14,500 ಶಾಲೆಗಳ ಅಭಿವೃದ್ಧಿ, ಉನ್ನತೀಕರಣ: ಶಿಕ್ಷಕರ ದಿನದಂದು ಪ್ರಧಾನಿ ಮೋದಿ ಘೋಷಣೆ

ನವದೆಹಲಿ: ಶಿಕ್ಷಕರ ದಿನಾಚರಣೆ ದಿನದಂದು ಪ್ರಧಾನ ಮಂತ್ರಿ ರೈಸಿಂಗ್ ಇಂಡಿಯಾ (PM-SHRI) ಯೋಜನೆಯಡಿ ದೇಶದ 14,500 ಶಾಲೆಗಳ ಅಭಿವೃದ್ಧಿ ಮತ್ತು ಉನ್ನತೀಕರಣ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮೋದಿ, ಶಿಕ್ಷಕರ ದಿನಾಚರಣೆ ಈ ದಿನ ಪ್ರಧಾನಿ ಮಂತ್ರಿ ರೈಸಿಂಗ್ ಇಂಡಿಯಾ ಯೋಡನೆ ಅಡಿಯಲ್ಲಿ ಭಾರತದ 14,500 ಶಾಲೆಗಳ ಅಭಿವೃದ್ಧಿ ಹಾಗೂ ಉನ್ನತೀಕರಣ ಮಾಡಲಾಗುತ್ತಿದೆ. ಈ ಶಾಲೆಗಳು ಸಂಪೂರ್ಣವಾಗಿ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದ್ದಾರೆ.

ಪಿಎಂ ಶ್ರೀ (PM-SHRI) ಯೋಜನೆಯಡಿ ಅಭಿವೃದ್ಧಿ ಮಾಡಲಾಗುತ್ತಿರುವ ಶಾಲೆಗಳು ಹೇಗಿರಲಿದೆ ಎಂಬ ಬಗ್ಗೆ ಮಾಹಿತಿ ನೀಡಿರುವ ಮೋದಿಯವರು, ಆಧುನಿಕ ಶಾಲೆ ಶಿಕ್ಷಣಗಳು(Modern Education), ಪರಿವರ್ತನೆಯ ಹಾಗೂ ಸಮಗ್ರ ವಿಧಾನವನ್ನು ಉನ್ನತೀಕರಿಸಿದ ಶಾಲೆಗಳು ಹೊಂದಲಿದೆ. ಆವಿಷ್ಕಾರ ಆಧಾರಿತ ಭೋದನೆ ಮಾರ್ಗಕ್ಕೆ ಒತ್ತು ನೀಡಲಾಗುತ್ತದೆ. ತಂತ್ರಜ್ಞಾನ, ಸ್ಮಾರ್ಟ್ ಕ್ಲಾಸ್‌ರೂಮ್, ಕ್ರೀಡೆ ಸೇರಿದಂತೆ ಹಲವು ವಿಧಗಳ ಪಠ್ಯ ಹಾಗೂ ಪಠ್ಯೇತರ ಚುಟುವಟಿಕೆ, ತರಬೇತಿಗಳನ್ನು ಈ ಶಾಲೆಗಳಲ್ಲಿ ನೀಡಲಾಗುತ್ತದೆ ಎಂದು ಮೋದಿ ಹೇಳಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ(NEP)ಯಿಂದ ಭಾರತದ ಶಿಕ್ಷಣ ಕ್ಷೇತ್ರ ಪರಿವರ್ತನೆಯಾಗುತ್ತಿದೆ. ಈಗ 14,500 ಶಾಲೆಗಳ ಅಭಿವೃದ್ಧಿ ಮತ್ತು ಉನ್ನತೀಕರಣದಿಂದ ದೇಶದ ಲಕ್ಷಾನುಗಟ್ಟಲೆ ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಮತದಾನಕ್ಕೂ ಮುನ್ನವೇ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ...!

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement