ಏನೇನ್‌ ಮಾಡ್ತಾರೋ….: ಕಾಂಡೋಮ್ ಪ್ಯಾಕ್‌ನಿಂದ ಮಹಿಳೆ ತಲೆಗೆ ಬ್ಯಾಂಡೇಜ್‌ ಮಾಡಿದ ಆರೋಗ್ಯ ಕೇಂದ್ರದ ಸಿಬ್ಬಂದಿ…!

ಮೊರೆನಾ: ಕಳಪೆ ಗುಣಮಟ್ಟದ ಆರೋಗ್ಯ ವ್ಯವಸ್ಥೆ, ಶವ ವಾಹನಗಳ ಲಭ್ಯತೆ ಇಲ್ಲದಿರುವುದು ಅಥವಾ ಗರ್ಭಿಣಿಯರನ್ನು ಮಂಚದ ಮೇಲೆ ಆಸ್ಪತ್ರೆಗೆ ಕರೆದೊಯ್ಯುವುದು ಮಧ್ಯಪ್ರದೇಶದ ವಿವಿಧ ಭಾಗಗಳಿಂದ ಆಗಾಗ್ಗೆ ವರದಿಯಾಗಿದೆ.
ಇದೀಗ ವೈದ್ಯಕೀಯ ನಿರ್ಲಕ್ಷ್ಯದ ಮತ್ತೊಂದು ಜ್ವಲಂತ ಉದಾಹರಣೆ ಬೆಳಕಿಗೆ ಬಂದಿದ್ದು, ಮಹಿಳೆಯ ತಲೆಯ ಗಾಯಕ್ಕೆ ಕಾಂಡೋಮ್  ಬಳಸಿ ಬ್ಯಾಂಡೇಜ್‌ ಮಾಡಿರುವುದು ಬೆಳಕಿಗೆ ಬಂದಿದೆ.
ರೇಷ್ಮಾ ಬಾಯಿ ಎಂಬ ಮಹಿಳೆಗೆ ತಲೆಗೆ ಆದ ಗಾಯದಿಂದ ರಕ್ತಸ್ರಾವವಾಗುವುದನ್ನು ತಡೆಯಲು ಕಾಂಡೋಮ್ ಅನ್ನು ತಾತ್ಕಾಲಿಕ ಬ್ಯಾಂಡೇಜ್ ಆಗಿ ಬಳಸಿರುವ ಆಘಾತಕಾರಿ ಘಟನೆ ಮೊರೆನಾ ಜಿಲ್ಲೆಯಲ್ಲಿ ನಡೆದಿದೆ.

ಮೊರೆನಾ ಜಿಲ್ಲಾಸ್ಪತ್ರೆಯ ವೈದ್ಯರು ಜಿಲ್ಲೆಯ ಸಮುದಾಯ ಆರೋಗ್ಯ ಕೇಂದ್ರವೊಂದರಿಂದ ಬಂದು ದಾಖಲಾಗಿದ್ದ ರೇಷ್ಮಾ ಬಾಯಿ ಅವರ ಗಾಯದ ಡ್ರೆಸ್ಸಿಂಗ್ ಅನ್ನು ಬದಲಾಯಿಸುವಾಗ ಈ ಘಟನೆ ಬೆಳಕಿಗೆ ಬಂದಿದೆ. ರೇಷ್ಮಾ ಅವರ ತಲೆಗೆ ಗಾಯವಾಗಿತ್ತು. ಅವರಿಗೆ ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ಆಕೆಯ ತಲೆಯ ಮೇಲಿದ್ದ ಬ್ಯಾಂಡೇಜ್ ಅನ್ನು ತೆರೆದಾಗ ಅದರೊಳಗೆ ಹತ್ತಿಯೊಂದಿಗೆ ಕಾಂಡೋಮ್ ಹೊದಿಕೆಯನ್ನು ಕಂಡು ಬೆಚ್ಚಿಬಿದ್ದಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ

ಮೊರೆನಾದ ಮುಖ್ಯ ವೈದ್ಯಕೀಯ ಆರೋಗ್ಯ ಅಧಿಕಾರಿ (ಸಿಎಚ್‌ಎಂಒ) ರಾಕೇಶ್ ಮಿಶ್ರಾ ಮಾತನಾಡಿ, “ಆರೋಗ್ಯ ಕೇಂದ್ರದಲ್ಲಿ ಮಹಿಳೆಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ವಾರ್ಡ್ ಬಾಯ್‌ಗೆ ಹತ್ತಿ ಪ್ಯಾಡ್‌ನ ಮೇಲೆ ಕೆಲವು ಕಾರ್ಡ್‌ಬೋರ್ಡ್‌ಗಳನ್ನು ಹಾಕುವಂತೆ ಬ್ಯಾಂಡೇಜ್‌ ಮಾಡುವಂತೆ ಸೂಚಿಸಿದ್ದರು. ಆದರೆ ವಾರ್ಡ್‌ ಬಾಯ್‌ ಅದರ ಬದಲಿಗೆ ಕಾಂಡೋಮ್ ಪ್ಯಾಕೆಟ್ ಅನ್ನು ಬಳಸಿ ಬ್ಯಾಂಡೇಜ್‌ ಮಾಡಿದ್ದಾನೆ ಎಂದು ಹೇಳಿದ್ದಾರೆ.
ತಕ್ಷಣದಿಂದ ಜಾರಿಗೆ ಬರುವಂತೆ ವಾರ್ಡ್ ಬಾಯ್‌ನನ್ನು ಸೇವೆಯಿಂದ ತೆಗೆದುಹಾಕಲಾಗಿದೆ ಎಂದು ಮಿಶ್ರಾ ತಿಳಿಸಿದ್ದಾರೆ, ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದರು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement