1993ರ ಮುಂಬೈ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್‌ ಸಮಾಧಿಗೆ ಅಲಂಕಾರ: ಹಿಂದಿನ ಎಂವಿಎ ಸರ್ಕಾರ ದೂಷಿಸಿದ ಬಿಜೆಪಿ

ಮುಂಬೈ: 1993ರ ಮುಂಬೈ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್ ಸಮಾಧಿಯನ್ನು ಮಾರ್ಬಲ್ ಬಾರ್ಡರ್ ಮತ್ತು ಎಲ್ಇಡಿ ಲೈಟಿಂಗ್‌ನೊಂದಿಗೆ ನವೀಕರಿಸಲಾಗಿದೆ ಎಂದು ಹೇಳಲಾಗಿದ್ದು, ಅದನ್ನು ‘ಸುಂದರಗೊಳಿಸಲಾಗಿದೆ’ ಎಂದು ವರದಿಯಾಗಿದೆ.
ಭಾರತೀಯ ಜನತಾ ಪಕ್ಷ (ಬಿಜೆಪಿ) ಪ್ರಕಾರ, ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅಧಿಕಾರದಲ್ಲಿದ್ದಾಗ ಮತ್ತು ಶಿವಸೇನೆ, ಕಾಂಗ್ರೆಸ್ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಸಮ್ಮಿಶ್ರ ಮಹಾ ವಿಕಾಸ್ ಆಗಾಡಿ ಸರ್ಕಾರವು ರಾಜ್ಯದ ಉಸ್ತುವಾರಿ ವಹಿಸಿದ್ದಾಗ ಇದನ್ನು ನಡೆಸಲಾಯಿತು. ಯಾಕೂಬ್ ಮೆನನ್ ಸಮಾಧಿಯನ್ನು ದೇಗುಲವಾಗಿ ಪರಿವರ್ತಿಸಿದಾಗ ಉದ್ಧವ್ ಠಾಕ್ರೆ ಏಕೆ ಮೌನವಾಗಿದ್ದರು ಎಂದು ಬಿಜೆಪಿ ನಾಯಕ ರಾಮ್ ಕದಂ ತಮ್ಮ ಟ್ವೀಟ್‌ನಲ್ಲಿ ಉದ್ಧವ್‌ ಠಾಕ್ರೆ ಅವರನ್ನು ಪ್ರಶ್ನಿಸಿದ್ದಾರೆ.

ಆ ಸಮಯದಲ್ಲಿ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿದ್ದರು. ಪಾಕಿಸ್ತಾನದ ನಿರ್ದೇಶನದ ಮೇರೆಗೆ 1993 ರ ಮುಂಬೈ ಬಾಂಬ್ ದಾಳಿ ನಡೆಸಿದ ಕುಖ್ಯಾತ ಭಯೋತ್ಪಾದಕ ಯಾಕೂಬ್ ಮೆಮನ್ ಸಮಾಧಿ ಇದಾಗಿದೆ. ಉದ್ಧವ್ ಠಾಕ್ರೆ, ಶರದ್ ಪವಾರ್ ಮತ್ತು ರಾಹುಲ್ ಗಾಂಧಿ ಮುಂಬೈ ಜನರ ಕ್ಷಮೆಯಾಚಿಸಬೇಕು ಎಂದು ರಾಮ್ ಕದಮ್ ಒತ್ತಾಯಿಸಿದ್ದಾರೆ.
ಆದರೆ, ಸುದ್ದಿ ತಿಳಿದ ಮುಂಬೈ ಪೊಲೀಸರು ಗುರುವಾರ ಬೆಳಗ್ಗೆ ಯಾಕೂಬ್ ಸಮಾಧಿಯಲ್ಲಿದ್ದ ದೀಪಗಳನ್ನು ತೆಗೆದಿದ್ದಾರೆ. 1993 ರ ಮುಂಬೈ ಬಾಂಬ್ ಸ್ಫೋಟದಲ್ಲಿ ಹಣಕಾಸಿನ ಸಹಾಯ ಮಾಡಿದ್ದಕ್ಕಾಗಿ ಯಾಕೂಬ್ ಮೆಮನ್‌ಗೆ ಶಿಕ್ಷೆ ವಿಧಿಸಲಾಯಿತು. ಜುಲೈ 30, 2015 ರಂದು, ಆತನನ್ನು ನಾಗ್ಪುರ ಕೇಂದ್ರ ಕಾರಾಗೃಹದಲ್ಲಿ ಗಲ್ಲಿಗೇರಿಸಲಾಯಿತು. ಯಾಕೂಬ್‌ನ ಸಹೋದರ ಟೈಗರ್ ಮೆಮೊನ್ ಭಯೋತ್ಪಾದಕ ಕೃತ್ಯದ ಪ್ರಮುಖ ಶಂಕಿತರಲ್ಲಿ ಒಬ್ಬ. ಈತ ಪರಾರಿಯಾಗಿದ್ದು, ಈತನ ಸುಳಿವು ನೀಡಿದವರಿಗೆ ಎನ್‌ಐಎ ಹದಿನೈದು ಲಕ್ಷ ರೂ.ಗಳನ್ನು ಘೋಷಿಸಿದೆ.

ಪ್ರಮುಖ ಸುದ್ದಿ :-   ಮಣಿಪುರ : ಮತಗಟ್ಟೆ ಮೇಲೆ ಗುಂಡಿನ ದಾಳಿ; ದಿಕ್ಕಾ ಪಾಲಾಗಿ ಓಡಿದ ಮತದಾರರು

2 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement