ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪ್ರಕಟ: ವನಂ ಶಿವರಾಮು, ಡಾ.ಶಂಭು ಬಳಿಗಾರಗೆ ತಜ್ಞ ಪ್ರಶಸ್ತಿ, 30 ಸಾಧಕರಿಗೆ ವಾರ್ಷಿಕ ಗೌರವ ಪ್ರಶಸ್ತಿ ಪ್ರಕಟ-ಪೂರ್ಣ ಪಟ್ಟಿ ಇಲ್ಲಿದೆ

ಬೆಂಗಳೂರು: ಕರ್ನಾಟಕ ಜಾನಪದ ಅಕಾಡೆಮಿ 2022ನೇ ಸಾಲಿನ ಪ್ರಶಸ್ತಿಗಳನ್ನು ಗುರುವಾರ ಪ್ರಕಟಿಸಿದೆ. ಇಬ್ಬರನ್ನು ತಜ್ಞ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಮಂಡ್ಯ ಜಿಲ್ಲೆಯ ವ.ನಂ.ಶಿವರಾಮು ಅವರಿಗೆ ಪ್ರತಿಷ್ಠಿತ ಡಾ ಜಿ.ಶಂ.ಪರಮಶಿವಯ್ಯ (ಜಿಶಂಪ) ಪ್ರಶಸ್ತಿ ಮತ್ತು ಬಾಗಲಕೋಟೆಯ ಡಾ ಶಂಭು ಬಳಿಗಾರ ಅವರಿಗೆ ಡಾ ಬಿ.ಎಸ್.ಗದ್ದಿಗಿಮಠ ಪ್ರಶಸ್ತಿ ಪ್ರಕಟಿಸಲಾಗಿದೆ.
ಅಲ್ಲದೆ, ಕರ್ನಾಟಕದ ವಿವಿಧ ಜಿಲ್ಲೆಗಳ ಒಟ್ಟು 30 ಜಾನಪದ ಸಾಧಕರಿಗೆ ವಾರ್ಷಿಕ ಗೌರವ ಪ್ರಶಸ್ತಿ ಪ್ರಕಟಿಸಲಾಗಿದೆ.

ವಾರ್ಷಿಕ ಗೌರವ ಪ್ರಶಸ್ತಿ ಪುರಸ್ಕೃತರು
ರಾಧಮ್ಮ (ಜನಪದ ಕರಕುಶಲ ಕಲೆ, ಉಡುಪಿ), ಸಾಂಬಯ್ಯ ಹಿರೇಮಠ (ಜಾನಪದ ಹಾಡುಗಾರಿಕೆ, ಧಾರವಾಡ), ನಾಗಮ್ಮ ಹೊನ್ನಪ್ಪಜೋಗಿ (ಸೋಬಾನೆ ಪದ, ಗದಗ), ವೀರಭದ್ರಪ್ಪ ಯಲ್ಲಪ್ಪ ದಳವಾಯಿ (ಏಕತಾರಿ ಪದ, ವಿಜಯಪುರ), ಶಿವನವ್ವ ಮಲ್ಲಪ್ಪ ಭಾವಿಕಟ್ಟಿ (ಹಂತಿಪದ, ಬಾಗಲಕೋಟೆ), ಚಂದ್ರಪ್ಪ ಯಲ್ಲಪ್ಪ ಭಜಂತ್ರಿ (ಶಹನಾಯಿ, ಹಾವೇರಿ), ಪುಂಡಲೀಕ ಮಾದರ (ಹಲಗೆ ವಾದನ, ಬೆಳಗಾವಿ), ಶಾರದಾ ಮಹದೇವ ಮೊಗೇರ (ಸಂಪ್ರದಾಯದ ಪದ, ಉತ್ತರ ಕನ್ನಡ ಜಿಲ್ಲೆ), ಮಾತಾ ಅಂಜಿನಮ್ಮ ಜೋಗತಿ (ಜೋಗತಿ ನೃತ್ಯ, ಬಳ್ಳಾರಿ), ಪ್ರಕಾಶಯ್ಯ ನಂದಿ (ಗೀಗೀ ಪದ, ರಾಯಚೂರು), ದೊಡ್ಡ ಯಮನೂರಪ್ಪ ಭೀಮಪ್ಪ ಭಜಂತ್ರಿ (ಶಹನಾಯಿ, ಕೊಪ್ಪಳ), ಕರಬಸಯ್ಯ ಶಂಕರಯ್ಯ ಮಠಪತಿ (ತತ್ವಪದ, ಕಲಬುರ್ಗಿ), ರಾಧಾಬಾಯಿ ಕೃಷ್ಣರಾವ ಮಾಲಿಪಾಟೀಲ (ಸಂಪ್ರದಾಯದ ಹಾಡುಗಳು, ಯಾದಗಿರಿ), ಭಾರತೀಬಾಯಿ (ಲಂಬಾಣಿ ನೃತ್ಯ, ಬೀದರ್).

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

ಚಿನ್ನಮ್ಮಯ್ಯ (ಜಾನಪದ ಕಥೆ, ಬೆಂಗಳೂರು ನಗರ), ಹುಚ್ಚ ಹನುಮಯ್ಯ (ಜಾನಪದ ವೈದ್ಯ, ಬೆಂಗಳೂರು ಗ್ರಾಮಾಂತರ ಜಿಲ್ಲೆ), ಜಿ.ಗುರುಮೂರ್ತಿ (ತತ್ವಪದ, ರಾಮನಗರ) ಹನುಮಕ್ಕ (ಸೋಬಾನೆ ಪದ, ತುಮಕೂರು), ಡಿ.ಆರ್.ರಾಜಪ್ಪ (ಜಾನಪದ ಗಾಯನ, ಕೋಲಾರ), ಎಂ.ಸಿ.ದೇವೇಂದ್ರಪ್ಪ (ಡೊಳ್ಳು ಕುಣಿತ, ಶಿವಮೊಗ್ಗ), ಡಾ ಕಾ ರಾಮೇಶ್ವರಪ್ಪ (ಜಾನಪದ ಗೀತೆ, ಚಿತ್ರದುರ್ಗ), ಡಿ.ಜಿ.ನಾಗರಾಜಪ್ಪ (ಭಜನೆ, ದಾವಣಗೆರೆ), ನಾರಾಯಣಸ್ವಾಮಿ (ಪಂಡರಿ ಭಜನೆ, ಚಿಕ್ಕಬಳ್ಳಾಪುರ), ಚನ್ನಮ್ಮ (ತತ್ವಪದ, ಮಂಡ್ಯ), ಗುರುರಾಜ್ (ತಂಬೂರಿ ಪದ, ಮೈಸೂರು), ಶ್ರೀರಂಗಶೆಟ್ಟಿ (ರಂಗದ ಕುಣಿತ, ಹಾಸನ), ಅಣ್ಣುಶೆಟ್ಟಿ (ಭೂತಾರಾಧನೆ, ದಕ್ಷಿಣ ಕನ್ನಡ ಜಿಲ್ಲೆ), ಶಿವರುದ್ರಪ್ಪಸ್ವಾಮಿ (ವೀರಭದ್ರನ ನೃತ್ಯ, ಚಾಮರಾಜನಗರ), ಕೆ.ಎಚ್.ರೇವಣಸಿದ್ದಪ್ಪ (ವೀರಗಾಸೆ, ಚಿಕ್ಕಮಗಳೂರು), ಕೆ.ಸಿ.ದೇವಕಿ (ಜಾನಪದ ಹಾಡುಗಾರಿಕೆ, ಕೊಡಗು).

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement