ಸೇತುವೆ ಕುಸಿತ: ಸ್ವಲ್ಪದರಲ್ಲೇ ಅಪಾಯದಿಂದ ಪಾರಾದ ಮಾಜಿ ಡಿಸಿಎಂ ಡಾ. ಪರಮೇಶ್ವರ

ತುಮಕೂರು: ಮಾಜಿ ಉಪಮುಖ್ಯಮಂತ್ರಿ ಹಾಗೂ ನಾಯಕ ಡಾ.ಜಿ.ಪರಮೇಶ್ವರ ಅವರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದ ವಿದ್ಯಮಾನವೊಂದು ನಡೆದಿದೆ. ಅವರು ಭಾಗಶಃ ಕುಸಿದಿದ್ದ ಸೇತುವೆಯೊಂದನ್ನು ವೀಕ್ಷಿಸಲು ಹೋಗಿದ್ದಾಗ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ನಿನ್ನೆ, ಗುರುವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ತುಮಕೂರು ಜಿಲ್ಲೆಯ ಗೊರವನಹಳ್ಳಿ-ತೀತಾ ರಸ್ತೆಯಲ್ಲಿನ ಸೇತುವೆಯೊಂದು ಭಾಗಶಃ ಕುಸಿದಿತ್ತು. ಮಾಹಿತಿ ಗೊತ್ತಾಗಿ ಸೇಉವೆ ಪರಿಸ್ಥಿತಿಯನ್ನು ವೀಕ್ಷಿಸಲು ಪರಮೇಶ್ವರ ಅವರು ಅಧಿಕಾರಿಗಳು ಹಾಗೂ ಇತರರೊಂದಿಗೆ ಅಲ್ಲಿಗೆ ತೆರಳಿದ್ದರು.

ಭಾಗಶಃ ಕುಸಿದಿದ್ದ ಸೇತುವೆ ಮೇಲೆಯೇ ನಿಂತು ವೀಕ್ಷಣೆ ಮಾಡಿದ್ದರು ಹಾಗೂ ಪರಿಸ್ಥಿತಿಯನ್ನು ಅವಲೋಕಿಸಿದ್ದರು. ಹಾಗೆ ವೀಕ್ಷಣೆ ಮಾಡಿ ಅವರು ಅಲ್ಲಿಂದ ತೆರಳಿ ಸ್ವಲ್ಪ ದೂರ ಸಾಗುತ್ತಿದ್ದಂತೆ ಸೇತುವೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಸೇತುವೆ ವೀಕ್ಷಿಸಿ ಮುಂದೆ ಹೋದ 5 ನಿಮಿಷಕ್ಕೆ ಸೇತುವೆಯ ಇನ್ನೊಂದು ಭಾಗ ಕುಸಿತಗೊಂಡಿದ್ದು, ಪರಮೇಶ್ವರ್ ನಿಂತು ವೀಕ್ಷಿಸಿದ್ದ ಸ್ಥಳವೂ ಕುಸಿತಗೊಂಡಿದೆ. ಅದೃಷ್ಟವಶಾತ್, ಅವರು ಹಾಗೂ ಇತರರು ಅಷ್ಟರೊಳಗೇ ಅಲ್ಲಿಂದ ತೆರಳಿದ್ದರಿಂದ ಸಂಭನೀಯ ಅನಾಹುತ ತಪ್ಪಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement