ರಾಜ್ಯದ 31 ಪ್ರಾಥಮಿಕ, ಹೈಸ್ಕೂಲ್ ಶಿಕ್ಷಕರು, 10 ಕಾಲೇಜು ಉಪನ್ಯಾಸಕರಿಗೆ `ಉತ್ತಮ ಶಿಕ್ಷಕ’ ಪ್ರಶಸ್ತಿ ಪ್ರಕಟ : ಯಾವ ಜಿಲ್ಲೆಯ ಯಾರಿಗೆ ಪ್ರಶಸ್ತಿ? ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯ ಪ್ರಶಸ್ತಿ ಪಡೆದ ಶಿಕ್ಷಕರ ಪಟ್ಟಿಯನ್ನು ಶಿಕ್ಷಣ ಇಲಾಖೆ ಪ್ರಕಟಿಸಿದೆ. ಈ ಬಾರಿ 20 ಪ್ರಾಥಮಿಕ ಹಾಗೂ 11 ಪ್ರೌಢ ಶಾಲಾ ಶಿಕ್ಷಕರನ್ನು ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಅಲ್ಲದೆ ಸರ್ಕಾರಿ ಮತ್ತು ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಇಬ್ಬರು ಪ್ರಾಂಶುಪಾಲರು ಮತ್ತು 8 ಉಪನ್ಯಾಸಕರನ್ನು ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗಾಗಿ ಪ್ರಾಥಮಿಕ ಶಾಲಾ ವಿಭಾಗದಿಂದ 20 ಶಿಕ್ಷಕರು ಮತ್ತು ಪ್ರೌಢ ಶಾಲಾ ವಿಭಾಗದಿಂದ 11 ಶಿಕ್ಷಕರನ್ನು 2022-23ನೇ ಸಾಲಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
2022-23ನೇ ಸಾಲಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾಗಿರುವ ಶಿಕ್ಷಕಿಯರಿಗೆ ಅಕ್ಷರ ಮಾತೆ ಸಾವಿತ್ರಿಬಾಯಿ ಪುಲೆ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ರಾಜ್ಯ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರು, ಮುಖ್ಯ ಶಿಕ್ಷಕರು, ವಿಶೇಷ ಶಿಕ್ಷಕರುಗಳಿಗೆ ತಲಾ 10 ಸಾವಿರ ನಗದು ಪುರಸ್ಕಾರವನ್ನು ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಮತ್ತು ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿಯಿಂದ ನೀಡಲಾಗುತ್ತದೆ ಎಂದು ತಿಳಿಸಿದೆ.
2022-23ನೇ ಸಾಲಿನ ರಾಜ್ಯ ಪ್ರಶಸ್ತಿ ಪಡೆದ ಶಿಕ್ಷಕ, ಉಪನ್ಯಾಸಕ, ಪ್ರಾಂಶುಪಾಲರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನ ವಿಧಾನಸೌಧದಲ್ಲಿನ ಬ್ಯಾಂಕ್ವೆಟ್ ಹಾಲ್ ನಲ್ಲಿ ಕೋವಿಡ್ ಮಾರ್ಗಸೂಚಿ ಅನುಸರಿಸಿ ಸೆಪ್ಟೆಂಬರ್‌ 05ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಿಕ್ಷಣ ಸಚಿವರ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.
ಪ್ರಶಸ್ತಿ ಪುರಸ್ಕೃತ ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರ ಹಾಗೂ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರು, ಉಪನ್ಯಾಸಕರ ಪಟ್ಟಿ

ಪ್ರಮುಖ ಸುದ್ದಿ :-   ಸಿಎಂ ಸಿದ್ದರಾಮಯ್ಯ ಹೇಳಿಕೆಯಿಂದ ನಮ್ಮ ಮನೆತನದ ಗೌರವ ಹಾಳಾಗುತ್ತಿದೆ : ನೇಹಾ ತಂದೆ ನಿರಂಜನ ಹಿರೇಮಠ

ಪ್ರಾಥಮಿಕ ಶಾಲಾ ವಿಭಾಗ

ಮಂಜುನಾಥ ಶಂಕರಪ್ಪ ಮುಂಗೂಣಿ – ಧಾರವಾಡ
ಅಮಿತಾನಂದ ಹೆಗ್ಡೆ – ದಕ್ಷಿಣ ಕನ್ನಡ
ಹೆಚ್.ಎಲ್.ಚಂದ್ರಶೇಖರ – ಚಿಕ್ಕಬಳ್ಳಾಪುರ
ಅಪ್ಪಸಾಹೇಬ ವಸಂತಪ್ಪ ಗಿರೆಣ್ಣವರ – ಚಿಕ್ಕೋಡಿ
ಶಿವಾನಂಪ್ಪ ಬಿ. – ಶಿವಮೊಗ್ಗ
ಹುಸೇನಸಾಬ್ – ಕಲಬುರಗಿ
ಕೆ.ವಿ.ಸುದರ್ಶನ – ಬೆಂಗಳೂರು ಉತ್ತರ
ಕೊಟ್ರಪ್ಪ ವಿರೂಪಾಕ್ಷಪ್ಪ ಮೇಲ್ಮುರಿ – ಹಾವೇರಿ
ಸಂಜೀವ ದೇವಾಡಿಗ – ಉಡುಪಿ
ಫಿರೆಂಗಪ್ಪ ಸಿದ್ದಪ್ಪ ಕಟ್ಟಿಮನಿ – ಬಾಗಲಕೋಟೆ
ಚಂದ್ರಕಲಾ – ಯಾದಗಿರಿ
ನಿರಂಜನ ಪಿ.ಜೆ – ವಿಜಯನಗರ
ಸುಶೀಲಬಾಯಿ – ಬೆಳಗಾವಿ
ವಿದ್ಯಾ ಕಂಪಾಪೂರ ಮಠ – ಕೊಪ್ಪಳ
ಬಸವರಾಜ ಜಾಡರ – ರಾಯಚೂರು
ಗಂಗಾಧರಪ್ಪ ಬಿ.ಆರ್. – ಚಿಕ್ಕಮಗಳೂರು
ಚಂದ್ರಶೇಖರ ರೆಡ್ಡಿ – ಮಧುಗಿರಿ ಶೈಕ್ಷಣಿಕ ಜಿಲ್ಲೆ
ಸುಧಾಕರ ಗಣಪತಿ – ಶಿರಸಿ
ಈಶ್ವರಪ್ಪ ಅಂದಾನಪ್ಪ ರೇವಡಿ – ಗದಗ
ಕವಿತಾ ಈ. – ಚಿತ್ರದುರ್ಗ


ಪ್ರೌಢಶಾಲಾ ವಿಭಾಗ

ಮಹೇಶ್.ಕೆ.ಎನ್-ಚಿತ್ರದುರ್ಗ
ಇಬ್ರಾಹಿಂ- ಕೊಡಗು
ರಘು-ಶಿವಮೊಗ್ಗ
ಭೀಮಪ್ಪ- ರಾಯಚೂರು
ರಾಧಾಕೃಷ್ಣ- ದಕ್ಷಿಣ ಕನ್ನಡ
ನಾರಾಯಣ ಪರಮೇಶ್ವರ- ಶಿರಸಿ
ಅರುಣಾ ಜೂಡಿ- ಕೊಪ್ಪಳ
ಸುನೀಲ ಪರೀಟ-ಬೆಳಗಾವಿ
ಬಾಲಸುಬ್ರಹ್ಮಣ್ಯ- ಮಂಡ್ಯ
ಡಾ.ಚೇತನ್ ಬಣಕಾರ್- ವಿಜಯನಗರ
ಕೀರ್ತಿ ಬಸಪ್ಪ- ಚಿಕ್ಕಬಳ್ಳಾಪುರ

ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರು, ಉಪನ್ಯಾಸಕರು

ಪ್ರಮುಖ ಸುದ್ದಿ :-   ಗದಗ: ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ

ನಾಗಣ್ಣ ಜಿ-ಪ್ರಾಂಶುಪಾಲರು-ಬೆಂಗಳೂರು ದಕ್ಷಿಣ
ಸತೀಶ ಬೊಮ್ಮಯ್ಯ ನಾಯಕ-ಪ್ರಾಂಶುಪಾಲರು-ಕುಮಟಾ (ಉತ್ತರ ಕನ್ನಡ)
ಆರ್‌.ಬಿ.ಚಂದ್ರಶೇಖರ-ಭೂಗೋಳ ಶಾಸ್ತ್ರ ಉಪನ್ಯಾಸಕರು-ತುಮಕೂರು
ಉಮೇಶ ಎಂ.ಎನ್‌.-ಇತಿಹಾಸ ಉಪನ್ಯಾಸಕರು-ಬೆಂಗಳೂರು ಉತ್ತರ
ಮಹಾವೀರ ಸಿಂಗ್‌ ರಜಪೂತ-ರಾಜ್ಯಶಾಸ್ತ್ರ ಉಪನ್ಯಾಸಕರು-ವಿಜಯಪುರ
ಕೆ.ಮಲ್ಲಮ್ಮ-ಅರ್ಥಶಾಸ್ತ್ರ ಉಪನ್ಯಾಸಕರು-ಬಸವಕಲ್ಯಾಣ-ಬೀದರ
ಶಿವಾನಂದ ಎಂ.ಕಲ್ಲೂರ-ಭೌತಶಾಸ್ತ್ರ ಉಪನ್ಯಾಸಕರು-ಗದಗ
ಶ್ರೀಶೈಲ ಕೋಲಾರ-ಸಮಾಜಶಾಸ್ತ್ರ ಉಪನ್ಯಾಸಕರು-ಕೆರೂರು-ಚಿಕ್ಕೋಡಿ
ಉದಯಕುಮಾರ ಎಂ.ಪಿ.-ಗಣೀತಶಾಸ್ತ್ರ ಉಪನ್ಯಾಸಕರು-ಬೈಂದೂರು-ಉಡುಪಿ
ಸದಾನಂದ ಆರ್‌-ಆಂಗ್ಲಭಾಷಾ ಉಪನ್ಯಾಸಕರು-ಹುಣಸೂರು-ಮೈಸೂರು

4.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement