ಐಟಿ ದಿಗ್ಗಜ ಗೂಗಲ್​ನಲ್ಲಿ ಹೊಸಬರಿಗೆ ಉದ್ಯೋಗಾವಕಾಶ; ವಾರ್ಷಿಕ 10 ಲಕ್ಷ ರೂ.ಗಳ ಪ್ಯಾಕೇಜ್​

ಐಟಿ ದೈತ್ಯ ಗೂಗಲ್​ (Google India) ಭಾರತದಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿದೆ. ಮಹಾರಾಷ್ಟ್ರದ ಪುಣೆ ಕಚೇರಿಯಲ್ಲಿ ಈ ನೇಮಕಾತಿ ನಡೆಯಲಿದ್ದು, ಟೆಕ್ನಿಕಲ್​ ಸೊಲ್ಯೂಷನ್​ ಇಂಜಿನಿಯರ್ ಹುದ್ದೆ ಭರ್ತಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ. ಬಿಸಿಎ, ಬಿಎಸ್ಸಿ ಮತ್ತು ಬಿಇ ಪದವಿ ಹೊಂದಿರುವ 2020, 21 ಮತ್ತು 2022ರ ಬ್ಯಾಚ್​ ಪದವಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.
ಗೂಗಲ್​​ನ ಗೂಗಲ್​ ಕ್ಲೌಡ್​ಗೆ ಈ ನೇಮಕಾತಿ ನಡೆಸಲಾಗುತ್ತಿದ್ದು, ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಸಂಸ್ಥೆ-ಗೂಗಲ್​ ಇಂಡಿಯಾ
ಹುದ್ದೆ- ಟೆಕ್ನಿಕಲ್​ ಸೊಲ್ಯೂಷನ್​ ಇಂಜಿನಿಯರ್​ (ಗೂಗಲ್​ ಕ್ಲೌಡ್​​​)
ಒಟ್ಟು ಸಂಖೆಯಗಳು-ನಿಗದಿ ಪಡಿಸಿಲ್ಲ
ಕಾರ್ಯ ನಿರ್ವಹಣೆ ಸ್ಥಳ -ಪುಣೆ
ಸಂಬಳ-10 ಲಕ್ಷ ರೂ.ಗಳ ವಾರ್ಷಿಕ ವೇತನ

ಶೈಕ್ಷಣಿಕ ಅರ್ಹತೆ: ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತಶಾಸ್ತ್ರದಲ್ಲಿ ಪದವಿ.
Java, C, C++, Python, Shell, Perl, JavaScript ಹಾಗೂ ಕೋಡ್​ ರಿಡೀಂಗ್​ ಮತ್ತು ಡೀಬಗ್​ ಅನುಭವ ಹೊಂದಿರಬೇಕು.
ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ಸಲಹಾ ಕಾರ್ಯದ ಅನುಭವ ಹೊಂದಿರಬೇಕು.
ಹುದ್ದೆ ಜವಾಬ್ದಾರಿ
ಕ್ಲೌಡ್ ಆಧಾರಿತ ಸರ್ವರ್‌ಲೆಸ್, ಸ್ಟೋರೇಜ್ ಮತ್ತು ಡೆವಲಪರ್ ತಂತ್ರಜ್ಞಾನಗಳ ಅನುಭವ. ವೆಬ್ ಅಥವಾ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿ
ಅಪ್ಲಿಕೇಶನ್ ಎಂಜಿನ್, ಮುಕ್ತ ಮೂಲ ಸಾಫ್ಟ್‌ವೇರ್, ಕ್ಲೌಡ್ ನೆಟ್‌ವರ್ಕಿಂಗ್ ಸಲ್ಯೂಷನ್​ ಮಾಡುವುದು. ಡೇಟಾಬೇಸ್, ಡೇಟಾಬೇಸ್ ಸ್ಕೀಮಾ ವಿನ್ಯಾಸ,ಲಿನಕ್ಸ್/ಯುನಿಕ್ಸ್ ಅಥವಾ ವಿಂಡೋಸ್ ಸಿಸ್ಟಮ್‌, ನೆಟ್​​ವರ್ಕ್​ ನಿರ್ವಹಣೆ ಜ್ಞಾನ ಹೊಂದಿರಬೇಕು

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ 2024 : 2ನೇ ಹಂತದ 88 ಕ್ಷೇತ್ರಗಳಲ್ಲಿ 63% ಮತದಾನ

ಅರ್ಜಿ ಸಲ್ಲಿಕೆ: ಆನ್​ಲೈನ್​ ಮೂಲಕ
ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಸಂದರ್ಶನ

ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ: ಇಲ್ಲಿ ಕ್ಲಿಕ್ ಮಾಡಿ- Technical Solutions Engineer, Platform, Google Cloud – Google – Pune, Maharashtra, India – Google Careers

ಬಳಿಕ ಪಿಡಿಎಫ್/ಎಂಎಸ್ ವರ್ಡ್ ಫಾರ್ಮ್ಯಾಟ್ ಮೂಲಕ ರೆಸ್ಯೂಮ್‌ ಅಪ್ಲೋಡ್ ಮಾಡಬೇಕು.
ಅಧಿಕೃತ ವೆಬ್‌ಸೈಟ್: google.com

 

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement