ಎಸ್‌ಬಿಐನ 5008 ಜೂನಿಯರ್‌ ಕ್ಲರ್ಕ್‌ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಕೆ ಆರಂಭ: ಪದವಿಧರರು ಅರ್ಜಿ ಸಲ್ಲಿಸಬಹುದು

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಕ್ಲರಿಕಲ್ ಕೇಡರ್‌ನಲ್ಲಿ ಜೂನಿಯರ್ ಅಸೋಸಿಯೇಟ್ ( ಕಸ್ಟಮರ್‌ ಸಪೋರ್ಟ್‌ ಮತ್ತು ಸೇಲ್ಸ್) ಹುದ್ದೆಗಳಿಗೆ ಅರ್ಜಿ‌ ಸ್ವೀಕರಿಸುವ ಪ್ರಕ್ರಿಯೆ ಪ್ರಾರಂಭಿಸಿದೆ. ದೇಶಾದ್ಯಂತ 5008 ಹುದ್ದೆಗಳಿಗೆ ಅಧಿಸೂಚನೆಯನ್ನು ಎಸ್‌ಬಿಐ ಪ್ರಕಟಿಸಿದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳುಎಸ್‌ಬಿಐ ವೆಬ್‌ಸೈಟ್‌ನ ಕರಿಯರ್ಸ್‌ ಪೋರ್ಟಲ್, sbi.co.in ಅಥವಾ ibpsonline.ibps.in ನಲ್ಲಿ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 27 ಆಗಿದೆ. ಕನ್ನಡಿಗರಿಗೂ ಬೆಂಗಳೂರು ವೃತ್ತದಲ್ಲಿ 400ರಷ್ಟು ಉದ್ಯೋಗಾವಕಾಶವಿದೆ. ಅರ್ಜಿ ಸಲ್ಲಿಕೆಗೆ sbi.co.in ನಲ್ಲಿ ಅವಕಾಶ ಕಲ್ಪಿಸಲಾಗಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 20ರಿಂದ 28 ವರ್ಷದೊಳಗಿನ ವಯೋಮಾನದವರಾಗಿರಬೇಕು. ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿರುವ ಅಥವಾ ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಇಂಟಿಗ್ರೇಟೆಡ್ ಡ್ಯುಯಲ್ ಡಿಗ್ರಿ (IDD) ಪ್ರಮಾಣಪತ್ರವನ್ನು ಹೊಂದಿರುವ ಅಭ್ಯರ್ಥಿಗಳು, ತಾವು ಉತ್ತೀರ್ಣರಾದ ದಿನಾಂಕವು ಈ ವರ್ಷದ ನವೆಂಬರ್ 30 ರಂದು ಅಥವಾ ಅದಕ್ಕಿಂತ ಮೊದಲಿನದ್ದು ಇದೆ ಎಂದು ಖಚಿತಪಡಿಸಿಕೊಳ್ಳಬೇಕು.
ಆಯ್ಕೆ ಪ್ರಕ್ರಿಯೆಯು ಆನ್‌ಲೈನ್ ಪರೀಕ್ಷೆ (ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆ) ಮತ್ತು ನಿರ್ದಿಷ್ಟಪಡಿಸಿದ ಸ್ಥಳೀಯ ಭಾಷೆಯ ಪರೀಕ್ಷೆ ಒಳಗೊಂಡಿರುತ್ತದೆ.
ಸಾಮಾನ್ಯ/ಒಬಿಸಿ/ಇಡಬ್ಲ್ಯೂಎಸ್ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 750 ರೂ.ಗಳು ಹಾಗೂ ಪರಿಶಿಷ್ಟ ಜಾತಿ ಹಾಗೂ ಪಂಗಡ, PwBD/ DESM ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಅರ್ಜಿಯ ಆನ್‌ಲೈನ್ ನೋಂದಣಿ ಪ್ರಾರಂಭ – 07-09-2022
ಅರ್ಜಿಯ ನೋಂದಣಿ ಮುಕ್ತಾಯ- 27-09-2022
ಅಪ್ಲಿಕೇಶನ್ ವಿವರ ಎಡಿಟ್‌ ಮಾಡಲು ಕೊನೇ ದಿನ 27-09-2022
ಆನ್‌ಲೈನ್ ಶುಲ್ಕ ಪಾವತಿ ಅವಧಿ 07-09-2022 ರಿಂದ 27-09-2022
ಎಸ್‌ಬಿಐ ನೋಟಿಫಿಕೇಶನ್‌ ನೇಮಕಾತಿ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್‌ ಮಾಡಿsbi clerk job advt
ಅರ್ಜಿ ಸಲ್ಲಿಕೆಗೆ ಈ ಲಿಂಕ್‌ ಕ್ಲಿಕ್‌ ಮಾಡಿ – SBI Clerk recruitment 2022: Notification & registration link

ಪ್ರಮುಖ ಸುದ್ದಿ :-   ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ 35 ವರ್ಷಗಳಿಂದ ಪಕ್ಷದಲ್ಲಿದ್ದ ಪ್ರಿಯಾಂಕಾ ಗಾಂಧಿ ಆಪ್ತ ತಜೀಂದರ್ ಸಿಂಗ್ ಬಿಟ್ಟು...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement