ಹುಬ್ಬಳ್ಳಿ: ಬೆಣ್ಣೆಹಳ್ಳದ ಪ್ರವಾಹದಲ್ಲಿ ಕೊಚ್ಚಿ ಹೋದ ಯುವಕ, 20 ಜನರ ರಕ್ಷಣೆ

ಹುಬ್ಬಳ್ಳಿ: ತಾಲೂಕಿನ ಇಂಗಳಹಳ್ಳಿ ಗ್ರಾಮದ ಬೆಣ್ಣೆಹಳ್ಳದ ಪ್ರವಾಹದಲ್ಲಿ ಯುವಕನೊಬ್ಬ ಕೊಚ್ಚಿಕೊಂಡು ಹೋಗಿದ್ದಾನೆ ಎಂದು ವರದಿಯಾಗಿದೆ.
ದಿಢೀರ್‌ ಪ್ರವಾಹಕ್ಕೆ 32 ಜನ ಸಿಲುಕಿಕೊಂಡಿದ್ದರು. 20 ಜನರನ್ನು ರಕ್ಷಿಸಲಾಗಿದ್ದು, ಉಳಿದವರನ್ನು ಸುರಕ್ಷಿತವಾಗಿ ಕರೆ ತರುವ ರಕ್ಷಣಾ ಕಾರ್ಯ ನಡೆದಿದೆ.
ಇಂಗಳಹಳ್ಳಿಯ ಮೇಲ್ಭಾಗದಲ್ಲಿ ರಭಸದ ಮಳೆಯಾಗುತ್ತಿರುವುದರಿಂದ ಇಂಗಳಹಳ್ಳಿ ಗ್ರಾಮದ ಬಳಿ ಬರುವ ಬೆಣ್ಣೆಹಳ್ಳ ಉಕ್ಕಿ ಹರಿಯಲಾರಂಭಿಸಿದೆ. ಈ ಸಮಯದಲ್ಲಿ ಕುಸ್ತಿ ಪಂದ್ಯಾವಳಿ ವೀಕ್ಷಣೆಗೆ ಆಗಮಿಸಿದ ಕೆಲವರು ಹಳ್ಳ ದಾಟಲು ಮುಂದಾಗಿದ್ದಾರೆ. ಅದರಲ್ಲಿ ನಾಲ್ವರು ನೀರಿನಲ್ಲಿ ಆಯ ತಪ್ಪಿ ಬಿದ್ದಿದ್ದಾರೆ. ಇಬ್ಬರು ನೀರಿನಿಂದ ಪಾರಾಗಿದ್ದಾರೆ. ಇನ್ನುಳಿದ ಇಬ್ಬರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಮತ್ತೊಬ್ಬ ಗಿಡದ ಕಂಟೆ ಹಿಡಿದುಕೊಂಡು ಪಾರಾಗಿದ್ದು, ಮತ್ತೊಬ್ಬನಿಗಾಗಿ ಹುಡುಕಾಟ ನಡೆದಿದೆ. ಜಮೀನಿಗೆ ಕೆಲಸಕ್ಕೆಂದು ತೆರಳಿದ್ದು ವಾಪಸ್ ಬರುವಾಗ ಏಕಾಏಕಿ ಹಳ್ಳದ ನೀರು ಹೆಚ್ಚಾದ ಕಾರಣ‌ ಜನ ಸಿಲುಕಿಕೊಂಡಿದ್ದರು
ಸ್ಥಳದಲ್ಲಿ ಗ್ರಾಮೀಣ ತಹಶೀಲ್ದಾರ್ ಪ್ರಕಾಶ ನಾಶಿ, ಗ್ರಾಮೀಣ ಪೊಲೀಸ್ ಠಾಣಾಧಿಕಾರಿ ಗೋಕಾಕ ಮೊದಲಾದವರು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement