
ರಾಜಸ್ತಾನದ ಬರಾನ್‌ನಲ್ಲಿ ನಡೆದ ವಿಲಕ್ಷಣ ಘಟನೆಯೊಂದರಲ್ಲಿ ವಿದ್ಯಾರ್ಥಿ ಸಂಘದ ಮುಖಂಡರು ವಿದ್ಯಾರ್ಥಿಗಳ ಕಾಲಿಗೆ ಬಿದ್ದು ತಮ್ಮ ಪರವಾಗಿ ಮತ ಚಲಾಯಿಸುವಂತೆ ಮನವಿ ಮಾಡಿದ್ದು, ಈ ಅಪೂರ್ವ ದೃಶ್ಯವನ್ನು ಕಂಡು ಸ್ಥಳದಲ್ಲಿದ್ದವರೆಲ್ಲರೂ ಆಶ್ಚರ್ಯಚಕಿತರಾದರು. ಅದರ ಕೆಲವು ಚಿತ್ರಗಳು ಮತ್ತು ವೀಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ಈ ಕ್ಲಿಪ್ ಅನ್ನು ಅನ್‌ಸೀನ್ ಇಂಡಿಯಾ ಎಂಬ ಪುಟವು ಟ್ವಿಟರ್‌ನಲ್ಲಿ ಹಂಚಿಕೊಂಡಿದೆ ಮತ್ತು ನಂತರ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.

ಈಗ ವೈರಲ್ ಆಗಿರುವ ವಿಡಿಯೋದಲ್ಲಿ ವಿದ್ಯಾರ್ಥಿ ಸಂಘದ ಮುಖಂಡರು ತಮ್ಮ ಬ್ಯಾಚ್‌ಮೇಟ್‌ಗಳೊಂದಿಗೆ ಮತ ಯಾಚನೆ ಮಾಡುವುದನ್ನು ಕಾಣಬಹುದು. ಅಕ್ಷರಶಃ ಬಾಲಕಿಯರ ಕಾಲಿಗೆ ಬಿದ್ದು ತಮ್ಮ ಪರವಾಗಿ ಮತ ಹಾಕುವಂತೆ ಕೈಮುಗಿದು ಮನವಿ ಕೂಡ ಮಾಡಿದ್ದಾರೆ.ಎಲ್ಲಾ ವಿದ್ಯಾರ್ಥಿ ಮುಖಂಡರು ಇತರ ವಿದ್ಯಾರ್ಥಿಗಳನ್ನು ತಮ್ಮ ಪಕ್ಷಗಳ ಪರವಾಗಿ ಮತ ಹಾಕಲು ಹಲವು ತಂತ್ರಗಳನ್ನು ಪ್ರಯತ್ನಿಸುತ್ತಿದ್ದಾರೆ.
ಎರಡು ವರ್ಷಗಳ ನಂತರ ಶುಕ್ರವಾರ ರಾಜಸ್ಥಾನದಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ ನಡೆಯುತ್ತಿದೆ. ಬೆಳಗ್ಗೆ 8 ಗಂಟೆಗೆ ಮತದಾನ ಆರಂಭವಾಯಿತು. ಶನಿವಾರ ಬೆಳಗ್ಗೆ ಮತ ಎಣಿಕೆ ಆರಂಭವಾಗಲಿದ್ದು, ಮಧ್ಯಾಹ್ನದ ನಂತರ ಫಲಿತಾಂಶ ಹೊರಬೀಳಲಿದೆ.


ನಿಮ್ಮ ಕಾಮೆಂಟ್ ಬರೆಯಿರಿ