2020ರ ವಿವಾದಾತ್ಮಕ ಟ್ವೀಟ್‌ಗಾಗಿ ನಟ ಕಮಲ್ ಆರ್ ಖಾನ್ ಬಂಧನ

ಮುಂಬೈ: ಕೆಆರ್‌ಕೆ ಎಂಬ ಮೊದಲಕ್ಷರಗಳಿಂದ ಪರಿಚಿತರಾಗಿರುವ ನಟ ಕಮಲ್ ಆರ್ ಖಾನ್ ಅವರನ್ನು ಎರಡು ವರ್ಷಗಳ ಹಿಂದಿನ ವಿವಾದಾತ್ಮಕ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಾಗಿ ಇಂದು, ಮಂಗಳವಾರ ಬಂಧಿಸಲಾಗಿದೆ.
ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿದ ನಂತರ ಮಂಗಳವಾರ ಖಾನ್ ಅವರನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಅವರನ್ನು ಮುಂಬೈನ ಬೊರಿವಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.
ಕಮಲ್ ರಶೀದ್ ಖಾನ್ ಅವರನ್ನು 2020 ರಲ್ಲಿ ಅವರ ವಿವಾದಾತ್ಮಕ ಟ್ವೀಟ್‌ಗಾಗಿ ಮಲಾಡ್ ಪೊಲೀಸರು ಬಂಧಿಸಿದರು. ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿದ ನಂತರ ಅವರನ್ನು ಬಂಧಿಸಲಾಯಿತು.

ಕಮಾಲ್ ಆರ್ ಖಾನ್ ವಿವಾದಾತ್ಮಕ ಟ್ವೀಟ್‌ಗಳಿಗೆ ಹೆಸರುವಾಸಿಯಾಗಿದ್ದಾರೆ. ಇರ್ಫಾನ್ ಮತ್ತು ರಿಷಿ ಕಪೂರ್ ಅವರ ಮೇಲೆ ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹವಾಗಿ ಬರೆದ ನಂತರ 2020 ರಲ್ಲಿ ಕಮಲ್‌ ಆರ್.ಖಾನ್‌ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಕೆಆರ್‌ಕೆ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಮಾಡಲಾಗಿದ್ದು, 2020ರಲ್ಲಿ ಆತನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಯುವಸೇನೆ ಸದಸ್ಯ ರಾಹುಲ್ ಕನಾಲ್ ಎಂಬವರು ದೂರು ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 153A, 294, 500, 501, 505, 67, 98 ಅಡಿಯಲ್ಲಿ ಬಂಧಿಸಲಾಗಿದೆ.
ನನ್ನ ದೂರಿನ ಮೇರೆಗೆ ಕಮಲ್ ಆರ್ ಖಾನ್ ಅವರನ್ನು ಇಂದು ಬಂಧಿಸಲಾಗಿದೆ. ಮುಂಬೈ ಪೊಲೀಸರ ಈ ಕ್ರಮವನ್ನು ನಾನು ಸ್ವಾಗತಿಸುತ್ತೇನೆ. ಅವರು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡುತ್ತಾರೆ ಮತ್ತು ಅಸಭ್ಯ ಭಾಷೆ ಬಳಸುತ್ತಾರೆ. ಇಂತಹ ನಡವಳಿಕೆ ಸಮಾಜದಲ್ಲಿ ಸ್ವೀಕಾರಾರ್ಹವಲ್ಲ. ಅವರನ್ನು ಬಂಧಿಸುವ ಮೂಲಕ ಮುಂಬೈ ಪೊಲೀಸರು ಅಂತಹವರ ವಿರುದ್ಧ ಬಲವಾದ ಸಂದೇಶ ಕಳುಹಿಸಿದ್ದಾರೆ ಎಂದು ರಾಹುಲ್ ಕನಾಲ್ ಹೇಳಿದ್ದಾರೆ.
ಕಮಾಲ್ ಆರ್ ಖಾನ್ ಬಾಲಿವುಡ್‌ನ ಮೇಲಿನ ಬಹಿರಂಗ ದಾಳಿಯಿಂದಾಗಿ ಆಗಾಗ್ಗೆ ಹೆಡ್‌ಲೈನ್‌ ಮಾಡುತ್ತಾರೆ. ಅವರು ಹಲವಾರು ಹಿಂದಿ ಮತ್ತು ಭೋಜ್‌ಪುರಿ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಬಿಗ್ ಬಾಸ್ 3 ರ ಭಾಗವಾಗಿದ್ದರು.

ಪ್ರಮುಖ ಸುದ್ದಿ :-   ಬೆಂಬಲ ಹಿಂಪಡೆದ ಮೂವರು ಪಕ್ಷೇತರ ಶಾಸಕರು : ಸಂಕಷ್ಟದಲ್ಲಿ ಹರಿಯಾಣದ ಬಿಜೆಪಿ ಸರ್ಕಾರ

2.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement