ಒಂದು ಕುಂಬಳಕಾಯಿ 47 ಸಾವಿರ ರೂಪಾಯಿಗೆ ಮಾರಾಟ….!

ತಿರುವನಂತಪುರ: ಕೇರಳದಲ್ಲಿ 5 ಕೆ.ಜಿ ಇರುವ ಒಂದು ಕುಂಬಳಕಾಯಿ ಬೆಲೆ 47 ಸಾವಿರ ರೂ.ಗಳಿಗೆ ಮಾರಾಟವಾಗಿದೆ…!
ಕೇರಳದ ಇಡುಕ್ಕಿಯ ಗುಡ್ಡಗಾಡು ಪ್ರದೇಶದ ವಲಸೆ ಗ್ರಾಮವಾದ ಚೆಮ್ಮನ್ನಾರ್‌ನಲ್ಲಿ ನಡೆದ ಸಾರ್ವಜನಿಕ ಹರಾಜಿನಲ್ಲಿ ಒಂದು ಕುಂಬಳಕಾಯಿ 47 ಸಾವಿರ ರೂಪಾಯಿಗೆ ಮಾರಾಟವಾಗಿದೆ.
ಇದು ಈ ಬಾರಿಯ ಓಣಂ ಹಬ್ಬದ ವಿಶೇಷತೆಯಾಗಿದೆ. ಕೇರಳದಲ್ಲಿ ಓಣಂ ಹಬ್ಬವನ್ನು ಎಲ್ಲ ಧರ್ಮೀಯರೂ ಸೇರಿ ಆಚರಿಸುತ್ತಾರೆ. ಈ ವರ್ಷ ಓಣಂ ಹಬ್ಬದ ಆಚರಣೆಯ ಹಿನ್ನೆಲೆಯಲ್ಲಿ ಕುಂಬಳಕಾಯಿ ಹರಾಜಿಗೆ ಇಟ್ಟಿದ್ದರು. ಸಂಘಟಕರಿಗೆ ಈ ಕುಂಬಳಕಾಯಿಯನ್ನು ಅಲ್ಲಿನ ಸ್ಥಳೀಯರೊಬ್ಬರು ಉಚಿತವಾಗಿ ನೀಡಿದ್ದರು. ಇದನ್ನೇ ಸಂಘಟಕರು ಹರಾಜಿನಲ್ಲಿ ಇಟ್ಟಾಗ 47 ಸಾವಿರ ರೂ.ಗಳಿಗೆ ದಾಖಲೆ ಮೊತ್ತಕ್ಕೆ ಮಾರಾಟವಾಯಿತು.

ಸಾಮಾನ್ಯವಾಗಿ ಅಲ್ಲಿ ನಡೆಯುವ ಹರಾಜಿನಲ್ಲಿ ಟಗರು, ಹುಂಜ ಮುಂತಾದವು 10 ಸಾವಿರ ರೂಪಾಯಿಗೂ ಅಧಿಕ ಬೆಲೆಗೆ ಮಾರಾಟವಾಗುತ್ತಿತ್ತು.ಈ ಸಲ ಐದು ಕೇಜಿ ತೂಕದ ಕುಂಬಳಕಾಯಿ ಇದಕ್ಕಿಂತಲೂ ಹೆಚ್ಚಿನ ಬೆಲೆಗೆ ಮಾರಾಟವಾಗಿದ್ದು ಒಂದು ದಾಖಲೆಯಾಗಿದೆ. ಓಣಂ ಹಬ್ಬದಂದು ಖರೀದಿ ಮಾಡುವ ಯಾವುದೇ ವಸ್ತುಗಳು ಶುಭದ ಸಂಕೇತ ಎಂಬ ನಂನಿಕೆ ಕಾರಣದಿಂದ ವಸ್ತುಗಳ ಹರಾಜಿನಲ್ಲಿ ದುಬಾರಿ ಬೆಲೆಗೆ ಖರೀದಿಯಾಗುತ್ತದೆ. ಈ ವೇಳೆ ಬಿಡ್ಡಿಂಗ್‌ನಲ್ಲೇ ವಿಜೇತರು ಕುಂಬಳಕಾಯಿಯನ್ನು ಹಿಡಿದುಕೊಂಡು ಅಲ್ಲೇ ಪ್ರೇಕ್ಷಕರೆದರು ನರ್ತಿಸಿದರು.

ಪ್ರಮುಖ ಸುದ್ದಿ :-   ಭಾರತದ ಆಕಾಶದಲ್ಲಿಲ್ಲ ಮಳೆ ತರುವ ಮೋಡಗಳು ; ಆತಂಕಕಾರಿ ವಾಸ್ತವ ಬಿಂಬಿಸಿದ 3 ಉಪಗ್ರಹಗಳ ಚಿತ್ರಗಳು ; ಇದಕ್ಕೆ ಕಾರಣಗಳೇನು?

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement