ಭಾರತ ಎಲೆಕ್ಟ್ರಿಕ್ ವಾಹನಗಳಲ್ಲಿ ಲೀಡರ್‌ ಆಗಲಿದೆ: ಉದ್ಯಮಿ ಆನಂದ್ ಮಹೀಂದ್ರಾ ಹೀಗೆ ಹೇಳಿದ್ದಕ್ಕೆ ಅವರೇ ಶೇರ್‌ ಮಾಡಿದ ಈ ವೀಡಿಯೊ ಕಾರಣ | ವೀಕ್ಷಿಸಿ

ಆನಂದ್ ಮಹೀಂದ್ರಾ ಅವರು ಆಗಾಗ್ಗೆ ಇಂಟರ್ನೆಟ್ ಬಳಕೆದಾರರ ಆಸಕ್ತಿಯನ್ನು ಕೆರಳಿಸುವ ಆಕರ್ಷಕ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾರೆ. ತಮ್ಮ ಇತ್ತೀಚಿನ ಟ್ವೀಟ್‌ನಲ್ಲಿ, ಮಹೀಂದ್ರಾ ಗ್ರೂಪ್ ಅಧ್ಯಕ್ಷರು ವ್ಯಕ್ತಿಯೊಬ್ಬ ತನ್ನ ಮನೆಯಲ್ಲಿ ಎಲೆಕ್ಟ್ರಿಕ್ ಜೀಪ್ ನಿರ್ಮಿಸಿದ ವೀಡಿಯೊವನ್ನು ಮರುಹಂಚಿಕೊಂಡಿದ್ದಾರೆ.
ಆನಂದ ಮಹೀಂದ್ರಾ ಶನಿವಾರ ಟ್ವಿಟರ್‌ನಲ್ಲಿ ಆ ವ್ಯಕ್ತಿಯ ಉದ್ಯೋಗ ಕೋರಿಕೆಯ ವಿನಂತಿಗೆ ಪ್ರತಿಕ್ರಿಯಿಸಿದ್ದಾರೆ. ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಕೀಜಾಡ್‌ನ ಗೌತಮ್ ಎಂಬ ಯುವಕ ತನ್ನ ಬ್ಯಾಟರಿ ಚಾಲಿತ ಜೀಪ್‌ನ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಮತ್ತು “ದಯವಿಟ್ಟು ನನಗೆ ಕೆಲಸ ಕೊಡಿ ಸರ್” ಎಂದು ಬರೆದುಕೊಂಡಿದ್ದಾರೆ. ಜೀಪ್ ಅನ್ನು ಅದರ ಮುಂಭಾಗ ಮತ್ತು ಹಿಂಭಾಗದ ಚಕ್ರಗಳನ್ನು ಪ್ರತ್ಯೇಕವಾಗಿ ನಿಯಂತ್ರಿಸುವ ರೀತಿಯಲ್ಲಿ ನಿರ್ಮಿಸಲಾಗಿದೆ ಎಂದು ಕ್ಲಿಪ್‌ನಲ್ಲಿ ಗೌತಮ್ ಅವರು ಪ್ರದರ್ಶಿಸಿದ್ದಾರೆ.

ಆನಂದ್ ಮಹೀಂದ್ರಾ ಅವರು ಗೌತಮ್ ಅವರ ವೀಡಿಯೊವನ್ನು ಗಮನಿಸಿದ್ದಾರೆ ಮತ್ತು ಅದನ್ನು ಮರುಟ್ವೀಟ್ ಮಾಡಿದ್ದಾರೆ. ಗೌತಮ್‌ ಅವರ ಜೀಪಿನಿಂದ ಪ್ರಭಾವಿತರಾದ ಅವರು, ಮಹೀಂದ್ರಾ ಆ್ಯಂಡ್ ಮಹೀಂದ್ರಾದ ಆಟೋಮೋಟಿವ್ ಪ್ರಾಡಕ್ಟ್ ಡೆವಲಪ್‌ಮೆಂಟ್ ಮುಖ್ಯಸ್ಥ ಆರ್ ವೇಲುಸಾಮಿಯವರಿಗೆ ಯುವಕನ ಸಂಪರ್ಕರ್ಕಿಸುವಂತೆ ಸೂಚಿಸಿದ್ದಾರೆ.
ಇದಕ್ಕಾಗಿಯೇ ಭಾರತವು ಇಲೆಕ್ಟ್ರಿಕ್‌ ವೆಹಿಕಲ್‌(EV)ಗಳಲ್ಲಿ ಮುಂಚೂಣಿಯಲ್ಲಿದೆ ಎಂದು ನನಗೆ ಮನವರಿಕೆಯಾಗಿದೆ. ಕಾರುಗಳು ಮತ್ತು ತಂತ್ರಜ್ಞಾನದ ಮೇಲಿನ ಜನರ ಉತ್ಸಾಹ ಮತ್ತು ಗ್ಯಾರೇಜ್ ‘ಟಿಂಕರಿಂಗ್’ ಮೂಲಕ ಅವರ ಆವಿಷ್ಕಾರದಿಂದಾಗಿ ಅಮೆರಿಕವು ಆಟೋಗಳಲ್ಲಿ ಪ್ರಾಬಲ್ಯ ಸಾಧಿಸಿದೆ ಎಂದು ನಾನು ನಂಬುತ್ತೇನೆ. ಗೌತಮ್ ಮತ್ತು ಅವರ ‘ಸಾಧನೆ’ ಪ್ರವರ್ಧಮಾನಕ್ಕೆ ಬರಲಿ. ವೇಲು ದಯವಿಟ್ಟು ಅವರನ್ನು ತಲುಪಿ ಎಂದು ಟ್ವೀಟ್‌ನಲ್ಲಿ ಕೈಗಾರಿಕೋದ್ಯಮಿ ಆನಂದ ಮಹಿಂದ್ರಾ ಬರೆದಿದ್ದಾರೆ.

ಪ್ರಮುಖ ಸುದ್ದಿ :-   ನೂಪುರ್ ಶರ್ಮಾ ಸೇರಿದಂತೆ ಹಲವು ಹಿಂದೂ ನಾಯಕರ ಹತ್ಯೆಗೆ ಸಂಚು: ಮೌಲ್ವಿ ಬಂಧನ

ಟ್ವೀಟ್‌ ಹಂಚಿಕೊಂಡಾಗಿನಿಂದ, ಗೌತಮ್ ಅವರ ವೀಡಿಯೊ 2,49,000 ವೀಕ್ಷಣೆಗಳನ್ನು ಗಳಿಸಿದೆ. ಗೌತಮ್ ಅವರನ್ನು ತಲುಪುವ ಮಹೀಂದ್ರ ಅವರ ಗೆಸ್ಚರ್ ಅನ್ನು ಇಂಟರ್ನೆಟ್ ಬಳಕೆದಾರರು ಪ್ರಶಂಸಿಸಿದ್ದಾರೆ.
ಹರ್ ಘರ್ ವಿಜ್ಞಾನಿ! ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ, ಆರ್ಥಿಕವಾಗಿ ಹಿಂದುಳಿದವರು ಆದರೆ ಉತ್ಸಾಹವುಳ್ಳವರು ಹಲವಾರು ನಿರ್ಬಂಧಗಳೊಂದಿಗೆ ಅಸಾಧ್ಯವಾದುದನ್ನು ಮಾಡುತ್ತಾರೆ ಎಂದು ಒಬ್ಬ ಬಳಕೆದಾರರು ಹೇಳಿದ್ದಾರೆ, ಮತ್ತೊಬ್ಬರು “ನಮಗೆ ಪ್ರತಿಭೆಯ ಕೊರತೆಯಿಲ್ಲ, ನಮಗೆ ಬೇಕಾಗಿರುವುದು ಪ್ರೋತ್ಸಾಹ ಮತ್ತು ಸರಿಯಾದ ಅವಕಾಶ ಎಂದು ಬರೆದಿದ್ದಾರೆ.

ಪ್ರಮುಖ ಸುದ್ದಿ :-   ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಿದ್ದಕ್ಕೆ ವಿರೋಧ : ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ ಪಕ್ಷದ ರಾಷ್ಟ್ರೀಯ ವಕ್ತಾರೆ ರಾಧಿಕಾ ಖೇರಾ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement