ಒಂದು ತಿಂಗಳ ಕಾಲ ಕುಟುಂಬದ ಜೊತೆ ಕಾರಿನಲ್ಲಿ ಪ್ರಯಾಣಿಸಿದ ಕಾಳಿಂಗ ಸರ್ಪ: ಅದು ಇದ್ದಿದ್ದೇ ಯಾರಿಗೂ ಗೊತ್ತಾಗಲಿಲ್ಲ..!

ಕೊಟ್ಟಾಯಂ: ಕೇರಳದ ಕೊತ್ತಾಯಂನ ಅರ್ಪುಕರ ಮೂಲದ ಸುಜಿತ್ ಎಂಬವರ ಕಾರಿನಲ್ಲಿ ಸುಮಾರು ಒಂದು ತಿಂಗಳ ಕಾಲ ಅಡಗಿದ್ದ ಕಾಳಿಂಗ ಸರ್ಪ ಕುಟುಂಬ ಎಲ್ಲೆಲ್ಲಿಗೆ ಹೋಗಿದೆಯೋ ಅಲ್ಲೆಲ್ಲ ಪ್ರಯಾಣ ಬೆಳೆಸಿದೆ. ಆದರೆ ಕುಟುಂಬಕ್ಕೆ ಇದು ಗೊತ್ತೇ ಇರಲಿಲ್ಲ..!
ಒಂದು ತಿಂಗಳ ಹಿಂದೆ, ಸುಜಿತ್ ಮತ್ತು ಅವರ ಸ್ನೇಹಿತರು ಕೆಲಸದ ನಿಮಿತ್ತ ನಿಲಂಬೂರಿಗೆ ಹೋಗಿದ್ದಾಗ ಕಾರಿನ ಸಮೀಪದಲ್ಲಿ ಕಾಣಿಸಿಕೊಂಡಿದ್ದ ಕಾಳಿಂಗ ಸರ್ಪ ನಂತರ ಕಣ್ಮರೆಯಾಗಿತ್ತು.
ಕಾರಿಗೆ ಹಾವು ಕಾರಿನೊಳಗೆ ಸೇರಿಕೊಂಡಿದೆಯೇ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿದ ಬಳಿಕವೇ ಅವರು ಹಿಂತಿರುಗಿದ್ದರು.
ಆದರೆ ಸುಮಾರು ಒಂದು ತಿಂಗಳ ನಂತರ ಭಾನುವಾರ ಕಾರಿನಲ್ಲಿ ನೇತಾಡುತ್ತಿದ್ದ ಹಾವಿನ ಪೊರೆಯನ್ನು ಕಂಡಾಗ ಅವರು ಮತ್ತು ಅವರ ಕುಟುಂಬವು ಆತಂಕದ ಭಾವನೆ ಆವರಿಸಿತು. ನಂತರ ಹಾವು ಹತ್ತಿರವೇ ಇರಬಹುದು ಎಂದು ಶಂಕಿಸಿ ಉರಗ ತಜ್ಞ ವಾವಾ ಸುರೇಶ್ ಅವರನ್ನು ಸಂಪರ್ಕಿಸಿದರು. ಅವರು ಆಗಮಿಸಿ ಕಾರಿನ ಭಾಗಗಳನ್ನು ತೆಗೆದು ಕಾರಿನೊಳಗೆ ಕೂಲಂಕಷವಾಗಿ ನೋಡಿದರು.

ಆದರೆ, ಹಾವು ಸಿಗಲಿಲ್ಲ. ಆದರೆ ಸಮೀಪದಲ್ಲೇ ಕಂಡ ಹಾವಿನ ಹಿಕ್ಕೆ ಗಮನಿಸಿದ ಅವರು, ಇದು ಕೇವಲ ಒಂದೆರಡು ಗಂಟೆ ಹಳೆಯದು, ಹಾಗಾಗಿ ಹಾವು ಸಮೀಪವೇ ಇರಬಹುದು ಎಂದು ತಿಳಿಸಿದರು. ಆದರೆ ಗಂಟೆಗಟ್ಟಲೆ ಹುಡುಕಿದರೂ ಹಾವು ಮಾತ್ರ ಪತ್ತೆಯಾಗಲಿಲ್ಲ. ಆದರೆ ಬದಲಾಗಿ ಬುಧವಾರ ಬೆಳಗ್ಗೆ ಅವರ ಮನೆಯಿಂದ ಸ್ವಲ್ಪವೇ ದೂರದ ಮನೆಯೊಂದರ ಕಾಂಪೌಂಡ್ ನಲ್ಲಿ ಕಾಳಿಂಗ ಸರ್ಪ ಪತ್ತೆಯಾಯಿತು. ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಯಿತು. ಬಳಿಕ ಅರಣ್ಯ ಇಲಾಖೆಯ ಹಾವು ಹಿಡಿಯುವವರಾದ ಅಭಿಷೇಕ ಆಗಮಿಸಿ ಹಾವನ್ನು ಹಿಡಿದರು. ಕಾರಿನೊಳಗೆ ಸೇರಿಕೊಂಡು ಇದು ಸುರಕ್ಷಿತವಾಗಿ ಇಲ್ಲಿಗೆ ತಲುಪಿರಬಹುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಮನೆಯಲ್ಲೇ ಟೆನಿಸ್ ಆಟಗಾರ್ತಿ ರಾಧಿಕಾ ಯಾದವಗೆ ಗುಂಡಿಕ್ಕಿ ಕೊಂದ ತಂದೆ....!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement