ಕರ್ನಾಟಕ ಹೈಕೋರ್ಟ್​ನಲ್ಲಿ ಗ್ರೂಪ್​ ಡಿ 150 ಹುದ್ದೆಗಳಿಗೆ ಅರ್ಜಿ ಆಹ್ವಾನ: ಅರ್ಹತೆ ಎಸ್​ಎಸ್​ಎಲ್​ಸಿ

:ಕರ್ನಾಟಕ ಹೈಕೋರ್ಟ್‌ನಲ್ಲಿ ಗ್ರೂಪ್​ ಡಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 150 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. 150 ಹುದ್ದೆಗಳಲ್ಲಿ 21 ಹುದ್ದೆಗಳನ್ನು ಕಲ್ಯಾಣ ಕರ್ನಾಟಕಕ್ಕೆ ಮೀಸಲಾಗಿರಸಲಾಗಿದೆ. ಹತ್ತನೇ ತರಗತಿ ಪಾಸ್​ ಆಗಿರುವ ಅಭ್ಯರ್ಥಿಗಳು ಸಹ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಆನ್​ಲೈನ್​ ಮೂಲಕ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಸೆಪ್ಟೆಂಬರ್​ 17 ಆಗಿದೆ.
ಕಾರ್ಯ ನಿರ್ವಹಣೆ ಸ್ಥಳ ಬೆಂಗಳೂರು ಎಂದು ತಿಳಿಸಲಾಗಿದ್ದು, ವೇತನ ಪ್ರತಿ ತಿಂಗಳು19900-63200 ರೂ.ಗಳ ವರೆಗೆ ಇರಲಿದೆ ಎಂದು ತಿಳಿಸಲಾಗಿದೆ. ಪ್ರತಿ ತಿಂಗಳು

ಶೈಕ್ಷಣಿಕ ಅರ್ಹತೆ: ಕರ್ನಾಟಕ ಹೈಕೋರ್ಟ್ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ 10 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.
ಕರ್ನಾಟಕ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ 5 ವರ್ಷಗಳು ಹಾಗೂ ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 3 ವರ್ಷಗಳ ರಿಯಾಯ್ತಿ ಇದೆ.
ಅರ್ಜಿ ಶುಲ್ಕ ಸಾಮಾನ್ಯ, ಒಬಿಸಿ ಅಭ್ಯರ್ಥಿಗಳು: 200 ರೂ ಹಾಗೂ ಪ.ಜಾ, ಪ.ಪಂ ಮತ್ತು ಪ್ರವರ್ಗ-1, ವಿಕಲಚೇತನ ಅಭ್ಯರ್ಥಿಗಳು: 100 ರೂ.ಗಳಾಗಿವೆ.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17ಸೆಪ್ಟೆಂಬರ್​ 2022
ಶುಲ್ಕ ಪಾವತಿಗೆ ಕೊನೆಯ ದಿನಾಂಕ: 21ಸೆಪ್ಟೆಂಬರ್​ 2022

ಪ್ರಮುಖ ಸುದ್ದಿ :-   ಬೆಂಗಳೂರಿನ ಹಲವೆಡೆ ಜೋರಾಗಿ ಮಳೆ

ಅಧಿಸೂಚನೆ ಪ್ರಮುಖ ಲಿಂಕ್‌ಗಳು
ಅಧಿಕೃತ ಅಧಿಸೂಚನೆ – ಆರ್​ಪಿಸಿ: ಇಲ್ಲಿ ಕ್ಲಿಕ್ ಮಾಡಿ-Notification_RPC
ಅಧಿಕೃತ ಅಧಿಸೂಚನೆ – ಕಲ್ಯಾಣ ಕರ್ನಾಟಕ: ಇಲ್ಲಿ ಕ್ಲಿಕ್ ಮಾಡಿ-Notification_-kalyan
ಅಧಿಕೃತ ವೆಬ್‌ಸೈಟ್: karnatakajudiciary.kar.nic.in

ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಖಚಿತಪಡಿಸಿಕೊಳ್ಳಿ.ಆನ್‌ಲೈನ್ ಮೋಡ್ ಮೂಲಕ ನಿಗದಿತ ಅರ್ಜಿಯನ್ನು ಡೌನ್​ ಲೋಡ್​ ಮಾಡಿದ ನಂತರ ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ ಮತ್ತು ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಅನುಭವ ಇತ್ಯಾದಿ ಪರಿಶೀಲಿಸಿಕೊಳ್ಳಬೇಕು. ಆನ್‌ಲೈನ್‌ನಲ್ಲಿ ಲಾಗ್​ ಇನ್​ ಆದ ನಂತರ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಬೇಕು. ಇತ್ತೀಚಿನ ಫೋಟೋಗ್ರಾಫ್ (ಅನ್ವಯಿಸಿದರೆ) ಜೊತೆಗೆ ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಬೇಕು.
ವರ್ಗಕ್ಕೆ ಅನುಸಾರವಾಗಿ ಅರ್ಜಿ ಶುಲ್ಕ ಪಾವತಿಸಿದ ನಂತರ ಮಾಹಿತಿ ಅಪ್​ಲೋಡ್​ ಮಾಡಿ. ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ಬಳಿಕ ಮೇಲಿನ ವಿಳಾಸಕ್ಕೆ ಸ್ಪೀಡ್​ ಅಥವಾ ರಿಜಿಸ್ಟರ್​ ಪೋಸ್ಟ್​ ಮೂಲಕ ನಿಗದಿತ ದಿನಾಂಕಕ್ಕೆ ಮುನ್ನ ಕಳುಹಿಸಬೇಕಿದೆ

ಪ್ರಮುಖ ಸುದ್ದಿ :-   ಪ್ರಜ್ವಲ್‌ ಲೈಂಗಿಕ ದೌರ್ಜನ್ಯ ಹಗರಣ: ಮಧ್ಯಂತರ ಜಾಮೀನು ಕೋರಿ ಜನಪ್ರತಿನಿಧಿಗಳ ನ್ಯಾಯಾಲಯದ ಮೆಟ್ಟಿಲೇರಿದ ರೇವಣ್ಣ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement