ಮದುವೆ ನಂತರ ತೂಕ ಹೆಚ್ಚಾಗಿದ್ದಕ್ಕೆ ಪತ್ನಿಗೆ ತಲಾಖ್ ನೀಡಿದ ಗಂಡ…!

ಮೀರತ್: ಮದುವೆಯ ನಂತರ ತೂಕ ಹೆಚ್ಚಾಗಿದ್ದರಿಂದ ತನ್ನ ಪತಿ ತನಗೆ ‘ತ್ರಿವಳಿ ತಲಾಖ್’ ನೀಡಿದ್ದಾನೆ ಎಂದು ಮುಸ್ಲಿಂ ಮಹಿಳೆಯೊಬ್ಬಳು ದೂರು ನೀಡಿದ್ದಾರೆ.
ಮೀರತ್ ನಿವಾಸಿ 28 ವರ್ಷದ ನಜ್ಮಾ ಬೇಗಂ ಎಂಬವರು ತನ್ನ ದೂರಿನಲ್ಲಿ ಮದುಬೆ ನಂತರ ನನ್ನ ತೂಕ ಹೆಚ್ಚಾಗಿದ್ದಕ್ಕೆ ಪತಿ ತನಗೆ ತಲಾಖ್‌ ನೀಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಮೊಹಮ್ಮದ್ ಸಲ್ಮಾನ್ ನನ್ನು ಮದುವೆಯಾಗಿ ಎಂಟು ವರ್ಷಗಳಾಗಿವೆ. ಮದುವೆಯ ನಂತರದ ವರ್ಷಗಳಲ್ಲಿ ನನ್ನ ತೂಕ ಹೆಚ್ಚಿದೆ. ಇದರಿಂದ ನನ್ನ ಪತಿ ನನ್ನ ಹಿಂಸಿಸಲು ಪ್ರಾರಂಭಿಸಿದನು ಎಂದು ನಜ್ಮಾ ಆರೋಪಿಸಿದ್ದಾರೆ.

ನಜ್ಮಾ ಬೇಗಂ ದೂರಿನ ಮೇರೆಗೆ, ಪೊಲೀಸರು ಸಲ್ಮಾನ್ ವಿರುದ್ಧ ಮುಸ್ಲಿಂ ಮಹಿಳಾ (ವಿವಾಹದ ಹಕ್ಕುಗಳ ರಕ್ಷಣೆ) ಕಾಯ್ದೆ, 2019 ರ ಸೆಕ್ಷನ್ 3/4 ಮತ್ತು ಐಪಿಸಿಯ ಸಂಬಂಧಿತ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿದೆ. ಕಿಥೋರ್ ಪ್ರದೇಶದಲ್ಲಿರುವ ತನ್ನ ಪತಿ ತನ್ನನ್ನು ಮನೆಯಿಂದ ಹೊರಹಾಕಿದ್ದಾನೆ ಎಂದು ಆರೋಪಿಸಿರುವ ಮಹಿಳೆ ಕಳೆದ ತಿಂಗಳಿನಿಂದ ತನ್ನ ಹೆತ್ತವರೊಂದಿಗೆ ವಾಸಿಸುತ್ತಿರುವುದಾಗಿ ಹೇಳಿದ್ದಾರೆ.

ಆಗಸ್ಟ್ 28 ರಂದು ಸಲ್ಮಾನ್ ಇತರ ಐದು ಜನರೊಂದಿಗೆ ನನ್ನ ಹೆತ್ತವರ ಮನೆಗೆ ಬಂದು ನನ್ನ ಥಳಿಸಿದ್ದಾನೆ ಎಂದು ಮಹಿಳೆ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊತ್ವಾಲಿ ಮೀರತ್ ವೃತ್ತ ಅಧಿಕಾರಿ ಅರವಿಂದ್ ಕುಮಾರ್ ಚೌರಾಸಿಯಾ ಅವರು “ತನಿಖೆ ನಡೆಯುತ್ತಿದೆ ಮತ್ತು ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು” ಎಂದು ಹೇಳಿದ್ದರೆ.

ಪ್ರಮುಖ ಸುದ್ದಿ :-   ಪಾಕಿಸ್ತಾನದ 19 ವರ್ಷದ ಹುಡುಗಿಗೆ ಹೊಸ ಜೀವನ ನೀಡಿದ 'ಭಾರತದ ಹೃದಯ' ....!

3 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement