ಸೋಲಾರ್ ಹಗರಣದ ಲೈಂಗಿಕ ಕಿರುಕುಳ ಪ್ರಕರಣ: ಕಾಂಗ್ರೆಸ್‌ ನಾಯಕ ಕೆ.ಸಿ. ವೇಣುಗೋಪಾಲ್ ಪ್ರಶ್ನಿಸಿದ ಸಿಬಿಐ

ನವದೆಹಲಿ: ಕೇರಳದ 2012ರ ಸೋಲಾರ್ ಹಗರಣ ಪ್ರಕರಣದ ಪ್ರಮುಖ ಆರೋಪಿಯ ಲೈಂಗಿಕ ಶೋಷಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ), ವಿಚಾರಣೆಗೆ ಒಳಪಡಿಸಿದೆ.
ಸಿಬಿಐ ಮೂಲಗಳ ಪ್ರಕಾರ, ಕಳೆದ ವಾರ ಕಾಂಗ್ರೆಸ್ ನಾಯಕನನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಆದರೆ, ತನಿಖಾ ಸಂಸ್ಥೆ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಪ್ರಕರಣವು ಮೇ 2012 ರಲ್ಲಿ ಸಂಭವಿಸಿದ ಘಟನೆಯನ್ನು ಒಳಗೊಂಡಿದೆ. ದೂರಿನ ಪ್ರಕಾರ, ಕೆಸಿ ವೇಣುಗೋಪಾಲ್ ಆಂಧ್ರಪ್ರದೇಶದ ಮಾಜಿ ಪ್ರವಾಸೋದ್ಯಮ ಸಚಿವ ಅನಿಲಕುಮಾರ್ ಅವರ ನಿವಾಸದಲ್ಲಿ ಮಹಿಳೆಯೊಬ್ಬರನ್ನು ಲೈಂಗಿಕವಾಗಿ ಶೋಷಿಸಿದ್ದಾರೆ. ಈ ಪ್ರಕರಣವನ್ನು ಸಿಬಿಐಗೆ ವಹಿಸುವ ಮೊದಲು ರಾಜ್ಯ ಪೊಲೀಸ್‌ನ ಅಪರಾಧ ವಿಭಾಗವು ಆರಂಭದಲ್ಲಿ ತನಿಖೆ ನಡೆಸಿತು.

ಸೋಲಾರ್ ಪರಿಹಾರ ಮತ್ತು ಸೌರಶಕ್ತಿ ಯೋಜನೆಗಳಲ್ಲಿ ಷೇರುಗಳ ಭರವಸೆ ನೀಡಿ ಅಮಾಯಕರನ್ನು ವಂಚಿಸಿದ ಪ್ರಮುಖ ಆರೋಪಿ, 2013 ರಲ್ಲಿ ಕೇರಳದ ಉನ್ನತ ಪೋಲೀಸ್‌ಗೆ ಪತ್ರ ಬರೆದು ಅಂದಿನ ಶಾಸಕ ಮತ್ತು ಈಗಿನ ಸಂಸದ ಹೈಬಿ ಈಡನ್, ಕೆ.ಸಿ. ವೇಣುಗೋಪಾಲ್, ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ, ಮಾಜಿ ಸಚಿವ ಎ.ಪಿ.ಅನಿಲ್ ಕುಮಾರ್, ಕಾಂಗ್ರೆಸ್ ಸಂಸದ ಅಡೂರ್ ಪ್ರಕಾಶ್, ಬಿಜೆಪಿ ಮುಖಂಡ ಎ.ಪಿ ಅಬ್ದುಲ್ಲಾ ಕುಟ್ಟಿ ಅವರು ಲೈಂಗಿಕವಾಗಿ ಶೋಷಣೆ ಮಾಡಿದ್ದರು ಎಂದು ಆರೋಪಿಸಿದ್ದರು.
ಆರಂಭದಲ್ಲಿ, ಈ ಸಂಬಂಧ ಸ್ಥಳೀಯ ಪೊಲೀಸರಲ್ಲಿ ಪ್ರಕರಣವನ್ನು ದಾಖಲಿಸಲಾಯಿತು ಮತ್ತು ನಂತರ ರಾಜ್ಯ ಸರ್ಕಾರದ ಶಿಫಾರಸಿನ ಮೇರೆಗೆ ಸಿಬಿಐ ತನಿಖೆಯನ್ನು ಆಗಸ್ಟ್ 2021 ರಲ್ಲಿ ವಹಿಸಿಕೊಂಡಿತು. ಸ್ಥಳೀಯ ಪೊಲೀಸರು ನ್ಯಾಯಯುತ ತನಿಖೆ ನಡೆಸುವಲ್ಲಿ ವಿಫಲರಾಗಿದ್ದಾರೆ ಎಂದು ದೂರುದಾರರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ, ನಂತರ ಪ್ರಕರಣವನ್ನು ಸಿಬಿಐಗೆ ನೀಡಲಾಗಿದೆ.ದೆಹಲಿಯ ಕಚೇರಿಯಲ್ಲಿ ಸಿಬಿಐ ದೂರುದಾರರ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ.
ತಮ್ಮ ತನಿಖೆಯ ಭಾಗವಾಗಿ, ವೇಣುಗೋಪಾಲ್ ಅವರನ್ನು ಕರೆಸಿ ಆರೋಪಗಳಿಗೆ ಸಂಬಂಧಿಸಿದಂತೆ ಸಿಬಿಐ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಪ್ರಮುಖ ಸುದ್ದಿ :-   ಕೇಜ್ರಿವಾಲ್ ವಿರುದ್ಧ ಎನ್‌ಐಎ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ಶಿಫಾರಸು: ಇದು ಬಿಜೆಪಿಯ ಮತ್ತೊಂದು ಪಿತೂರಿ ಎಂದ ಎಎಪಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement