ಸಫಾರಿ ವಾಹನ ಅಟ್ಟಿಸಿಕೊಂಡು ಬಂದ ಕಾಡಾನೆ : ಭಯದಲ್ಲಿ ನಡುಗಿದ ಪ್ರವಾಸಿಗರು | ವೀಕ್ಷಿಸಿ

ಕಾಡು ಪ್ರಾಣಿಗಳಿಗೆ ಕಿರಿಕಿರಿಯಾದರೆ ಅದರ ಪರಿಣಾಮವೂ ಅಷ್ಟೇ ಗಂಭೀರವಾಗಿರುತ್ತದೆ. ಕೆಲವೊಮ್ಮೆ ಸಫಾರಿ ಸಂದರ್ಭದಲ್ಲೂ ಭಯಾನಕ ಪರಿಸ್ಥಿತಿ ಎದುರಾಗುತ್ತದೆ. ಇದೀಗ, ಅಂತಹದ್ದೇ ಇನ್ನೊಂದು ವಿಡಿಯೋ ವೈರಲ್ ಆಗುತ್ತಿದೆ.
ಕಾಡಾನೆಯೊಂದು ವಾಹನದತ್ತ ನುಗ್ಗಿ ಓಡೋಡಿ ಬರುವ ಈ ದೃಶ್ಯ ಒಂದು ಕ್ಷಣ ಎದೆ ಧಗ್ ಎನ್ನವಂತೆ ಮಾಡುತ್ತದೆ. ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸಾಕೇತ್ ಬಡೋಲಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಕೋಪಗೊಂಡ ಆನೆಯೊಂದು ಸಫಾರಿ ಜೀಪ್‌ ಮುಂಭಾಗದಲ್ಲಿ ಓಡೋಡಿ ಬರುತ್ತಿರುವ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಆನೆ ಓಡೋಡಿ ಬರುತ್ತಿದ್ದಂತೆಯೇ ತೆರೆದ ಸಫಾರಿ ವಾಹನದ ಚಾಲಕ ವಾಹನವನ್ನು ರಿವರ್ಸ್‌ನಲ್ಲಿ ಚಲಾಯಿಸಿದ್ದಾರೆ. ಆದರೂ ಆನೆ ಈ ಒಂದಷ್ಟು ದೂರ ಕೂಗುತ್ತ ವಾಹನವನ್ನು ಅಟ್ಟಿಸಿಕೊಂಡು ಬಂದಿದೆ. ಆನೆ ದಾಳಿ ಮಾಡಿಯೇ ಬಿಟ್ಟಿತೋ ಎಂದು ವಾಹನದಲ್ಲಿದ್ದವರು ಗಾಬರಿಯಾಗರುವುದು ಕಂಡುಬರುತ್ತದೆ. ಆದರೆ, ಒಂದಷ್ಟು ದೂರ ಅಟ್ಟಿಸಿಕೊಂಡು ಬಂದ ಆನೆ ಬಳಿಕ ಕಾಡಿನತ್ತ ಹೋಗುತ್ತದೆ.

ಇದರಿಂದ ವಾಹನದ ಚಾಲಕ ಸೇರಿ ಪ್ರವಾಸಿಗರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. `ಚಾಲಕನ ಕೌಶಲ್ಯ ಮತ್ತು ಈ ಪರಿಸ್ಥಿತಿಯಲ್ಲೂ ಶಾಂತವಾಗಿ ಎದುರಿಸಿದ್ದ ಪರಿಗೆ ಹಲವು ಪ್ರಶಂಸಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ 2ನೇ ಹಂತದ ಮತದಾನ : ಶ್ರೀಮಂತ ಅಭ್ಯರ್ಥಿ ₹ 622 ಕೋಟಿ ಒಡೆಯ, ಅತ್ಯಂತ ಬಡ ಅಭ್ಯರ್ಥಿ ಬಳಿ ಇರುವುದು ಕೇವಲ...

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement