ಬಿಹಾರ : ಖಾತೆ ಬದಲಾಯಿಸಿದ ಕೆಲವೇ ಗಂಟೆಗಳಲ್ಲಿ ಸಚಿವ ಸ್ಥಾನಕ್ಕೆ ಕಾರ್ತಿಕ್ ಕುಮಾರ್ ರಾಜೀನಾಮೆ

ಪಾಟ್ನಾ : ಅಪಹರಣ ಪ್ರಕರಣದಲ್ಲಿ ಆರೋಪಿ ಎಂದು ಹೆಸರಿಸಲಾದ ಬಿಹಾರದ ಸಚಿವ ಮತ್ತು ಆರ್‌ಜೆಡಿ ನಾಯಕ ಕಾರ್ತಿಕ್ ಕುಮಾರ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ ಅಂಗೀಕರಿಸಿ ರಾಜ್ಯಪಾಲರಿಗೆ ರವಾನಿಸಿದ್ದಾರೆ.
ಕಾರ್ತಿಕ್ ಕುಮಾರ್ ಅವರನ್ನು ಕಾನೂನು ಸಚಿವ ಸ್ಥಾನದಿಂದ ತೆಗೆದು ಇಂದು, ಬುಧವಾರ ಬೆಳಿಗ್ಗೆ ಕಬ್ಬು ಸಚಿವರನ್ನಾಗಿ ಮಾಡಿದ ನಂತರ ಅವರ ರಾಜೀನಾಮೆ ಬಂದಿದೆ. ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಅವರ ವಿರುದ್ಧ ಆಕ್ರೋಶ ಹೆಚ್ಚುತ್ತಿರುವ ನಡುವೆಯೇ ಅವರ ಖಾತೆಯನ್ನು ಬದಲಾವಣೆ ಮಾಡಲಾಗಿತ್ತು.
ಬಿಹಾರದ ಮಹಾಘಟಬಂಧನ್ ಸರ್ಕಾರದ ಪ್ರಮುಖ ಮಿತ್ರ ಪಕ್ಷವಾದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ-ಲೆನಿನಿಸ್ಟ್) ಲಿಬರೇಶನ್ (CPIML), ಕಾರ್ತಿಕ್ ಕುಮಾರ್ ಅವರನ್ನು ಸಂಪುಟದಲ್ಲಿ ಕಾನೂನು ಸಚಿವರನ್ನಾಗಿ ನೇಮಿಸುವ ನಿರ್ಧಾರವನ್ನು ನಿತೀಶ್ ಕುಮಾರ್ ಮತ್ತು ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಪರಿಶೀಲಿಸಬೇಕೆಂದು ಒತ್ತಾಯಿಸಿತು. ಆಡಳಿತಾರೂಢ ಮಹಾಮೈತ್ರಿಕೂಟದ ಮತ್ತೊಂದು ಘಟಕವಾದ ಕಾಂಗ್ರೆಸ್ ಕೂಡ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೇಳಿಕೊಂಡಿತ್ತು.

ಕಾರ್ತಿಕಕುಮಾರ್ ರಾಜೀನಾಮೆಯನ್ನು ಕಳುಹಿಸಿದ ಕೆಲವೇ ನಿಮಿಷಗಳಲ್ಲಿ, ಬಿಜೆಪಿಯ ಸುಶೀಲ್ ಮೋದಿ – ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದವರಲ್ಲಿ ಮೊದಲಿಗರು – “ಮೊದಲ ವಿಕೆಟ್ ಈಗಷ್ಟೇ ಬಿದ್ದಿದೆ. ಇನ್ನು ಹಲವು ವಿಕೆಟ್‌ಗಳು ಬೀಳಲಿವೆ” ಎಂದು ಟ್ವೀಟ್ ಮಾಡಿದ್ದಾರೆ. ಈ ತಿಂಗಳ ಆರಂಭದಲ್ಲಿ ಜೆಡಿಯು ಮೈತ್ರಿಯಿಂದ ಹೊರನಡೆದ ನಂತರ ಬಿಜೆಪಿ ಮತ್ತು ನಿತೀಶ್ ಕುಮಾರ್ ನಡುವೆ ಅಂತರ ಹೆಚ್ಚಿದೆ. ಲಾಲು ಯಾದವ್ ಆರ್‌ಜೆಡಿ ಜೊತೆ ಸೇರಿ ನಿತೀಶಕುಮಾರ ಮತ್ತೆ ಸೇರಿ ಸರ್ಕಾರ ರಚಿಸಿದ್ದಾರೆ.
ಹಿಂದಿನ ದಿನ, ಆರ್‌ಜೆಡಿ ನಾಯಕನ ಕ್ರಿಮಿನಲ್ ಪೂರ್ವಾಪರಗಳ ಬಗ್ಗೆ ತೀವ್ರವಾಗಿ ಟೀಕಿಸಿದ ಬಿಜೆಪಿ, ವಿವಾದಾತ್ಮಕ ಸಚಿವರ ಇಲಾಖೆಯನ್ನು ಬದಲಾಯಿಸಿದ್ದಕ್ಕಾಗಿ ನಿತೀಶ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿತು. ಬಿಜೆಪಿ ವಕ್ತಾರ ಅರವಿಂದ್ ಕುಮಾರ್ ಸಿಂಗ್, ನಿತೀಶ್ ಕುಮಾರ್ ಅವರಿಗೆ ತಮ್ಮ ಸಂಪುಟದಿಂದ ಕಳಂಕಿತ ಸಚಿವರನ್ನು ತೆಗೆದುಹಾಕುವ ಧೈರ್ಯವೇ ಇಲ್ಲ. ಎಂದು ಹೇಳಿತ್ತು.
2

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ ; ಮತ್ತೊಂದು ಕ್ಷೇತ್ರದಿಂದಲೂ ರಾಹುಲ್‌ ಗಾಂಧಿ ಸ್ಪರ್ಧೆ

014ರ ಅಪಹರಣ ಪ್ರಕರಣದಲ್ಲಿ ಕಾರ್ತಿಕ್ ಕುಮಾರ್ ವಿರುದ್ಧ ಅರೆಸ್ಟ್ ವಾರೆಂಟ್ ಬಾಕಿ ಇದೆ ಎಂದು ಆರೋಪಿಸಿ ಕಾರ್ತಿಕ್ ಕುಮಾರ್ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಬಿಜೆಪಿ ಒತ್ತಾಯಿಸಿತ್ತು. ಈ ವಿಷಯದಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ಅವರನ್ನು ಕಾಂಗ್ರೆಸ್ ಒತ್ತಾಯಿಸಿತ್ತು.
ಏಪ್ರಿಲ್‌ನಲ್ಲಿ ಬಿಹಾರದ ವಿಧಾನ ಪರಿಷತ್‌ಗೆ ಚುನಾಯಿತರಾದ ಕಾರ್ತಿಕ್ ಕುಮಾರ್ ಡಾನ್-ರಾಜಕಾರಣಿ ಅನಂತ್ ಸಿಂಗ್ ನಿಕಟವರ್ತಿ ಎಂದು ಪರಿಗಣಿಸಲ್ಪಟ್ಟಿದ್ದಾರೆ. ಅವರು ಆರ್‌ಜೆಡಿ ಟಿಕೆಟ್‌ನಲ್ಲಿ ಪಾಟ್ನಾದಿಂದ ಚುನಾವಣೆಯಲ್ಲಿ ಗೆದ್ದರು. ಅವರು ಬಿಹಾರದ ಕಾನೂನು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಮಯದಲ್ಲಿ ಅಪಹರಣ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ನ್ಯಾಯಾಲಯವು ಅವರ ವಿರುದ್ಧ ಬಂಧನ ವಾರಂಟ್ ಹೊರಡಿಸಿತು.

4 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement