ಬೂಟುಗಳಿಂದ ಹೊಡೆದರೆ ನಮ್ಮನ್ನು ದೂಷಿಸಬೇಡಿ: ಬಿಜೆಪಿ, ಸಿಪಿಐ(ಎಂ) ಪಕ್ಷಗಳಿಗೆ ಟಿಎಂಸಿ ಸಂಸದ ಸೌಗತ ರಾಯ್ ಎಚ್ಚರಿಕೆ

ಕೋಲ್ಕತ್ತಾ:ಕೆಲವರ ದುಷ್ಕೃತ್ಯಗಳಿಗಾಗಿ ತಮ್ಮ ಪಕ್ಷದ ಮೇಲೆ ದಾಳಿ ಮಾಡುವಾಗ ಸಭ್ಯತೆಯ ಮಿತಿಯನ್ನು ದಾಟಬೇಡಿ ಎಂದು ತೃಣಮೂಲ ಕಾಂಗ್ರೆಸ್ ಸಂಸದ ಸೌಗತ ರಾಯ್ ಅವರು ಬಿಜೆಪಿ ಮತ್ತು ಸಿಪಿಐ(ಎಂ) ಪಕ್ಷಗಳಿಗೆ ಎಚ್ಚರಿಕೆ ನೀಡಿದ್ದು ಈಗ ವಿವಾದಕ್ಕೆ ಕಾರಣವಾಗಿದೆ. ಬೂಟುಗಳಿಂದ ಥಳಿಸಿ ಸ್ಥಳದಿಂದ ಓಡಿಸಿದರೆ ದೂರು ಹೇಳಬೇಡಿ ಎಂದು ಸಂsದ ರಾಯ್‌ ಬಿಜೆಪಿ ಮತ್ತು ಸಿಪಿಐ(ಎಂ) ಮುಖಂಡರಿಗೆ ಹೇಳಿದ್ದಾರೆ.
ದಮ್ ದಮ್‌ನಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಯ್, ವಿವಿಧ ಪ್ರಕರಣಗಳಲ್ಲಿ ಕೇಂದ್ರ ತನಿಖಾ ಸಂಸ್ಥೆಗಳು ಹಿರಿಯ ನಾಯಕರಾದ ಪಾರ್ಥ ಚಟರ್ಜಿ ಮತ್ತು ಅನುಬ್ರತಾ ಮೊಂಡಲ್ ಅವರನ್ನು ಬಂಧಿಸಿದ ನಂತರ ಟಿಎಂಸಿ ನಾಯಕರ ವಿರುದ್ಧ “ಮಾನಹಾನಿಕರ ದಾಳಿ” ಯ ಬಗ್ಗೆ ನಾನು ವಿಸ್ಮಯಗೊಂಡಿದ್ದೇನೆ ಎಂದು ಹೇಳಿದರು.

ಬಿಜೆಪಿ ಮತ್ತು ಸಿಪಿಐ(ಎಂ)ನವರು ಟಿಎಂಸಿ ಪಕ್ಷದ ಮೇಲೆ ದಾಳಿ ಮಾಡುವಾಗ ಟಿಎಂಸಿಯ ಪ್ರತಿಯೊಬ್ಬರನ್ನು ಕಳ್ಳರೆಂದು ಬ್ರಾಂಡ್ ಮಾಡುವ ಮೂಲಕ ಸಭ್ಯತೆಯ ಮಿತಿಯನ್ನು ದಾಟಿದರೆ, ನಮ್ಮ ಪಕ್ಷದವರು ನಿಮಗೆ ಶೂಗಳಿಂದ ಹೊಡೆದರೆ ನಮ್ಮನ್ನು ದೂಷಿಸಬೇಡಿ. ನೀವು ನಿಜವಾಗಿಯೂ ಮಾತನಾಡಲು ಬಯಸಿದರೆ, ಬಂಧನಕ್ಕೊಳಗಾದವರ ವಿರುದ್ಧ ಮಾತನಾಡಿ ಮತ್ತು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಸೌಗತ ರಾಯ್ ಹೇಳಿದರು.
ರಾಯ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್, ಹಿರಿಯ ನಾಯಕರ ಹೇಳಿಕೆಗಳು ಟಿಎಂಸಿಯಲ್ಲಿ ಹೇಗೆ ಮೌಖಿಕ ನಿಂದನೆ ಎಂಬುದು ಪ್ರವೃತ್ತಿಯಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಶಿಂಧೆ ಬಣದ ಶಿವಸೇನೆ ಸೇರಿದ ಬಾಲಿವುಡ್‌ ನಟ ಗೋವಿಂದ : 14 ವರ್ಷಗಳ ವನವಾಸದ ನಂತರ ರಾಜಕೀಯಕ್ಕೆ

ಪ್ರೊಫೆಸರ್ ಆಗಿರುವ ಅವರು ಹಾಗೆಲ್ಲ ಹೇಳಬಾರದು. ದಿನೇ ದಿನೇ ಅವರ ಪಕ್ಷ ಜನಪ್ರಿಯತೆ ಕಳೆದುಕೊಳ್ಳುತ್ತಿದೆ, ಅದಕ್ಕಾಗಿಯೇ ಅವರ ಹೇಳಿಕೆಗಳು ತಮ್ಮ ಜನಪ್ರಿಯತೆಯನ್ನು ಉಳಿಸಿಕೊಳ್ಳುವ ಹತಾಶ ಪ್ರಯತ್ನವಾಗಿದೆ. ಸೌಗತ ರಾಯ್ ವಿರುದ್ಧ ಮಮತಾ ಬ್ಯಾನರ್ಜಿ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ಸುಭಾಂಕರ್ ಸರ್ಕಾರ್ ಹೇಳಿದ್ದಾರೆ.
ಇದೇ ವೇಳೆ ಮಾತನಾಡಿದ ಬಿಜೆಪಿಯ ಅಗ್ನಿಮಿತ್ರ ಪಾಲ್, “ಪ್ರೊಫೆಸರ್ ಮಾತನಾಡುವುದು ಹೀಗೆಯೇ? ಮಮತಾ ಬ್ಯಾನರ್ಜಿ ಅವರು ರಾಯ್ ಅವರ ಮಾತಿಗೆ ಅವರಿಗೆ ಶೋಕಾಸ್ ನೋಟಿಸ್ ಕಳುಹಿಸುತ್ತಿಲ್ಲ ಏಕೆ? ತೃಣಮೂಲ ಮಾತನಾಡುವುದು ಹೀಗೆ. ಸೌಗತ ರಾಯ್ ನಾರದ ಹಗರಣದಲ್ಲಿ ಹಣ ತೆಗೆದುಕೊಳ್ಳುವುದನ್ನು ನಾವು ನೋಡಿದ್ದೇವೆ. ಬಂಗಾಳದ ಜನರನ್ನು ಭಯಭೀತಗೊಳಿಸಲು ಟಿಎಂಸಿಗೆ ರಾಯ್‌ ಬೇಕು ಎಂದು ಹೇಳಿದ್ದಾರೆ.

3.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement