ಬೆಂಗಳೂರು: ಕನ್ನಡ ಚಿತ್ರರಂಗದ ಕ್ರೇಜಿ ಸ್ಟಾರ್ ವಿ. ರವಿಚಂದ್ರನ್ ಅವರ ಹಿರಿಯ ಪುತ್ರ ವಿ. ಮನೋರಂಜನ್ ಇಂದು, ಭಾನುವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇಂದು (ಆ.21) ಬೆಳಿಗ್ಗೆ 8:30ರ ಮುಹೂರ್ತದಲ್ಲಿ ಚೇನ್ನೈ ಮೂಲದ ವೈದ್ಯೆ ಸಂಗೀತ ಎಂಬವರನ್ನು ಮನೋರಂಜನ್ ವರಿಸುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅರಮನೆಯ ಮೈದಾನದಲ್ಲಿ ನಡೆದ ವಿವಾಹ ಕಾರ್ಯಕ್ರಮ ಹಾಗೂ ನಿನ್ನೆ ನಡೆದ ಆರತಕ್ಷತೆಯಲ್ಲಿ ಚಿತ್ರರಂಗ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಆಗಮಿಸಿ, ನವಜೋಡಿಗೆ ಶುಭ ಹಾರೈಸಿದ್ದಾರೆ.
ನಟ ರವಿಚಂದ್ರನ್ ಮತ್ತು ಸುಮತಿ ಅವರ ಮೊದಲ ಪುತ್ರ ಮನೋರಂಜನ್ ಇಂದು ಸ್ಟಾರ್ ನಟರಾಗಿದ್ದಾರೆ. ಸಾಹೇಬ, ಮುಗಿಲುಪೇಟೆ, ಬೃಹಸ್ಪತಿ, ಮೊದಲಾದ ಸಿನಿಮಾಗಳಲ್ಲಿ ಮನೋರಂಜನ್ ನಟಿಸಿದ್ದಾರೆ. ರವಿಚಂದ್ರನ್ ಅವರಿಗೆ ಮೂವರು ಮಕ್ಕಳು. 2019ರಲ್ಲಿ ಮಗಳ ಮದುವೆಯಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ