ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದ ತುಮಕೂರು ಅರ್ಚಕ ಮುಂಜಿಗೆ ಹೆದರಿ ವಾಪಸ್‌ ಹಿಂದೂ ಧರ್ಮಕ್ಕೆ ಬಂದ

ತುಮಕೂರು: ತುಮಕೂರಿನ ಅರ್ಚಕರೊಬ್ಬರು ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳಲು ಪ್ರಯತ್ನಿಸಿ ಕೊನೆಗೆ ಹಿಂದೂ ಧರ್ಮಕ್ಕೆ ವಾಪಸಾಗಿರುವ ಘಟನೆ ನಡೆದಿದೆ.
ತಾವು ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುವುದಾಗಿ ಪತ್ರಿಕೆಗಳಲ್ಲಿ ಪ್ರಕಟಣೆಯನ್ನೂ ಕೊಟ್ಟು ಅದಕ್ಕೆ ಸಕಲ ಸಿದ್ಧತೆ ನಡೆಸಿದ್ದರು. ‘ಸ್ವ-ಇಚ್ಛೆಯಿಂದ ಇಸ್ಲಾಂ ಧರ್ಮಕ್ಕೆ ಮತಾಂತರವಾಗುತ್ತಿದ್ದೇನೆ’ ಎಂದು ಪ್ರಕಟಣೆಯಲ್ಲಿ ಹೇಳಿದ್ದರು. ಗ್ರಾಮದ ಓಂಕಾರೇಶ್ವರ ದೇವಸ್ಥಾನದ ಅರ್ಚಕರಾಗಿದ್ದ ಎಚ್.ಆರ್.ಚಂದ್ರಶೇಖರಯ್ಯ ಅವರು ಮುಬಾರಕ್ ಪಾಷಾ ಎಂದು ಹೆಸರು ಬದಲಿಸಿಕೊಂಡು ಈ ಪ್ರಕರಣೆಯನ್ನೂ ನೀಡಲಾಗಿತ್ತು ಎಂದು ವರದಿಗಳು ತಿಳಿಸಿವೆ.

ಆದರೆ, ಮುಸ್ಲಿಂ ಧರ್ಮದಲ್ಲಿನ ಮುಂಜಿಗೆ ಹೆದರಿ ತಾವು ವಾಪಸ್​ ಆಗಿರುವುದಾಗಿ ತುಮಕೂರು ತಾಲ್ಲೂಕು ಊರ್ಡಿಗೆರೆ ಹೋಬಳಿ ಹಿರೇಹಳ್ಳಿ ಗ್ರಾಮದ ಓಂಕಾರೇಶ್ವರ ದೇವಾಲಯದ ಅರ್ಚಕ ದಿ.ರೇಣುಕಾರಾದ್ಯ ಎಂಬುವರ ಪುತ್ರ ಎಚ್.ಆರ್ ಚಂದ್ರಶೇಖರಯ್ಯ ಉರುಫ್ ಮಂಜಣ್ಣ ಚಂದ್ರಶೇಖರಯ್ಯನವರು ಹೇಳಿದ್ದಾರೆ. ಮತಾಂತರಗೊಂಡ ತಕ್ಷಣ ಅಲ್ಲಿಯ ಪದ್ಧತಿಯಂತೆ ಮುಂಜಿ ಮಾಡಲಾಗುತ್ತದೆ. ನನಗೆ ಮಧುಮೇಹ ಇರುವ ಹಿನ್ನೆಲೆಯಲ್ಲಿ ಅದನ್ನು ಮಾಡಿಸಿಕೊಳ್ಳಲು ನನಗೆ ಭಯವಾಯಿತು. ವಾಪಸಾಗಲು ನಿರ್ಧರಿಸಿದ್ದೆ. ಅಲ್ಲದೆ, ಸುದ್ದಿ ತಿಳಿದ ತಕ್ಷಣ ಬಿಜೆಪಿಯ ಮಾಜಿ ಸಚಿವ ಸೊಗಡು ಶಿವಣ್ಣ ಭೇಟಿ ನೀಡಿ, ಮರಳಿ ಹಿಂದೂ ಧರ್ಮಕ್ಕೆ ಬರುವಂತೆ ಮನವೊಲಿಸಿದ್ದರು. ಸೊಗಡು ಶಿವಣ್ಣ ಅವರ ಮಾತಿಗೆ ಬೆಲೆಕೊಡುವುದರ ಜೊತೆಗೆ ಮುಂಜಿಗೆ ಅಂಜಿ ತಾನು ವಾಪಸ್ ಬಂದಿದ್ದೇನೆ ಎಂದು ಚಂದ್ರಶೇಖರ್ ಹೇಳಿದರು.

ಪ್ರಮುಖ ಸುದ್ದಿ :-   ಸಿಎಂ ಸಿದ್ದರಾಮಯ್ಯ ಹೇಳಿಕೆಯಿಂದ ನಮ್ಮ ಮನೆತನದ ಗೌರವ ಹಾಳಾಗುತ್ತಿದೆ : ನೇಹಾ ತಂದೆ ನಿರಂಜನ ಹಿರೇಮಠ

ಮುಂಜಿ ಮಾಡಿದರೆ ಮಾತ್ರ ಮುಸ್ಲಿಮರಲ್ಲಿ ಸರಿಯಾಗಿ ಶವ ಸಂಸ್ಕಾರ ಮಾಡಲಾಗುತ್ತದೆ ಎಂದು ಚಂದ್ರಶೇಖರಯ್ಯ ತಿಳಿಸಿದರು. ಇಸ್ಲಾಂನ ಸುನ್ನತಿ ಪ್ರಕ್ರಿಯೆಯನ್ನು ಮುಂಜಿ ಎಂದು ಕರೆಯಲಾಗುತ್ತದೆ. ಮುಸ್ಲಿಂ ಧರ್ಮದಲ್ಲಿ ಇದು ಕಡ್ಡಾಯವಾಗಿದೆ. ಇದಕ್ಕೆ ಹೆದರಿ ವಾಪಸಾಗಲು ತಾವು ನಿರ್ಧರಿಸಿರುವುದಾಗಿ ಚಂದ್ರಶೇಖರಯ್ಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಅಣ್ಣತಮ್ಮಂದಿರರ ನಡುವಿನ ಆಸ್ತಿ ಜಗಳದಿಂದ ಬೇಸತ್ತಿದ್ದ ಚಂದ್ರಶೇಖರ್ ನಮ್ಮವರು ಯಾರೂ ಸಹಾಯಕ್ಕೆ ಬರುವುದಿಲ್ಲ ಎಂದು ನೊಂದಿದ್ದರು. ಇದೇ ಮನಸ್ಥಿತಿಯಲ್ಲಿ ಮತಾಂತರ ಆಗಲು ಮುಂದಾಗಿದ್ದರು ಎನ್ನಲಾಗಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement