ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ: ಶೇ.37.08 ವಿದ್ಯಾರ್ಥಿಗಳು ಉತ್ತೀರ್ಣ

ಬೆಂಗಳೂರು: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶ ಇಂದು, ಸೋಮವಾರ ಪ್ರಕಟವಾಗಿದೆ. ಆಯಾ ಕಾಲೇಜುಗಳಲ್ಲೂ ಫಲಿತಾಂಶ ಪ್ರಕಟವಾಗಲಿದ್ದು, ವಿದ್ಯಾರ್ಥಿಗಳು https://www.karresults.nic.in ವೆಬ್​ಸೈಟ್​ನಲ್ಲಿ ಫಲಿತಾಂಶ ನೋಡಬಹುದಾಗಿದೆ.
ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗೆ 1,75,905 ವಿದ್ಯಾರ್ಥಿಗಳು ಹಾಜರಾಗಿದ್ದರು. ಅದರಲ್ಲಿ 65,233 ವದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅವರಲ್ಲಿ 36,637 ವಿದ್ಯಾರ್ಥಿಗಳು ಹಾಗೂ 28,596 ವಿದ್ಯಾರ್ಥಿನಿಯರಾಗಿದ್ದಾರೆ.
ತೇರ್ಗಡೆಯಾಗಿರುವವರ ಒಟ್ಟಾರೆ ಶೇಕಡಾವಾರು ಫಲಿತಾಂಶ 37.08 ಆಗಿದ್ದು, ವಿದ್ಯಾರ್ಥಿಗಳು ಶೇ. ಶೇ.34.91 ಉತ್ತೀಋಣರಾದರೆ ವಿದ್ಯಾರ್ಥಿನಿಯರು ಶೇ.40.30. ಉತ್ತೀರ್ಣರಾಗಿದ್ದಾರೆ. ಹೆಚ್ಚಿನ ಮಾಹಿತಿ, ಮರು ಪೌಲ್ಯಮಾಪನ ಹಾಗೂ ಮರುಎಣಿಕೆ ಇತ್ಯಾದಿ ಮಾಹಿತಿಗೆ ಇಲಾಖೆ ವೆಬ್‌ಸೈಟ್‌ ನೋಡಬಹದಾಗಿದೆ.

3 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ದಾಖಲು

ನಿಮ್ಮ ಕಾಮೆಂಟ್ ಬರೆಯಿರಿ

advertisement