ಅಮಾನತುಗೊಂಡ ಬಿಜೆಪಿ ಶಾಸಕ ರಾಜಾ ಸಿಂಗ್ ಅವರನ್ನು ಮತ್ತೆ ಬಂಧಿಸಿದ ಪೊಲೀಸರು

ಹೈದರಾಬಾದ್‌: ಏಪ್ರಿಲ್‌ನಲ್ಲಿ ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ತೆಲಂಗಾಣ ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ಅವರನ್ನು ಗುರುವಾರ ಮತ್ತೊಮ್ಮೆ ಬಂಧಿಸಲಾಗಿದೆ.
ಮುಸ್ಲಿಮ್ ಸಮುದಾಯ ಮತ್ತು ಪ್ರವಾದಿ ವಿರುದ್ಧ ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡಿದ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮುನಾವರ್ ಫರುಕಿಯನ್ನು ಟೀಕಿಸುವ ವೀಡಿಯೊವನ್ನು ಶಾಸಕರು ಸೋಮವಾರ ತಡರಾತ್ರಿ ಬಿಡುಗಡೆ ಮಾಡಿದಾಗಿನಿಂದ ಹೈದರಾಬಾದ್‌ನಲ್ಲಿ ಭಾರೀ ಪ್ರತಿಭಟನೆಗಳು ಭುಗಿಲೆದ್ದವು.

ರಾಮನವಮಿ ಕಾರ್ಯಕ್ರಮವೊಂದರಲ್ಲಿ ಸಿಂಗ್ ಈ ಹೇಳಿಕೆ ನೀಡಿದ ನಂತರ ಹೈದರಾಬಾದ್‌ನ ಶಾಜಿನಾಯತ್‌ಗಂಜ್ ಮತ್ತು ಮಂಗಲ್‌ಘಾಟ್ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಬಂಧನದ ನಂತರ ವೈದ್ಯಕೀಯ ತಪಾಸಣೆಗಾಗಿ ಉಸ್ಮಾನಿಯಾ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಸಿಂಗ್ ಮಂಗಳವಾರ ಪ್ರವಾದಿಯ ಬಗ್ಗೆ ಆಪಾದಿತ ಹೇಳಿಕೆಗಳೊಂದಿಗೆ ವಿವಾದಕ್ಕೆ ಕಾರಣರಾಗಿದ್ದರು. ಹಾಸ್ಯನಟ ಮುನ್ನಾವರ್ ಫರುಕಿ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ ಹೇಳಿಕೆ ಮಾಡುವಾಗ ಪ್ರವಾದಿ ಮಹಮ್ಮದ್‌ ಬಗ್ಗೆ ನೀಡಿದ್ದಾರೆನ್ನಲಾದ ಹೇಳಿಕೆ ಕೋಲಾಹಲವನ್ನು ಸೃಷ್ಟಿಸಿದ ನಂತರ, ಬಿಜೆಪಿ ಅವರನ್ನು ಪಕ್ಷದಿಂದ ಅಮಾನತುಗೊಳಿಸಿದೆ. ಹಾಗೂ ನಿಮ್ಮನ್ನು ಏಕೆ ಉಚ್ಚಾಟಿಸಬಾರದು ಎಂಬುದಕ್ಕೆ ಸೆಪ್ಟೆಂಬರ್ 2 ರೊಳಗೆ ಕಾರಣ ತಿಳಿಸುವಂತೆ  ಬಿಜೆಪಿ ನೋಟಿಸ್‌ ನೀಡಿದೆ.

ಪ್ರಮುಖ ಸುದ್ದಿ :-   ವೀಡಿಯೊ...| "ನಮಗೆ ಪ್ರತಿಕ್ರಿಯಿಸಲು 30-45 ಸೆಕೆಂಡುಗಳು ಮಾತ್ರ ಸಮಯ ಇತ್ತು": ಭಾರತದ ಬ್ರಹ್ಮೋಸ್ ಕ್ಷಿಪಣಿ ದಾಳಿ ಬಗ್ಗೆ ಪಾಕ್ ಪ್ರಧಾನಿ ಸಲಹೆಗಾರ

ಪೊಲೀಸರು ತಕ್ಷಣವೇ ಸಿಂಗ್ ಅವರನ್ನು ಬಂಧಿಸಿದ್ದರೂ, ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಅವರನ್ನು ಬಂಧಿಸುವ ಮೊದಲು ಬಿಜೆಪಿ ನಾಯಕನಿಗೆ ಸಿಆರ್‌ಪಿಸಿ ಸೆಕ್ಷನ್ 41 ರ ಅಡಿಯಲ್ಲಿ ನೋಟಿಸ್ ನೀಡಿಲ್ಲ ಎಂದು ಹೇಳಿ ಅವರ ರಿಮಾಂಡ್ ಕೋರಿಕೆಯನ್ನು ತಿರಸ್ಕರಿಸಿತು.
ರಾಜಾ ಸಿಂಗ್ ಅವರು ನಗರವನ್ನು ತೊರೆಯಬಾರದು ಮತ್ತು ಅವರ ಮನೆಯಿಂದ ಹೊರಬರುವ ಮೊದಲು ಪೊಲೀಸರಿಂದ ಅನುಮತಿ ಪಡೆಯಬೇಕು ಎಂಬ ಷರತ್ತಿನ ಮೇಲೆ ಬಿಡುಗಡೆ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ.
ಯೂ ಟ್ಯೂಬ್‌ನಲ್ಲಿ ಸಿಂಗ್ ಅವರ ತಂಡ ಸೋಮವಾರ ತಡರಾತ್ರಿ ಅಪ್‌ಲೋಡ್ ಮಾಡಿದ 10 ನಿಮಿಷಗಳ ವೀಡಿಯೊದಲ್ಲಿ, ಮುನಾವರ್‌ ಫರುಕಿ ಅವರದ್ದು”ಕೀಳುಮಟ್ಟದ ಹಾಸ್ಯ” ಎಂದು ಕರೆದರು ಮತ್ತು ಹಿಂದೂ ದೇವರುಗಳಾದ ರಾಮ ಮತ್ತು ಸೀತೆಯನ್ನು ಗುರಿಯಾಗಿಸಿಕೊಂಡು ಹಾಸ್ಯ ಮಾಡುತ್ತಾರೆ ಎಂದು ಆರೋಪಿಸಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement