ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಬಂಧನವಾದ ಮುರುಘಾ ಶರಣರಿಗೆ 14 ದಿನಗಳ ನ್ಯಾಯಾಂಗ ಬಂಧನ

ಚಿತ್ರದುರ್ಗ: ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರನ್ನು ನ್ಯಾಯಾಧೀಶರು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿ ಗುರುವಾರ ರಾತ್ರಿ ಆದೇಶ ನೀಡಿದ್ದಾರೆ.
ರಾತ್ರಿ 10 ಗಂಟೆಗೆ ಮುರುಘಾ ಶರಣರನ್ನು ವಶಕ್ಕೆ ಪಡೆದುಕೊಂಡ ಪೊಲೀಸರು, ಮಧ್ಯರಾತ್ರಿ 2 ಗಂಟೆಗೆ 1ನೇ ಹೆಚ್ಚುವರಿ ಸೆಷನ್ಸ್​ ಕೋರ್ಟ್​ನ ನ್ಯಾಯಾಧೀಶೆ ಹಾಗೂ ಮ್ಯಾಜಿಸ್ಟ್ರೇಟ್ ಕೋಮಲಾ ಅವರ ಮುಂದೆ ಹಾಜರುಪಡಿಸಿದರು. ವಿಚಾರಣೆಗಾಗಿ ಮುರುಘಾ ಶರಣರನ್ನು 10 ದಿನಗಳ ಅವಧಿಗೆ ಪೊಲೀಸ್‌ ವಶಕ್ಕೆ ನೀಡಬೇಕು ಎಂದು ಕೋರಿ ಪೊಲೀಸರು ನ್ಯಾಯಾಲಯಕ್ಕೆ ಶುಕ್ರವಾರ ಮನವಿ ಮಾಡುವ ಸಾಧ್ಯತೆಯಿದೆ. .

ಇಂದು ನ್ಯಾಯಾಲಯದ ಕಲಾಪದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಪ್ರಕರಣದ 2ನೇ ಆರೋಪಿ ಹಾಸ್ಟೆಲ್​ನ ವಾರ್ಡನ್ ರಶ್ಮಿಯ ವಿಚಾರಣೆ ಮುಂದುವರಿಯಲಿದೆ. ಪ್ರಕರಣದ ಇತರ ಮೂವರು ಆರೋಪಿಗಳ ಚಲನವಲನದ ಮೇಲೆ ಪೊಲೀಸರು ನಿಗಾ ಇರಿಸಿದ್ದು, ಯಾವಾಗ ಬೇಕಾದರೂ ಅವರ ಬಂಧನವಾಗಬಹುದು ಎಂದು ಹೇಳಲಾಗಿದೆ.
ಮುರುಘಾ ಶರಣರನ್ನುರಾತ್ರಿ 2:50ರ ಸುಮಾರಿಗೆ ಅವರನ್ನು ಜೈಲಿಗೆ ಕರೆತರಲಾಯಿತು. ಜೈಲಿನಲ್ಲಿ ರಾತ್ರಿ ನಿದ್ದೆ ಮಾಡದ ಮುರುಘಾ ಶರಣರು ಮೌನಕ್ಕೆ ಶರಣಾಗಿದ್ದರು. ಮಠದ ಪರ ವಕಾಲತ್ತು ಹಾಕಿರುವ ವಕೀಲ ಉಮೆಶ್ ಅವರು ಔಷಧಿ, ಬ್ರೆಶ್, ಟೂತ್​ಪೇಸ್ಟ್ ಅನ್ನು ಜೈಲಿನ ಸಿಬ್ಬಂದಿಗೆ ಕೊಟ್ಟು ತೆರಳಿದರು.
ಎಫ್​ಐಆರ್ ದಾಖಲಾದ 6 ದಿನಗಳ ಬಳಿಕ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದರು. ಜಿಲ್ಲಾಸ್ಪತ್ರೆಯಲ್ಲಿ ಮುರುಘಾ ಶ್ರೀಗಳ ಆರೋಗ್ಯ ತಪಾಸಣೆ ಮಾಡಲಾಗಿದೆ.ವೈದ್ಯರು ವರದಿ ನೀಡಿದ ನಂತರ ಸ್ವಾಮೀಜಿಯನ್ನು ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಲಾಯಿತು.

ಪ್ರಮುಖ ಸುದ್ದಿ :-   ಗದಗ: ನಗರಸಭೆ ಅಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement