ಬ್ಯಾಂಕಿಂಗ್​ ಕ್ಷೇತ್ರದಲ್ಲಿ 6,432 ಹುದ್ದೆಗಳು ಖಾಲಿ: ಅರ್ಜಿ ಸಲ್ಲಿಕೆಗೆ ನಾಳೆಯೇ ಕೊನೆಯ ದಿನ

ಬ್ಯಾಂಕ್‌ಗಳ ನೇಮಕಾತಿ ಸಂಬಂಧ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (Institute of Banking Personnel Selection) ಅರ್ಜಿ ಆಹ್ವಾನಿಸಿದ್ದು, 6432 ಪ್ರೊಬೇಷನರಿ ಆಫೀಸರ್ ಮ್ಯಾನೇಜ್‌ಮೆಂಟ್ ಟ್ರೈನಿಗಳ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದೆ. ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಆಗಸ್ಟ್​ 22 ಆಗಿದೆ. ಯಾವುದೇ ಪದವಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಕನ್ನಡ ಸೇರಿದಂತೆ 13 ಭಾಷೆಗಳಲ್ಲಿ ಐಬಿಪಿಎಸ್‌ ಬ್ಯಾಂಕಿಂಗ್ ಹುದ್ದೆಗಳ ಪರೀಕ್ಷೆ ನಡೆಸಲಾಗುವುದು. ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡುವಾಗಲೇ ಪರೀಕ್ಷೆ ಭಾಷೆಯನ್ನು ಆಯ್ಕೆ ಮಾಡಬಹುದಾಗಿದೆ.
ಪ್ರೊಬೇಷನರಿ ಅಧಿಕಾರಿಗಳು/ ಮ್ಯಾನೇಜ್‌ಮೆಂಟ್ ಟ್ರೈನಿಗಳ ನೇಮಕಾತಿಗಾಗಿ ಸಾಮಾನ್ಯ ನೇಮಕಾತಿ ಪ್ರಕ್ರಿಯೆ ಮೂಲಕ ಸಿಬ್ಬಂದಿಯ ಆಯ್ಕೆ ನಡೆಸಲಾಗುತ್ತದೆ. ಮುಂದಿನ ಸಾಮಾನ್ಯ ನೇಮಕಾತಿ ಪ್ರಕ್ರಿಯೆಗಾಗಿ ಆನ್‌ಲೈನ್ ಪರೀಕ್ಷೆಯನ್ನು ತಾತ್ಕಾಲಿಕವಾಗಿ ನಿಗದಿಪಡಿಸಲಾಗಿದೆ. ಪ್ರತಿ ತಿಂಗಳ ವೇತನ 52000-55000 ರೂ.ಗಳಾಗಿವೆ.

ಬ್ಯಾಂಕ್ ಆಫ್ ಇಂಡಿಯಾದಲ್ಲಿ -535, ಕೆನರಾ ಬ್ಯಾಂಕ್ -2500, ಪಂಜಾಬ್ ನ್ಯಾಷನಲ್ ಬ್ಯಾಂಕ್-500, ಪಂಜಾಬ್ ಅಂಡ್​​ ಸಿಂಧ್ ಬ್ಯಾಂಕ್-253
ಯುಕೋ ಬ್ಯಾಂಕ್​​-550, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ-2094 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಯಾವುದೇ ವಿಷಯದಲ್ಲಿ ಪದವಿ ಪೂರ್ಣಗೊಳಿಸಿರಬೇಕು ಎಂದು ತಿಳಿಸಲಾಗಿದೆ.
ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗೆ ಕನಿಷ್ಠ 20 ವರ್ಷಗಳು ಮತ್ತು ಗರಿಷ್ಠ 30 ವರ್ಷಗಳಾಗಿಬೇಕು. ಒಬಿಸಿ ಅಭ್ಯರ್ಥಿಗಳಿಗೆ 03 ವರ್ಷಗಳು
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳು, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 5 ವರ್ಷಗಳು ಹಾಗೂ
ವಿಕಲಚೇತನ ಅಭ್ಯರ್ಥಿಗಳೀಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇದೆ. ಅರ್ಜಿ ಶುಲ್ಕವನ್ನು ಸಾಮಾನ್ಯ ಅಭ್ಯರ್ಥಿಗಳಿಗೆ 850 ರೂ.ಗಳು ಹಾಗೂ ಪ.ಜಾ, ಪ.ಪಂ, ವಿಕಲ ಚೇತನ ಅಭ್ಯರ್ಥಿಗ:ಇಗೆ 150 ರೂ.ಗಳನ್ನು ನಿಗದಿ ಪಡಿಸಲಾಗಿದೆ. ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ, ಸಂದರ್ಶನಗಳನ್ನೊಳಗೊಂಡ ಆಯ್ಕೆ ಪ್ರಕ್ರಿಯೆಗಳಿವೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಮತದಾನಕ್ಕೂ ಮುನ್ನವೇ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ...!

ಪ್ರಮುಖ ಲಿಂಕ್​ಗಳು
ಅಧಿಕೃತ ಅಧಿಸೂಚನೆಗೆ ಇಲ್ಲಿ ಕ್ಲಿಕ್​ ಮಾಡಿ-Detailed-Advt.-CRP-PO-XII
ಅಧಿಕೃತ ವೆಬ್​ಸೈಟ್​​: ibps.in

PETಗಾಗಿ ಕರೆ ಪತ್ರವನ್ನು ಡೌನ್‌ಲೋಡ್ ಮಾಡಲು ದಿನಾಂಕ: ಸೆಪ್ಟೆಂಬರ್/ಅಕ್ಟೋಬರ್ 2022
PET ನ ನಡವಳಿಕೆಯ ದಿನಾಂಕ: ಸೆಪ್ಟೆಂಬರ್/ಅಕ್ಟೋಬರ್ 2022
ಡೌನ್‌ಲೋಡ್ ಕಾಲ್ ಲೆಟರ್ ಅಥವಾ ಪ್ರಿಲಿಮ್ಸ್ ಪರೀಕ್ಷೆಯ ದಿನಾಂಕ: ಅಕ್ಟೋಬರ್ 2022
ಪೂರ್ವಭಾವಿ ಪರೀಕ್ಷೆಯ ದಿನಾಂಕ: ಅಕ್ಟೋಬರ್ 2022
ಆನ್‌ಲೈನ್ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡುವ ದಿನಾಂಕ: ನವೆಂಬರ್ 2022
ಡೌನ್‌ಲೋಡ್ ಕಾಲ್ ಲೆಟರ್ ಅಥವಾ ಮುಖ್ಯ ಪರೀಕ್ಷೆಯ ದಿನಾಂಕ: ನವೆಂಬರ್ 2022
ಮುಖ್ಯ ಪರೀಕ್ಷೆಯ ದಿನಾಂಕ: ನವೆಂಬರ್ 2022
ಮುಖ್ಯ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡಿದ ದಿನಾಂಕ: ಡಿಸೆಂಬರ್ 2022
ಸಂದರ್ಶನಕ್ಕಾಗಿ ಕರೆ ಪತ್ರದ ದಿನಾಂಕ: ಜನವರಿ/ಫೆಬ್ರವರಿ 2023
ಸಂದರ್ಶನದ ದಿನಾಂಕ: ಜನವರಿ/ಫೆಬ್ರವರಿ 2023
ತಾತ್ಕಾಲಿಕ ಹಂಚಿಕೆ ಪಟ್ಟಿಗೆ ದಿನಾಂಕ: ಏಪ್ರಿಲ್ 2023

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement