ಮೈಮೇಲೆ ರೈಲು ಹಾಯ್ದು ಹೋದರೂ ಬುದ್ಧಿ ಉಪಯೋಗಿಸಿ ಅಪಾಯದಿಂದ ಪಾರಾದ ರೈಲು ಹಳಿ ಮೇಲೆ ಬಿದ್ದ ಪ್ರಯಾಣಿಕ : ದೃಶ್ಯ ಸಿಸಿಟಿವಿಯಲ್ಲಿ ಸೆರೆ

ರೈಲು ಬರುತ್ತಿರುವ ವೇಳೆ ಹಳಿ ದಾಟಲು ಹೋಗಿ ಜೀವಕ್ಕೆ ಕಂಟಕ ತಂದುಕೊಂಡ ಹಲವು ಘಟನೆಗಳು ನಡೆದಿದೆ. ಈಗ ರೈಲ್ವೆ ಅನಾಹುತವೊಂದರಿಂದ ವ್ಯಕ್ತಿಯೊಬ್ಬ ಕೂದಲೆಳೆ ಅಂತರದಲ್ಲಿ ಪವಾಡ ಸದೃಶವಾಗಿ ಪಾರಾದ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರೈಲಿನ ಪ್ಲಾಟ್‌ಫಾರ್ಮ್‌ ಹಾಗೂ ರೈಲು ಹಳಿಯ ನಡುವಿನ ಜಾಗದಲ್ಲಿ ವ್ಯಕ್ತಿಯೊಬ್ಬ ಬಿದ್ದಿದ್ದಾನೆ. ಅಷ್ಟರಲ್ಲೇ ರೈಲೊಂದು ಹಾಯ್ದು ಹೋಗಿದೆ. ಆತ ಧೃತಿ ಗೆಡದೆ ಆತ ಬುದ್ಧಿ ಉಪಯೋಗಿಸಿದ್ದು, ರೈಲು ಹಳಿಯ ಮೇಲೆಯೇ ತಕ್ಷಣವೇ ಮಲಗಿಕೊಂಡಿದ್ದಾನೆ. ಇದರಿಂದ ಆಗುವ ಅನಾಹುತ ತಪ್ಪಿದೆ.

ಈ ಘಟನೆ ಉತ್ತರಪ್ರದೇಶದ ಇತ್ವಾಹ್‌ ಜಿಲ್ಲೆಯ ಭರ್ತಾನ್‌ ರೈಲು ನಿಲ್ದಾಣದಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಂಗಳವಾರ ಬೆಳಗ್ಗೆ 9:45 ರ ಸುಮಾರಿಗೆ ಭರ್ತಾನ್ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ ಎರಡರ ಸಮೀಪ ರೈಲ್ವೆ ಹಳಿ ಮೇಲೆ ವ್ಯಕ್ತಿ ಬಿದ್ದಾನೆ. ಈ ಈ ವೇಳೆ ಆಗ್ರಾದಿಂದ ಹೊರಟ ಸೂಪರ್‌ ಫಾಸ್ಟ್ ಇಂಟರ್‌ಸಿಟಿ ರೈಲು ಭರ್ತಾನ್ ರೈಲು ನಿಲ್ದಾಣ ತಲುಪಿ ಹಳಿ ಮೇಲೆ ಹೋಗಿದೆ.ಕೆಳಗೆ ಬಿದ್ದ ವ್ಯಕ್ತಿ, ಕೆಲ ವರದಿಗಳ ಪ್ರಕಾರ, ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ ಹಳಿ ಮೇಲೆ ಬಿದ್ದಿದ್ದಾನೆ. ಆತನ ಅದೃಷ್ಟ ಚೆನ್ನಾಗಿದ್ದು, ಹಳಿಯ ಮೇಲೆ ಹಾಗೆಯೇ ನೆಟ್ಟಗೆ ಮಲಗುವ ಮೂಲಕ ಅನಾಹುತದಿಂದ ಪಾರಾಗಿದ್ದಾನೆ.

ಪ್ರಮುಖ ಸುದ್ದಿ :-   ಭಾರತೀಯ ನೌಕಾಪಡೆಯ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ದಿನೇಶ ತ್ರಿಪಾಠಿ ನೇಮಕ

ಈ ಘಟನೆಯ ದೃಶ್ಯವೆಲ್ಲವೂ ರೈಲು ನಿಲ್ದಾಣದಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಈತ ಕೆಳಗೆ ಬಿದ್ದಿದ್ದನ್ನು ನೋಡಿ ಪ್ಲಾಟ್‌ಫಾರ್ಮ್ ತುಂಬೆಲ್ಲಾ ಜನ ಸೇರಿರುವುದನ್ನು ಕಾಣಬಹುದು. ರೈಲು ಹೋದ ನಂತರ ನಂತರ ಟ್ರ್ಯಾಕ್‌ನಲ್ಲಿ ಮಲಗಿದ್ದ ವ್ಯಕ್ತಿ ಮೇಲೆದ್ದು ಕೈ ಮಗಿದು ತನ್ನ ಬ್ಯಾಗ್‌ನ್ನು ಎತ್ತಿಕೊಂಡು ಆ ಸ್ಥಳದಿಂದ ಹೊರಟು ಹೋಗುವುದನ್ನು ಕಾಣಬಹುದು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement