ಸೆಪ್ಟೆಂಬರ್ 12ಕ್ಕೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ: ಸಚಿವ ನಾಗೇಶ

ಬೆಂಗಳೂರು: ಕರ್ನಾಟಕ ಪದವಿ ಪೂರ್ವ ಪರೀಕ್ಷಾ ಮಂಡಳಿಯು ಕರ್ನಾಟಕ ದ್ವಿತೀಯ ಪಿಯುಸಿ ಪೂರಕ ಫಲಿತಾಂಶವನ್ನು ಸೆಪ್ಟೆಂಬರ್ 12ರಂದು ಪೂರಕ ಪರೀಕ್ಷೆಯ ಫಲಿತಾಂಶಗಳನ್ನು ಸೋಮವಾರ ಬೆಳಿಗ್ಗೆ 11 ಗಂಟೆಗೆ ಪ್ರಕಟಿಸಲಾಗುತ್ತದೆ. ಕರ್ನಾಟಕ ದ್ವಿತೀಯ ಪಿಯುಸಿ ಪೂರಕ ಫಲಿತಾಂಶಗಳು 2022 ರ ಬಿಡುಗಡೆಯ ದಿನಾಂಕ ಮತ್ತು ಸಮಯವನ್ನು ಕರ್ನಾಟಕದ ಶಾಲಾ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರು ಟ್ವೀಟ್ ಮೂಲಕ ಪ್ರಕಟಿಸಿದ್ದಾರೆ.
ಪೂರಕ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು karresults.nic.in ನಲ್ಲಿ Karresults ನ ಅಧಿಕೃತ ಸೈಟ್ ಮೂಲಕ ಫಲಿತಾಂಶಗಳನ್ನು ಪರಿಶೀಲಿಸಬಹುದು.
ಈ ಮದೊಲು ಪರೀಕ್ಷೆಯ ಫಲಿತಾಂಶದ ಲಿಂಕ್ ಅನ್ನು 8 ಸೆಪ್ಟೆಂಬರ್ 2022 ರಂದು Karresults ನ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ ಎಂದು ಹೇಳಲಾಗಿತ್ತು.  ಆದಾಗ್ಯೂ, ಫಲಿತಾಂಶದ ಲಿಂಕ್ ಅನ್ನು ಈಗ ವೆಬ್‌ಸೈಟ್‌ನಿಂದ ತೆಗೆದುಹಾಕಲಾಗಿದೆ.

ಕರ್ನಾಟಕ ದ್ವಿತೀಯ ಪಿಯುಸಿ ಪೂರಕ ಫಲಿತಾಂಶಗಳು 2022 ರ ಬಿಡುಗಡೆಯ ದಿನಾಂಕ ಮತ್ತು ಸಮಯವನ್ನು ಕರ್ನಾಟಕದ ಶಾಲಾ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರು ಟ್ವೀಟ್ ಮೂಲಕ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಟ್ವೀಟ್‌ನಲ್ಲಿ, “ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶವನ್ನು ಸೆಪ್ಟೆಂಬರ್ 12 ರಂದು ಪ್ರಕಟಿಸಲಾಗುವುದು. ಫಲಿತಾಂಶವು 11 ಗಂಟೆಯ ನಂತರ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ ಎಂದು ಟ್ವೀಟ್‌ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

ಪೂರಕ ಪರೀಕ್ಷೆಯನ್ನು ಆಗಸ್ಟ್ 2022 ರಲ್ಲಿ ನಡೆಸಲಾಯಿತು. ಮುಖ್ಯ ಪರೀಕ್ಷೆಯಲ್ಲಿ ಅರ್ಹತೆ ಪಡೆಯದ ಅಭ್ಯರ್ಥಿಗಳು ಪೂರೈಕೆ ಪರೀಕ್ಷೆಗೆ ಹಾಜರಾಗಲು ಅರ್ಹರಾಗಿದ್ದರು. ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗೆ 1,85,270 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು
ಈ ವರ್ಷ ಕರ್ನಾಟಕ ದ್ವಿತೀಯ ಪಿಯಿಸಿ ಫಲಿತಾಂಶಗಳನ್ನು ಜೂನ್ 18, 2022 ರಂದು ಪ್ರಕಟಿಸಲಾಯಿತು. ಒಟ್ಟು 61.88% ವಿದ್ಯಾರ್ಥಿಗಳು ಪರೀಕ್ಷೆಯನ್ನು ತೇರ್ಗಡೆಗೊಳಿಸಿದ್ದಾರೆ. ಹೆಚ್ಚಿನ ಸಂಬಂಧಿತ ವಿವರಗಳಿಗಾಗಿ ಅಭ್ಯರ್ಥಿಗಳು PUE, ಕರ್ನಾಟಕದ ಅಧಿಕೃತ ಸೈಟ್ ಅನ್ನು ಪರಿಶೀಲಿಸಬಹುದು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement