ಹರಾಜಿನಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹೈದರಾಬಾದ್‌ನ ಬಾಲಾಪುರದ ಗಣಪನ ಲಡ್ಡು

ಹೈದರಾಬಾದ್: ಹೈದರಾಬಾದ್​ನ ಬಾಲಾಪುರದಲ್ಲಿ ಒಂಬತ್ತು ದಿನಗಳವರೆಗೆ ನಡೆಯುವ ಗಣೇಶೋತ್ಸವದಲ್ಲಿ ಪ್ರತಿ ವರ್ಷವೂ ಗಣೇಶನಿಗೆ ಇಟ್ಟ ಲಡ್ಡು ದಾಖಲೆ ಪ್ರಮಾಣದಲ್ಲಿ ಇಲ್ಲಿ ಹರಾಜಾಗುತ್ತದೆ. ಇಲ್ಲಿ 9ನೇ ದಿನ ಗಣೇಶ ಲಡ್ಡುವಿನ ಹರಾಜು ನಡೆಯುತ್ತದೆ.
ಕಳೆದ ವರ್ಷ 18.90 ಲಕ್ಷ ರೂ.ಗಳಿಗೆ ಲಡ್ಡು ಮಾರಾಟವಾಗಿತ್ತು. ಆದರೆ ಈ ಬಾರಿ ಹಿಂದಿನ ಎಲ್ಲಾ ದಾಖಲೆಗಳನ್ನೂ ಮುರಿದು ಲಡ್ಡು ಅತಿ ಹೆಚ್ಚಿನ ಬೆಲೆಗೆ ಮಾರಾಟವಾಗಿದೆ. ಈ ವರ್ಷ 24.60 ಲಕ್ಷ ರೂಪಾಯಿಗೆ ಲಡ್ಡು ಖರೀದಿಯಾಗಿದ್ದು, ಇದರ ಅರ್ಥ ಕಳೆದ ವರ್ಷಕ್ಕಿಂತ 5.70 ಲಕ್ಷ ರೂಪಾಯಿ ಹೆಚ್ಚಿನ ಬೆಲೆಗೆ ಲಡ್ಡು ಮಾರಾಟವಾಗಿದೆ. ಬಾಲಾಪುರ ಗಣೇಶ ಉತ್ಸವ ಕಮೀಟಿ ಸದಸ್ಯ ವಂಗೇಟಿ ಲಕ್ಷ್ಮಾರೆಡ್ಡಿ ಎನ್ನುವವರು ಈ ದಾಖಲೆ ಮೊತ್ತಕ್ಕೆ ಲಡ್ಡು ಖರೀದಿಸಿದ್ದಾರೆ.

ಈ ವರ್ಷದ ಲಡ್ಡು 21 ಕೆಜಿ ತೂಕವಿದ್ದು, ಇದನ್ನು ಖರೀದಿ ಮಾಡಿದವರ ಜೀವನದಲ್ಲಿ ಅದೃಷ್ಟ, ಆರೋಗ್ಯ ಮತ್ತು ಸಮೃದ್ಧಿ ಬರುತ್ತದೆ ಎಂದು ನಂಬಿಕೆಯಿದೆ. ಈ ಲಡ್ಡು ಖರೀದಿಗೆ ಅಕ್ಕಪಕ್ಕದ ರಾಜ್ಯಗಳಿಂದಲೂ ಜನ ಬರುತ್ತಾರೆ. ಅತಿಹೆಚ್ಚಿನ ಮೊತ್ತದ ಬಿಡ್​ ಕೂಗಿದವರಿಗೆ ಲಡ್ಡು ನೀಡಲಾಗುತ್ತದೆ. ಹರಾಜಿನಿಂದ ಬಂದ ಮೊತ್ತವನ್ನು ಬಾಲಾಪುರದ ದೇವಸ್ಥಾನ ಮತ್ತು ಇತರ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುತ್ತದೆ.
ಲಡ್ಡು ಹರಾಜಿನ ಸಂಪ್ರದಾಯವು ಶುರುವಾದದ್ದು 1994ರಲ್ಲಿ. ಹರಾಜು ಪ್ರಕ್ರಿಯೆಯು 10-15 ನಿಮಿಷಗಳವರೆಗೆ ನಡೆಯುತ್ತದೆ. ಹರಾಜನ್ನು 2100 ರೂಪಾಯಿಗಳಿಂದ ಆರಂಭಿಸಲಾಗುತ್ತದೆ. ಹರಾಜಿಗೂ ಮುನ್ನ ಗಣೇಶನಿಗೆ ಪೂಜೆ ಸಲ್ಲಿಸಿದ ನಂತರ ಬೆಳಗ್ಗೆ 5:30ರ ಸುಮಾರಿಗೆ ಗಣೇಶನ ಮೆರವಣಿಗೆ ಆರಂಭವಾಗುತ್ತದೆ. ಇದು ಸುಮಾರು ಮೂರು ಗಂಟೆಗಳ ಕಾಲ ಬಾಲಾಪುರ ಗ್ರಾಮದ ಓಣಿ ಮತ್ತು ಬೈಲೇನ್‌ಗಳಲ್ಲಿ ಹಾದು ಬೆಳಗ್ಗೆ 8.30 ಕ್ಕೆ ದೇವಸ್ಥಾನವನ್ನು ತಲುಪುತ್ತದೆ. ಈ ಸಂದರ್ಭದಲ್ಲಿ ಹರಾಜು ಆರಂಭಿಸಲಾಗುತ್ತದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ನನ್ನ ಬಳಿ ಹಣವಿಲ್ಲ : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

 

4.3 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement