆದಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ (ಪದವೀಧರ) ಹುದ್ದೆಗಳ ನೇಮಕ ಪರೀಕ್ಷೆ ಫಲಿತಾಂಶವನ್ನು ಇಂದು ಸಂಜೆ 6 ಗಂಟೆ ನಂತರ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ ಅವರು ಈ ಬಗ್ಗೆ ಟ್ವಿಟ್‌ ಮೂಲಕ ಮಾಹಿತಿ ನೀಡಿದ್ದಾರೆ. schooleducation.kar.nic.in ನಲ್ಲಿ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ.

ಅಲ್ಲದೆ, ಅಭ್ಯರ್ಥಿಗಳು ಸ್ಪರ್ಧಾತಕ್ಮ ಪರೀಕ್ಷೆ (ಸಿಇಟಿ) ಅಂಕಗಳು ಹಾಗೂ ಮೀಸಲಾತಿ ವಿವರಗಳನ್ನು ಹೊರತಪಡಿಸಿ ವೈಯಕ್ತಿಕ ವಿವರಗಳಾದ ಅಭ್ಯರ್ಥಿಯ ಹೆಸರು, ಅಭ್ಯರ್ಥಿಯ ತಂದೆ-ತಾಯಿಗಳ ಹೆಸರು, ಜನ್ಮ ದಿನಾಂಕ, ಪದವಿ, ಬಿ.ಇಡಿ/ಡಿ.ಎಲ್‌.ಇಡಿ, ಸಿಟಿಇಟಿ/ಟಿಇಟಿ ಅಂಕಗಳಿಗೆ ಸಂಬಂಧಿಸಿದ ತಿದ್ದಪುಡಿಗಳಿಗೆ ಮಾತ್ರ ದಿನಾಂಕ ೧೮-೦೮-೨೦೨೨ರಿಂದ ೨೪-೦೮-೨೦೨೨ರ ವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಲಾಗಿದೆ.

ಮೇಲ್ಕಂಡ ಮಾಹಿತಿಗಳಲ್ಲಿ ತುದ್ದಿಪಡಿ ಅಗತ್ಯವಿರುವ ಅಭ್ಯರ್ಥಿಗಳು ತಮ್ಮ ಮನವಿಯನ್ನು ಅಗತ್ಯ ದೃಢೀಕರಣದ ಪ್ರಮಾಣಪತ್ರಗಳೊಂದಿಗೆ ವಿಶೇಷಾಧಿಕಾರಿಗಳು, ಕೇಂದ್ರೀಕೃತ ಘಟಕ, ಕೆ.ಜೆ.ರಸ್ತೆ ಬೆಂಗಳೂರು ಇಲ್ಲಿಗೆ ಖುದ್ದಾಗಿ ಸಲ್ಲಿಸಬೇಕು. ಅಂಚೆ ಅಥವಾ ಇನ್ನಿತರ ಯಾವುದೇ ವಿಧಾನಗಳಲ್ಲಿ ಸಲ್ಲಿಸಲಾಗುವ ಮನವಿಗಳನ್ನು ಪರಿಗಣಿಸಲಾಗುವುದಿಲ್ಲ. ಅಲ್ಲದೆ, ಆಗಸ್ಟ್‌ ೨೪ರ ನಂತರ ಬಂದ ಯಾವುದೇ ಮನವಿಗಳನ್ನು ಪರಿಗಣಸುವುದಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಯಲ್ಲಾಪುರ | ಅರೆಬೈಲ್‌ ಘಟ್ಟದ ಪ್ರಪಾತದ ಬಳಿ ಖಾಸಗಿ ಬಸ್ ಪಲ್ಟಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement