ಮಾಲ್ ಒಳಗೆ ನಮಾಜ್ ಮಾಡುವುದನ್ನು ವಿರೋಧಿಸಿ ಹಿಂದೂ ಸಂಘಟನೆಗಳಿಂದ ಭಜನೆ

ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ನಗರದ ಮಾಲ್‌ನಲ್ಲಿ ನಮಾಜ್ ಮಾಡುವ ಕುರಿತು ಶನಿವಾರ ವಿವಾದ ಭುಗಿಲೆದ್ದಿದೆ. ಬಲಪಂಥೀಯ ಹಿಂದೂಪರ ಸಂಘಟನೆಗಳ ಸದಸ್ಯರು ಮಾಲ್‌ನಲ್ಲಿ ಮುಸ್ಲಿಂ ನೌಕರರು ನಮಾಜ್ ಮಾಡುವುದನ್ನು ವಿರೋಧಿಸಿದರು.
ಶನಿವಾರ, ಮಾಲ್‌ನ ನೆಲಮಹಡಿಯಲ್ಲಿನ ಅಗ್ನಿಶಾಮಕ ನಿರ್ಗಮನದ ಬಳಿ ಕೆಲವು ಉದ್ಯೋಗಿಗಳು ನಮಾಜ್ ಮಾಡುತ್ತಿದ್ದಾಗ, ಕೆಲವು ಹಿಂದೂಪರ ಸಂಘಟನೆಗಳ ಸದಸ್ಯರು ಸ್ಥಳಕ್ಕೆ ಆಗಮಿಸಿ ಅಸಮಾಧಾನ ವ್ಯಕ್ತಪಡಿಸಿದರು. ಇಂದು ಶನಿವಾರ ಮಧ್ಯಾಹ್ನ 3:30 ರ ಸುಮಾರಿಗೆ ಆಗಮಿಸಿ ಇದಕ್ಕೆ ವಿರೋಧಿಸಿದರು ಹಾಗೂ ಮಾಲ್ ಒಳಗೆ ಭಜನೆ ಹಾಡಲು ಪ್ರಾರಂಭಿಸಿದರು.
ವಿವಾದ ಉಲ್ಬಣಗೊಳ್ಳುತ್ತಿರುವುದನ್ನು ಕಂಡು ಮಾಲ್ ಆಡಳಿತ ಮಂಡಳಿ ಮತ್ತು ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಎರಡೂ ಕಡೆಯವರನ್ನು ಸಮಾಧಾನ ಪಡಿಸಿದರು. ಮಾಲ್‌ನಲ್ಲಿ ಗಲಾಟೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿದರು.

ಬಜರಂಗದಳದ ಇಲಾಖಾ ಸಂಯೋಜಕ ದಿನೇಶ್ ಯಾದವ್ ಮಾತನಾಡಿ, ಮಾಲ್‌ನಲ್ಲಿ ಬಹಳ ದಿನಗಳಿಂದ ಗುಂಪು ನಮಾಜ್ ಮಾಡಲಾಗುತ್ತಿದ್ದು, ಈ ಬಗ್ಗೆ ಮಾಲ್‌ನ ಇತರ ಉದ್ಯೋಗಿಗಳು ಮಾಹಿತಿ ನೀಡಿದ್ದಾರೆ. ಮಾಲ್‌ನಲ್ಲಿ ನಮಾಜ್ ಮಾಡಿದರೆ ಮಾಲ್ ಮುಂದೆ ಸಾಮೂಹಿಕವಾಗಿ ಹನುಮಾನ್ ಚಾಲೀಸಾ ಪಠಿಸಲಾಗುವುದು ಎಂದು  ಎಚ್ಚರಿಕೆ ನೀಡಲಾಗಿದೆ ಎಂದರು.
ಏತನ್ಮಧ್ಯೆ, ಘಟನೆಯ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಮಧ್ಯಪ್ರದೇಶ ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಸಿಬಿಐ ಜಂಟಿ ನಿರ್ದೇಶಕರಾಗಿ ಐವರು ಡಿಐಜಿಗಳನ್ನು ನೇಮಕ ಮಾಡಿದ ಕೇಂದ್ರ

ಈ ವಿಷಯದಲ್ಲಿ ಯಾವುದೇ ಕಡೆಯಿಂದ ದೂರು ದಾಖಲಾಗಿಲ್ಲ. ಪೊಲೀಸರು ಎರಡೂ ಕಡೆಯವರಿಗೆ ಸಮಜಾಯಿಷಿ ನೀಡಿದ್ದು, ಬಳಿಕ ಪ್ರಕರಣ ಇತ್ಯರ್ಥಗೊಂಡಿದೆ. ಮಾಲ್ ಒಳಗೆ ಯಾವುದೇ ರೀತಿಯ ಧಾರ್ಮಿಕ ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡದಿರುವ ಕುರಿತು ಆಡಳಿತ ಮಂಡಳಿ ನಿರ್ಧಾರ ತೆಗೆದುಕೊಳ್ಳಲಿದೆ  ಎಂದು ಎಸ್‌ಪಿ ನಗರ ಪೊಲೀಸ್ ಠಾಣೆ ಪ್ರಭಾರಿ ಸುಧೀರ್ ಅರ್ಜಾರಿಯಾ ತಿಳಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement