ಹಸಿವೆ ನೀನೆಷ್ಟು ಕ್ರೂರ…: ಭಾರೀ ಮಳೆಯ ನಡುವೆಯೇ ಆಹಾರ ತಿನ್ನುತ್ತಿರುವ ಹಸಿದ ವ್ಯಕ್ತಿ | ವೀಕ್ಷಿಸಿ

ಭಾರೀ ಮಳೆಯ ನಡುವೆ ವ್ಯಕ್ತಿಯೊಬ್ಬ ಊಟ ಮಾಡುತ್ತಿರುವ ಮನಕಲಕುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜಿಂದಗಿ ಗುಲ್ಜಾರ್ ಹೈ ಎಂಬ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವೀಡಿಯೊದಲ್ಲಿ ಒಬ್ಬ ವ್ಯಕ್ತಿಯು ಸುರಿಯುತ್ತಿರುವ ಮಳೆಯಲ್ಲಿ ಊಟ ಮಾಡುತ್ತಿರುವುದನ್ನು ಕಾಣಬಹುದು. ಇದು ನೋಡಿದವರ ಕಣ್ಣಂಚಿನಲ್ಲಿ ನೀರು ತರಿಸುವಂತಿದೆ.ತನ್ನ ಊಟ ಮಳೆಗೆ ಕೆಡದಂತೆ ರಕ್ಷಿಸಿಸಲು ತಟ್ಟೆಯನ್ನು ಸ್ಕೂಟರ್ ಅಡಿಯಲ್ಲಿ ಇಟ್ಟಿದ್ದನ್ನು ಈ ವಿಡಿಯೋದಲ್ಲಿ ಕಾಣಬಹುದು.

ಈ ಬದುಕಿನಲ್ಲಿ ಅದೆಷ್ಟೋ ಜನ ಅನ್ನ ಇಲ್ಲದೆ ಇಲ್ಲದೆ ಪರಿತಪಿಸಿದ ಉದಾಹರಣೆಗಳಿವೆ. ಈ ವಿಡಿಯೋ ಆ ವ್ಯಕ್ತಿಗೆ ಎಷ್ಟು ಹಸಿವಾಗಿರಬೇಕು ಎಂಬುದನ್ನು ಸೂಚಿಸುವಂತಿದೆ.ಓ ದೇವರೇ ನಾನು ನಿನ್ನ ಏನೆಲ್ಲ ಕೇಳಿರಬಹದು ಗೊತ್ತಿಲ್ಲ, ಆದರೆ ಈ ದೃಶ್ಯವನ್ನು ನೋಡಿದ ನಂತರ ನಾನು ಬೇಡಿದೆಲ್ಲವನ್ನು ಈಡೇರಿಸದಿದ್ದರು ಪರವಾಗಿಲ್ಲ, ಆದರೆ ಯಾರಿಗೂ ಹಸಿವಿನ ಸಂಕಷ್ಟ ನೀಡಬೇಡ ಎಂದು ಈ ಪೋಸ್ಟ್‌ನ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

https://twitter.com/Gulzar_sahab/status/1568881316166520839?ref_src=twsrc%5Etfw%7Ctwcamp%5Etweetembed%7Ctwterm%5E1568881316166520839%7Ctwgr%5E105e1126935028de5038124f0437be7d6f25312a%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fheartbreaking-video-of-man-eating-food-amid-heavy-rains-goes-viral-1999734-2022-09-13

ಈ ವೀಡಿಯೋ ನೋಡಿದ ನಂತರ ಅನೇಕ ಕಾಮೆಂಟ್ ಮಾಡಿದ್ದಾರೆ, ಜೊತೆಗೆ ಶೇರ್ ಮಾಡಿದ್ದಾರೆ. ನಮ್ಮ ದೇಶದಲ್ಲಿ ಈಗಲೂ ಇಂತಹ ಸ್ಥಿತಿ ಇದೆ ಎಂಬುದಕ್ಕೆ ಇದು ಸಾಕ್ಷಿ ಎಂದು ಹಲವರು ಹೇಳಿದ್ದಾರೆ. ನನಗೆ ಪದಗಳಿಲ್ಲ, ಇದು ತುಂಬಾ ದುಃಖವಾಗಿದೆ” ಎಂದುಮತ್ತೊಬ್ಬರು ಬರೆದಿದ್ದಾರೆ. “ಹಸಿವು ಕ್ರೂರವಾಗಿದೆ” ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಗಿರ್‌ ಸೋಮನಾಥದ ಹೆದ್ದಾರಿಯಲ್ಲಿ ವಾಹನಗಳನ್ನು ನಿಲ್ಲಿಸಿದ 2 ಸಿಂಹಿಣಿಗಳು, 8 ಸಿಂಹದ ಮರಿಗಳ ಗುಂಪು-ವೀಕ್ಷಿಸಿ

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement